ಇದು ಭಾವೈಕ್ಯತೆಯ ಭಾರತ : ಸಿಎಂ ಇಬ್ರಾಹಿಂ
ಟಿಪ್ಪು ಕ್ರಾಂತಿ ಸೇನೆ ಸಿಂದಗಿ ಆಯೋಜನೆ | ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ : ಮುಸ್ಲಿಂ ಮಾತೃಭಾಷೆ ಆಗಿರುವುದರಿಂದ ಉರ್ದು ವಿದ್ಯಾರ್ಥಿಗಳ ಉರ್ದು ಎಸ್‌ಎಸ್‌ಎಲ್‌ಸಿವರೆಗೆ ಮಾಧ್ಯಮದಲ್ಲಿ ಓದುತ್ತಾರೆ. ಆದರೆ ಪಿಯುಸಿಯಲ್ಲಿ ಅನುತ್ತೀರ್ಣರಾಗಿ ಉನ್ನತ ವ್ಯಾಸಂಗದಿಂದ ವಂಚಿತರಾಗುತ್ತಾರೆ. ಅಲ್ಪಸಂಖ್ಯಾತರ ಮುಸ್ಲಿಂ ವಿದ್ಯಾರ್ಥಿಗಳಿಗೆ ಪಿಯು ಶಿಕ್ಷಣ ಉರ್ದು ಮಾಧ್ಯಮದಲ್ಲಿ ನಡೆಸುವ ದಿಸೆಯಲ್ಲಿ ನಾನು ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಮನವಿ ಸಲ್ಲಿಸಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ದೇವರ ಹೀಪ್ಪರಗಿ ಶಾಸಕ ರಾಜುಗೌಡ ಭೀಮನಗೌಡ ಪಾಟೀಲ ಭರವಸೆ ನೀಡಿದರು.
ಪಟ್ಟಣದ ಗುಂದಗಿ ಸಭಾಭವನದಲ್ಲಿ ಭಾನುವಾರ ಟಿಪ್ಪುಕ್ರಾಂತಿ ಸೇನೆ ತಾಲ್ಲೂಕು ಘಟಕದಿಂದ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಪ್ರತಿಭಾವಂತ ಮುಸ್ಲಿಂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಿಂದಗಿ ಪಟ್ಟಣದ ಗುಂದಗಿ ಸಭಾಭವನದಲ್ಲಿ ನಡೆದ ಮುಸ್ಲಿಂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಾಜಿ ಕೇಂದ್ರ ಸಚಿವ ಸಿ ಎಂ ಇಬ್ರಾಹಿಂ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಸಿ ಎಂ ಇಬ್ರಾಹಿಂ 'ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು' ಎಂದರು.
ಇನ್ನು ಮುಸ್ಲಿಂ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಪುರಸ್ಕಾರ ನೀಡುವ ಕಾರ್ಯಕ್ರಮ ಅನುಕರಣೀಯ' ಆದರೆ ಮುಂದಿನ ವರ್ಷ ಈ ರೀತಿ ಕಾರ್ಯಕ್ರಮ ಮಾಡುವುದಾದರೆ ಎಲ್ಲಾ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕರೆಸಿ ಸನ್ಮಾನಿಸುವ ಕಾರ್ಯವಾಗಬೇಕು. ಯಾಕೆ ಎಂದರೆ ಇಲ್ಲಿ ಎಲ್ಲಾ ಸಮಾಜದ ವಿದ್ಯಾರ್ಥಿಗಳ ಪಾಲಕರು ಒಟ್ಟಿಗೆ ಕುಳಿತು ಪರಸ್ಪರ ಸಂವಾದ ಮಾಡುವುದರಿಂದ ಒಂದು ಭಾವೈಕ್ಯತೆಯ ಭಾರತ ನಿರ್ಮಾಣವಾಗುತ್ತದೆ, ಎಂದು ಡಾ.ದಸ್ತಗೀರ ಮುಲ್ಲಾ ಅವರಿಗೆ ವಿನಂತಿಸಿದರು.
