ರಾಹುಲ್‌ ಗಾಂಧಿ ಜನ್ಮದಿನ : ರೋಗಿಗಳಿಗೆ ಹಣ್ಣು, ಹಾಲು ವಿತರಣೆ

Jun 20, 2025 - 10:33
Jun 20, 2025 - 10:34
 0
ರಾಹುಲ್‌ ಗಾಂಧಿ ಜನ್ಮದಿನ : ರೋಗಿಗಳಿಗೆ ಹಣ್ಣು, ಹಾಲು ವಿತರಣೆ

ಬಸವವನಬಾಗೇವಾಡಿ : ಎಐಸಿಸಿ ರಾಷ್ಟ್ರೀಯ ನಾಯಕರಾದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ಕಾರ್ಯಕರ್ತರು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯಜಿತ್‌ ಪಾಟೀಲ ನೇತೃತ್ವದಲ್ಲಿ ಆಸ್ಪತ್ರೆಗಳಿಗೆ ತೆರಳಿ ಹಣ್ಣು, ಹಾಲು ವಿತರಿಸಿ ವಿಶೇಷ ರೀತಿಯಲ್ಲಿ ಜನ್ಮದಿನ ಆಚರಿಸಿದರು.

ಗುರುವಾರ ಬಸವನ ಬಾಗೇವಾಡಿ ಪಟ್ಟಣದ ತಾಲೂಕ ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು, ಹಾಲು ವಿತರಣೆ ಮಾಡುವ ಮೂಲಕ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿ, ಸಂಭ್ರಮಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಚಂದ್ರಶೇಖರ ಗೋಳಸಂಗಿ, ಅಸೆಂಬ್ಲಿ ಅಧ್ಯಕ್ಷರಾದ  ಪ್ರಸಾದ್ ದಳವಾಯಿ, ಬಸವನ ಬಾಗೇವಾಡಿ ಬ್ಲಾಕ್ ಅಧ್ಯಕ್ಷರು ರಿಹಾನ್ ಕೆರೂರ (ಬಾಗವಾನ್ ), ಜೀವನ್ ಮ್ಯಾಗೇರಿ, ಇಮ್ರಾನ್ ಕೊರಬು, ಸಚಿನ್ ಬಾಗೇವಾಡಿ, ಸಿದ್ದು ಹಿರೇಮಠ, ಪಿಂಟು ಪಾಟೀಲ, ಜಹೀರ್ ಅಬ್ಬಾಸ್ ಬೊಮ್ಮನಳ್ಳಿ, ಸುಧೀರ ಜಾಧವ್, ಹನುಮಂತ ಹೊಸಮನಿ, ವಿಜಯ ಜಾಲಗೇರಿ, ರಾಜೂಗೌಡ ಪಾಟೀಲ, ರಾಮನಗೌಡ ಪಾಟೀಲ, ದಶಗೀರ ವಜ್ಜಲ್, ಬಾಬು ಮಸಬೀನಾಳ, ಸುರೇಶ ಹಾರಿವಾಳ, ಬಸವರಾಜ ಮುಂಜಾನೆ, ಜಗದೀಶ ಬಿಜಾಪುರ, ಹನುಮಂತ ತಳೆವಾಡ, ಖಯುಮ್ ಬೆದ್ರೇಕರ್, ಅಜೀಜ, ರಮೇಶ ಮಸಬೀನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.