ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ತಾಳಿಕೋಟೆಯಿಂದ ಪ್ರಯಾಗರಾಜಕ್ಕೆ ಪ್ರಯಾಣ
ಜಿ.ಪಿ. ಘೋರ್ಪಡೆ
ತಾಳಿಕೋಟೆ, ಸಾಧನೆ ಎಂಬುದು ಒಂದು ಗುರಿಯನ್ನು ತಲುಪುವದು ಅಥವಾ ಒಂದು ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವದು ಇದು ವ್ಯಕ್ತಿಯ ಪ್ರಯತ್ನ ಕೌಶಲ್ಯ ಮತ್ತು ಪರಿಶ್ರಮದಿಂದ ಉಂಟಾಗುವ ಫಲಿತಾಂಶವಾಗಿದೆ.
ಗುರಿ ಎಂಬ ಫಲಿತಾಂಶವನ್ನು ಪಡೆಯಬೇಕೆಂಬ ಇಚ್ಚೆಹೊಂದಿದ್ದಲ್ಲದೇ ಏನಾದರೂ ಮಾಡಿ ಈ ಛಲದ ತೀರವನ್ನು ತಲುಪಬೇಕೆಂಬ ಉದ್ದೇಶಹೊತ್ತ ತಾಳಿಕೋಟೆ ಪಟ್ಟಣದ ಅಡತ್ ವ್ಯಾಪಾರಿಯಾದ ಕುಮಾರಸ್ವಾಮಿ ಮಠ ಎಂಬವರ ಪುತ್ರ ಮಹಾಲಿಂಗಯ್ಯ ಮಠ ಎಂಬ ೨೬ ವರ್ಷ ವಯೋಮಿತಿ ಹೊಂದಿದ ಯುವಕ ತಾಳಿಕೋಟೆಯಿಂದ ಪ್ರಯಾಗರಾಜದಲ್ಲಿ ನಡೆದ ಕುಂಭ ಮೇಳಕ್ಕೆ ಮೋಟರ್ ಬೈಕ್‌ನೊಂದಿಗೆ ತೆರಳಿ ೩೬೦೦ ಕೀಲೋ ಮೀಟರ್ ಪ್ರಯಾಣಿಸಿ ಮರಳಿ ತಾಳಿಕೋಟೆಗೆ ಆಗಮಿಸಿರುವದು ಇದೊಂದು ಮಹತ್ವದ ಸಾಧನೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
ಯುವಕ ಮಹಾಲಿಂಗಯ್ಯ ಮಠ ಇವನು ಈಗಾಗಲೇ ಸುಫರ್ ಸ್ಪೇಲ್ಡಂರ್ ಫಲ್ಸರ್ ೨೨೦, ಕೆಟಿಎಂ ೨೫೦, ರಾಯಲ್ ಎನ್ ಪಿಲ್ಡ್ ೩೫೦, ೧೫೫ ಎಂಬ ಯಮಹಾ ಈ ಗಾಡಿಯನ್ನು ಸಲಿಸಾಗಿ ಚಲಿಸುವದನ್ನು ಕರಗತ ಮಾಡಿಕೊಂಡ ಇತ ಇತ್ತಿಚಗೆ ೪೫೦ ಗರಿಲ್ಲಾ ಎಂಬ ಮೋಟರ್ ಬೈಕ್ ಗಾಡಿಯನ್ನು ಸ್ವಂತ ಖರೀದಿಸಿದ್ದನ್ನು ತೆಗೆದುಕೊಂಡು ತಾಳಿಕೋಟೆಯಿಂದ ಪ್ರಯಾಗರಾಜದಲ್ಲಿ ನಡೆದ ಕುಂಭ ಮೇಳಕ್ಕೆ ತೆರಳಿ ಮರಳಿ ಆಗಮಿಸಿ ತನ್ನ ಸ್ನೇಹಿತರೊಂದಿಗೆ ಸನ್ಮಾನಿಸಿ ಗೌರವಿಸಿಕೊಂಡಿದ್ದಾನೆ.