ಟಿಪ್ಪು ಕ್ರಾಂತಿ ಸೇನೆ ಸಂಸ್ಥಾಪಕ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ದಸ್ತಗೀರ ಮುಲ್ಲಾ ಮಾತನಾಡಿ, 'ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ವಕ್ಸ್ ಇಲಾಖೆಗಳು ಹಲ್ಲು ಕಿತ್ತಿದ ಹಾವಿನಂತಾಗಿವೆ. ಮುಸ್ಲಿಂ ಸಮುದಾಯಕ್ಕೆ ಸಂವಿಧಾನಾತ್ಮಕ ಹಕ್ಕು ಸಿಗುತ್ತಿಲ್ಲ' ಪ್ರಚಲಿತ ದಿನಮಾನಗಳಲ್ಲಿ ಮುಸ್ಲಿಮರೆಂದರೆ ಭಯೋತ್ಪಾದಕರು ಎಂದು ಬಿಂಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಮುಸ್ಲಿಂ ವಿದ್ಯಾರ್ಥಿಗಳಿಗೆ ಪಿಯು ಹಂತದ ಶಿಕ್ಷಣ ಉರ್ದು ಮಾಧ್ಯಮದಲ್ಲಿ ದೊರಕದಿದ್ದರೆ ಶಿಕ್ಷಣ ಮೊಟಕುಗೊಳಿಸಿ, ಕೆಲಸಕ್ಕೆ ಸೇರಿಕೊಳ್ಳುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿದರು.
ಅಹಿಂದ ಮುಖಂಡ ವೈ.ಸಿ. ಮಯೂರ, ಮಾತನಾಡಿ ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ತಾಲೂಕು ಶಿಕ್ಷಣ ಕಾಶಿ ಎಂದು ಹೆಸರುವಾಸಿಯಾಗಿದೆ. ಆದರೆ ಇಲ್ಲಿ ಅನ್ಯ ಕೋಮಿನ ಯುವಕರು ಮುಸ್ಲಿಂ ಸಮಾಜಕ್ಕೆ ಧಕ್ಕೆ ಬರುವ ನಿಟ್ಟಿನಲ್ಲಿ ಅನೇಕ ದೇಶದ್ರೋಹಿ ಕೃತ್ಯಗಳು ಎಸಗಿದ್ದಾರೆ ಆದರೆ ಇಂತಹ ವಿಷಯಗಳಿಗೆ ಯಾವುದಕ್ಕೂ ಕಿವಿಗೊಡದೆ ಇವತ್ತಿನ ಯುವ ಪೀಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಿಂದಗಿ ತಾಲೂಕಿನಲ್ಲಿ 400 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಹೆಮ್ಮೆಯ ವಿಚಾರ ಎಂದರು.
ಟಿಪ್ಪು ಕ್ರಾಂತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ, ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಪ್ಪಿ ಸೊಹೇಬ ಇಮಾಮರು ಈದ್ಗಾ ಮಜೀದ್ ಸಿಂದಗಿ ಸಾನ್ನಿಧ್ಯ ವಹಿಸಿದ್ದರು. ಪ್ರಮಾಣ ಪತ್ರ ಬಿಡುಗಡೆ ಮಾರಸಂದ್ರ ಮುನಿಯಪ್ಪ ರಾಜ್ಯಾಧ್ಯಕ್ಷರು ಎ.ಆಯ್. ಬಿ.ಪಿ ಬೆಂಗಳೂರು ಇನ್ನು ಸಸಿಗೆ ನೀರು ಉಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಂ.ಗೋಪಿನಾಥ ಬಹುಜನ ಚೀತಕರು ಬೆಂಗಳೂರು, ಅದೇ ರೀತಿ ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯ ಅಧ್ಯಕ್ಷರು ಕ.ರಾ. ರೈತ ಸಂಘ ಹಸಿರು ಸೇನೆ ಬೆಂಗಳೂರು, ಆರ್ ಮುನಿಯಪ್ಪ ರಾಜ್ಯ ಸಂಯೋಜಕರು ಎ.ಆಯ್.ಬಿ.ಎಸ್.ಪಿ ಬೆಂಗಳೂರು ಇದೇ ಸಂದರ್ಭದಲ್ಲಿ ಟೀಪು ಕ್ರಾಂತಿ ಸೇನೆ ಪದಾಧಿಕಾರಿಗಳು
ಸಿಂದಗಿ, ದೇವರಹಿಪ್ಪರಗಿ, ಆಲಮೇಲ, ತಾಳಿಕೋಟಿ ತಾಲ್ಲೂಕುಗಳ ಪ್ರೌಢಶಾಲೆಯ ಅಧಿಕ ಪುರಸ್ಕರಿಸಲಾಯಿತು. 400 ವಿದ್ಯಾರ್ಥಿಗಳನ್ನು ಹಾಗೂ ಪಾಲಕರು ಉಪಸ್ಥಿತರಿದ್ದರು.