ಹಿಪ್ಪರಗಿ ದಂಪತಿಗೆ ಕರುನಾಡು ಗಾನಕೋಗಿಲೆ ಪ್ರಶಸ್ತಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಸಿದ್ದೇಶ್ವರ ಕಲಾ ಭವನದಲ್ಲಿ ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ರಾಷ್ಟಿಯ ಗುಮ್ಮಟ ಉತ್ಸವ-೨೦೨೫ ಪ್ರಶಸ್ತಿ ಸಮಾರಂಭದಲ್ಲಿ ದತ್ತಾತ್ರೇಯ ಹಿಪ್ಪರಗಿ ಅವರಿಗೆ ಯೋಗ ಕ್ಷೇತ್ರದಲ್ಲಿ ಹಾಗೂ ಶ್ರೀಮತಿ ಮಂಜುಳಾ ಹಿಪ್ಪರಗಿ ಅವರಿಗೆ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಕರುನಾಡು ಗಾನಕೋಗಿಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪರಮಪೂಜ್ಯ ಅಭಿನವ ದರೇಶ್ವರ ಮಹಾ ಸ್ವಾಮೀಗಳು ಶ್ರೀ ಜಕ್ಕಮ್ಮ ದೇವಿ ಹಾಗೂ ದರಿದೇವರ ಪುಣ್ಯಶ್ರಮ ಕಟಕಬಾವಿ ಇವರು ಉಪಸ್ಥಿತರಿದ್ದರು.