೧೩ಕೋಟಿ ರೂ.ವೆಚ್ಚ : ಅಭಿವೃದ್ಧಿ ಕೆಲಸಗಳಿಗೆ ಅನುದಾನ ಹಂಚಿಕೆ : ಶಾಸಕ ಸಿ.ಎಸ್.ನಾಡಗೌಡ

Jun 22, 2025 - 22:33
 0
೧೩ಕೋಟಿ ರೂ.ವೆಚ್ಚ : ಅಭಿವೃದ್ಧಿ ಕೆಲಸಗಳಿಗೆ ಅನುದಾನ ಹಂಚಿಕೆ : ಶಾಸಕ ಸಿ.ಎಸ್.ನಾಡಗೌಡ
ಮುದ್ದೇಬಿಹಾಳ ತಾಲ್ಲೂಕು ಕೇಸಾಪೂರ ಕ್ರಾಸ್‌ನಲ್ಲಿ ಭಾನುವಾರ ಲೋಕೋಪಯೋಗಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಹಿರೇಮುರಾಳ-ಕೇಸಾಪೂರ-ಹುನಕುಂಟಿ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ನಾಡಗೌಡ ಭಾಗಿಯಾಗಿದ್ದರು.ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಬಿ.ಅಸ್ಕಿ, ಮುಖಂಡ ಎಂ.ಎಸ್.ದೇಶಮುಖ ಮತ್ತಿತರರು ಇದ್ದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಮುದ್ದೇಬಿಹಾಳ : ಹಿಂದಿನ ಬಿಜೆಪಿ ಸರ್ಕಾರ ಎರಡು ವರ್ಷದಲ್ಲಿ ೨.೨೦ ಲಕ್ಷ ಕೋಟಿ ರೂ.ಬಿಲ್ ಬಾಕಿ ಇರಿಸಿ ಹೋಗಿದ್ದು ಅದನ್ನು ಪಾವತಿಸುವ ಹೊಣೆಯನ್ನು ಕಾಂಗ್ರೆಸ್ ಸರ್ಕಾರದ ಮೇಲಿರಿಸಿ ಹಣಕಾಸಿನ ಅಶಿಸ್ತನ್ನು ತೋರಿಸಿದ್ದಕ್ಕೆ ಎರಡು ವರ್ಷ ಅಭಿವೃದ್ಧಿಗೆ ಅಲ್ಪ ಹಿನ್ನಡೆಯುಂಟಾಗಿದ್ದು ನಿಜ.ಆದರೆ ಈಗ ಅಭಿವೃದ್ದಿ ಕೆಲಸಗಳಿಗೆ ಸರ್ಕಾರ ಅನುದಾನ ಹಂಚಿಕೆ ಮಾಡುತ್ತಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.


ತಾಲ್ಲೂಕು ಕೇಸಾಪೂರ ಕ್ರಾಸ್‌ನಲ್ಲಿ ಭಾನುವಾರ ಲೋಕೋಪಯೋಗಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಹಿರೇಮುರಾಳ-ಹುನಕುಂಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

 
ಸನ್ ೨೦೨೫-೨೬ರ ಆಯವ್ಯಯದಲ್ಲಿ ತಾಲ್ಲೂಕಿನ ನಾಲತವಾಡ-ಆಲೂರ, ಯರಗಲ್-ಕಮಲದಿನ್ನಿ, ಇಂಗಳಗೇರಿ-ಕೂಚಬಾಳ,ಹಡಗಲಿ-ಅಮರಗೋಳ ಸೇರಿದಂತೆ ಹೊಲಮನೆಗಳಿಗೆ ತಿರುಗಾಡುವ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಬೇಡಿಕೆ ಇದ್ದು ಆದ್ಯತೆ ಮೇರೆಗೆ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಹೇಳಿದರು.


ರಾಜ್ಯದ ಪ್ರಗತಿಪಥ ಯೋಜನೆಯಡಿಯಲ್ಲಿ ೩೦ ಕಿ.ಮೀ ರಸ್ತೆ ಅಭಿವೃದ್ಧಿಗೆ ೨೧.೫೦ ಕೋಟಿ ಹಣ ಕೊಡುವುದಾಗಿ ತಿಳಿಸಿದ್ದು ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.ವಿರೋಧ ಪಕ್ಷದವರ ಸುಳ್ಳು ಹೇಳಿಕೆಗಳನ್ನು ಜನರು ನಂಬಬೇಡಿ ಎಂದರು.


