ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) , ಬೆಂಗಳೂರು ವಿಜಯಪುರ ಜಿಲ್ಲಾ ಘಟಕದ ವತಿಯಿಂದ ೨೦೨೫ ಸಾಲಿನ "ಮಾಧ್ಯಮ ರತ್ನ" ಜಿಲ್ಲಾ ಪ್ರಶಸ್ತಿ ನೀಡಲಾಗುತ್ತಿದೆ. ನಾಳೆ ರವಿವಾರ ವಿಜಯಪುರ ನಗರದ ಜಿಲ್ಲಾ ಪಂಚಾಯತ್ ಗಾಂಧಿ ಭವನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾನಿಪ ಸಂಘದ ಜಿಲ್ಲಾಧ್ಯಕ್ಷ ಯುಸೂಫ್ ನೇವಾರ ಅವರು ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿ ದೃಶ್ಯ ಮಾಧ್ಯಮದಿಂದ ಸುನೀಲ ಭಾಸ್ಕರ್ ಜಿಲ್ಲಾ ವರದಿಗಾರರು ಪವರ್ ಟಿವಿ.ಮುದ್ರಣ ಮಾಧ್ಯಮದಿಂದ ಶ್ರೀಮತಿ ಐಶ್ವರ್ಯ ತಾಳಿಕೊಟಿ ಜಿಲ್ಲಾ ವರದಿಗಾರುರು, ಉದಯಕಾಲ ದಿನಪತ್ರಿಕೆ. ಮಾರುತಿ ಹಿಪ್ಪರಗಿ ಮುದ್ದೇಬಿಹಾಳ ತಾಲೂಕಾ ವರದಿಗಾರರು ಸಂಧ್ಯಾಕಾಲ. ಶ್ರೀಶೈಲ ( ಸಚೀನ ) ಎಸ್ ಇಂಡಿ ತಾಲೂಕಾ ವರದಿಗಾರರು , ಲೋಕದರ್ಶನ ಪತ್ರಿಕೆ. ಮಹ್ಮದ ಆಶ್ಫಾಕ ಕರಜಗಿ ಸಿಂದಗಿ ತಾಲೂಕಾ ವರದಿಗಾರರು,ಉರ್ದು ಸಾಲಾರ ಪತ್ರಿಕೆ. ಉದಯಕುಮಾರ ಆಕಾಶಿ ಸಂಪಾದಕರು, ವೀರರಾಜ ವಾರ ಪತ್ರಿಕೆ. ತೌಫಿಕ ಕಲಾದಗಿ ಸಂಪಾದಕರು ಟಿ. ನ್ಯೂಸ್,ವೆಬ್ ಪೋರ್ಟಲ್, ವಿಜಯಪುರ. ಕುಮಾರಿ ಭಾರ್ಗವಿ ದೇಶಪಾಂಡೆ ನಿರೂಪಕಿ, ಎಫ್ ಎಂ ನ್ಯೂಸ್, ವಿಜಯಪುರ ಹಸನ ಮುಲ್ಲಾ ಕೊಲ್ಹಾರ ತಾಲೂಕಾ ವರದಿಗಾರರು, ಸುರಂಗ ಪತ್ರಿಕೆ. ಹಸನಡೊಂಗ್ರಿ ಕಮತಗಿ ಕೋಲಾರ, ತಾಲೂಕಾ ವರದಿಗಾರರು ಉದಯಕಾಲ ದಿನಪತ್ರಿಕೆ., ಗುಲಾಂಮಹ್ಮದ ದಫೇದಾರ ಮುದ್ಧೇಬಿಹಾಳ ತಾಲೂಕಾ ವರದಿಗಾರರು, ರಣರಂಗ ಇವರಿಗೆ ನೀಡಲಾಗುತ್ತಿದೆ. ಇನ್ನು ಪ್ರತಿನಿತ್ಯ ಮನೆ ಮನೆಗೆ ಪತ್ರಿಕೆ ಹಾಕುವ ಪತ್ರಿಕಾ ವಿತರಕ ಮುದ್ದೇಬಿಹಾಳನ ವಿನಯ ಕಡ್ಲಿಮಟ್ಟಿಗೆ ಸೈಕಲ್ ನೀಡಿ ಗೌರವಿಸಲಾಗುತ್ತಿದೆ. ಇದರ ಜೊತೆಗೆ ಮನಗೂಳಿ ಗ್ರಾಮ ಕ್ಯಾನರಾ ಬ್ಯಾಂಕ್ ದರೋಡ ಪ್ರಕರಣ ಭೇದಿಸಿ ದೇಶದ ಅತಿ ಹೆಚ್ಚು ಚಿನ್ನ ಜಪ್ತಿ ಮಾಡಿ ಸಾಧನೆಗೈದಿರುವ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ,ರೈತ ಹೋರಾಟಗಾರ ಅರವಿಂದ ಕುಲಕರ್ಣಿ,ಹಿರಿಯ ಪತ್ರಕರ್ತ ಅನೀಲ ಹೊಸಮನಿ,ಝೀ ನ್ಯೂಸ್ ವಿಜಯಪುರ ಜಿಲ್ಲಾ ವರದಿಗಾರರು,ಸಮಾಜ ಸೇವಕರಾದ ಮಲ್ಲಪ್ಪ ಬಿದರಿ ಅವರಿಗೆ ವಿಶೇಷ ಸನ್ಮಾನ ಮಾಡಲಾಗುತ್ತಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಪ.ಪೂ.ಶ್ರೀ ಡಾ:ಫೈರೋಜ್ ಇನಾಮದಾರ, ಪೀಠಾಧಿಪತಿಗಳು ,ಮನಗೂಳಿ ಶರೀಫ್ ಸೂಫಿ ಸಂತರು ವಹಿಸಲಿದ್ದಾರೆ. ಕೃಷಿ ಮಾರುಕಟ್ಟೆ ಹಾಗೂ ಸಕ್ಕರೆ ಸಚಿವ ಶಿವಾನಂದ ಎಸ್ ಪಾಟೀಲ ಅವರು ಉದ್ಘಾಟನೆ ಮಾಡಲಿದ್ದಾರೆ.
ಪ್ರಶಸ್ತಿ ಪ್ರದಾನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವಾಯ್ ವಿಜಯೇಂದ್ರ ಮಾಡಲಿದ್ದಾರೆ. ವಿಶೇಷ ಸೈಕಲ್ ವಿತರಣೆಯನ್ನ ಶ್ರೀಧರ ಬಿಜ್ಜರಗಿ ರಾಜ್ಯಾಧ್ಯಕ್ಷರು ಯುವ ವಿಕಾಸ ಸಂಘ ನೆರವೇರಿಸಲಿದ್ದಾರೆ. ಇನ್ನು ಮುಖ್ಯ ಅತಿಥಿಗಳಾಗಿ ರಾಜುಗೌಡ ಪಾಟೀಲ ಶಾಸಕರು ದೇವರಹಿಪ್ಪರಗಿ ಮತಕ್ಷೇತ್ರ, ದೇವಾನಂದ ಚವ್ಹಾಣ ಮಾಜಿ ಶಾಸಕರು, ನಾಗಠಾಣ ಮತಕ್ಷೇತ್ರ, ಗುರುಲಿಂಗಪ್ಪ ಅಂಗಡಿ ಜಿಲ್ಲಾಧ್ಯಕ್ಷರು ಬಿಜೆಪಿ, ಆನಂದ ಕೆ ಜಿಲ್ಲಾಧಿಕಾರಿಗಳು, ವಿಜಯಪುರ, ಲಕ್ಷ್ಮಣ ನಿಂಬರಗಿ ಎಸ್ಪಿ ,ವಿಜಯಪುರ. ವಿಜಯಕುಮಾರ ಮೆಕ್ಕಳಕಿ ಆಯುಕ್ತರು ಮಹಾನಗರ ಪಾಲಿಕೆ, ವಿಜಯಪುರ. ಶ್ರೀಶೈಲ್ ಗೌಡ ಬಿರಾದಾರ ಬಿಜೆಪಿ ಮುಖಂಡರು, ಸಿಂದಗಿ, ಮಲ್ಲಿಕಾರ್ಜುನ್ ಬಂಗ್ಲೆ ,ರಾಜ್ಯಾಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ, ಬೆಂಗಳೂರು ಸೇರಿದಂತೆ ಹಲವರು ಭಾಗಿ ಆಗಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾಧ್ಯಕ್ಷ ಯುಸೂಫ್ ನೇವಾರ ವಹಿಸಲಿದ್ದಾರೆ. ಈ ಮೂಲಕ ಎಲ್ಲ ಪ್ರಶಸ್ತಿ ಪಾತ್ರರಿಗೆ ಹಾಗೂ ವಿಶೇಷ ಸನ್ಮಾನಿತರಿಗೆ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಅಭಿನಂದನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವಿನಾಯಕ ಸಂಡೂರ ಸೇರಿದಂತೆ ಇನ್ನೀತರರು ಇದ್ದರು.