ಕೇಸಾಪೂರದ ಮುಖಂಡ ಎಂ.ಎಸ್.ದೇಶಮುಖ,ಕಾAಗ್ರೆಸ್ ಮುಖಂಡ,ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಬಿ.ಅಸ್ಕಿ,ಗ್ಯಾರಂಟಿ ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ತಂಗಡಗಿ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಮರೋಳ,ಮುಖಂಡ ರಾಜುಗೌಡ ಕೊಂಗಿ,ಅಪ್ಪು ನಾಡಗೌಡ, ಹಿರೇಮುರಾಳ ಪಿಕೆಪಿಎಸ್ ಅಧ್ಯಕ್ಷ ಮಲ್ಲನಗೌಡ ಪಾಟೀಲ,ಭೋವಿ ಸಮಾಜದ ಮುಖಂಡ ಶ್ರೀನಿವಾಸ ಗೌಂಡಿ,ಮಹಾ0ತಯ್ಯ ಹಿರೇಮಠ, ನಾಗಯ್ಯ ಹಾಲಗಂಗಾಧರಮಠ,ಗುತ್ತಿಗೆದಾರ ಶ್ರೀಶೈಲ ವಿಭೂತಿ ಮೊದಲಾದವರು ಇದ್ದರು.
----
ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ವಸತಿ ಯೋಜನೆಯಡಿ ಮನೆ ಹಂಚಿಕೆಗೆ ಲಂಚ ಕೊಡಬೇಕು ಎಂಬ ಆಡಿಯೋ ಬಹಿರಂಗಗೊ0ಡಿರುವ ವಿಚಾರದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ನಾಡಗೌಡ,ನಾನು ಆಡಿಯೋ ಕೇಳಿದ್ದೇನೆ. ಅವರ ಕ್ಷೇತ್ರದಲ್ಲಿ ಯಾವನೋ ಒಬ್ಬ ಮಧ್ಯವರ್ತಿ ದಂಧಾ ಚಲ್ ರಹಾ ಕ್ಯಾ ಎಂದು  ಕೇಳಿದ್ದಾನಂತೆ ಅದಕ್ಕೆ ಅವರು ಹೈ ಎಂದಿದ್ದಾರೆ.ಆದರೆ ಇವರು(ಬಿ.ಆರ್.ಪಾಟೀಲರು) ಒನ್‌ವೇ ಮಾತನಾಡಿದ್ದಾರೆ.ಜಮೀರ ಅಹ್ಮದ ಆಪ್ತಸಹಾಯಕರು ಪಾಟೀಲರ ಮಾತಿಗೆ  ಗೊತ್ತಿಲ್ಲ ಎಂದು ಹೇಳಿದ್ದಾರೆ.ನಮ್ಮ ಮತಕ್ಷೇತ್ರದಲ್ಲಿ ಸರ್ಕಾರ ಮನೆ ಕೊಟ್ಟರೆ ಬಡವರಿಗೆ ಕೊಟ್ಟಿರುತ್ತೇವೆ, ಇಲ್ಲದಿದ್ದರೆ ಇಲ್ಲ.ಹಣ ಪಡೆದುಕೊಂಡು ಮನೆ ಕೊಟ್ಟರೆ ಅವರು ನಮಗೆ ಓಟು ಹಾಕುತ್ತಾರೆಯೋ ? ಎಂದು ಪ್ರಶ್ನಿಸಿದ ಅವರು, ಹಿಂದಿನ ಸರ್ಕಾರದಲ್ಲಿ ಕೊನೆಯ ಘಳಿಗೆಯಲ್ಲಿ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿದ್ದರಿಂದಲೇ ಇಂದಗೂ ಅನುಮೋದನೆ ಆಗದೇ ಹಾಗೆ ಉಳಿದುಕೊಂಡಿವೆ ಎಂದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.