ತಾಳಿಕೋಟೆಯಿAದ ಪ್ರಯಾಗರಾಜಕ್ಕೆ ತೆರಳುವಾಗ ಅಂದು ಮಧ್ಯಾಹ್ನ ೩-೩೦ ಗಂಟೆಗೆ ಬಿಟ್ಟು ರಾತ್ರಿ ೨ ಗಂಟೆಯ ಸುಮಾರಿಗೆ ೮೦೦ ಕೀಲೋ ಮೀಟರ್ ಕ್ರಮಿಸಿ ನಾಗಪೂರಕ್ಕೆ ತಲುಪಿ ವಸತಿ ಮಾಡಿದ ಇತ ಮುಂಜಾನೆ ೬ ಗಂಟೆಯವರೆಗೆ ನಿದ್ರೆಗೆ ಜಾರಿ ೬-೩೦ ಕ್ಕೆ ನಾಗಪೂರ ಬಿಟ್ಟು ಪುನಃ ೮೦೦ ಕೀಲೋ ಮೀಟರ್ ದೂರದಲ್ಲಿದ್ದ ಪ್ರಯಾಗರಾಜಕ್ಕೆ ಮರುದಿನ ನಸುಕಿನ ೬-೩೦ ಕ್ಕೆ ತಲುಪಿ ತ್ರಿವೇಣಿ ಸಂಗಮಕ್ಕೆ ತೆರಳಿ ಪುಣ್ಯ ಸ್ನಾನ ಮಾಡಿದಲ್ಲದೇ ಊಟೋಪಚಾರ ಕೈಕೊಂಡು ಅಂದೇ ರಾತ್ರಿ ೩ ಗಂಟೆಗೆ ಪ್ರಯಾಗರಾಜದಿಂದ ಮರಳಿ ನಾಗಪೂರಕ್ಕೆ ಮಧ್ಯಾಹ್ನ ತಲುಪಿ ಊಟೋಪಚಾರ ಕೈಕೊಂಡು ರಾತ್ರಿ ೧೨ ಗಂಟೆಗೆ ತಾಳಿಕೋಟೆ ಪಟ್ಟಣಕ್ಕೆ ತಲುಪಿದ್ದಾನೆ.
ಈ ಯುವಕ ಈಗಾಗಲೇ ಮೋಟರ್ ಬೈಕ್‌ನೊಂದಿಗೆ ತಾಳಿಕೋಟೆಯಿಂದ ಶ್ರೀಶೈಲಕ್ಕೆ ಸುಮಾರು ೪೧೯ ಕೀಲೋ ಮೀಟರ್ ಕ್ರಮಿಸಿ ಮರಳಿ ಬಂದಿದ್ದಲ್ಲದೇ ತಾಳಿಕೋಟೆಯಿಂದ ಬೆಂಗಳೂರ ೫೫೦ ಕೀಲೋ ಮೀಟರ್ ದೂರದ ಈ ಸ್ಥಳಕ್ಕೆ ಹೋಗಿ ಮರಳಿ ಬಂದಿದ್ದಲ್ಲದೇ ತಾಳಿಕೋಟೆಯಿಂದ ಹುಬ್ಬಳ್ಳಿಯ ಸಿದ್ದಾರೂಡರ ಮಠಕ್ಕೆ ೨೫೦ ಕೀಲೋ ಮೀಟರ್ ಕ್ರಮಿಸಿ ಅಲ್ಲಿಯ ಶ್ರೀಗಳಿಂದ ಆಶಿರ್ವಾದ ಪಡೆದುಕೊಂಡು ಬಂದಿದ್ದ ಯುವಕನ ಸಾಧನೆ ನೋಡಿದರೆ ಸಾಧಿಸುವ ಛಲವೊಂದಿದ್ದರೆ ಬೇಕಾದುದ್ದನ್ನು ಸಾಧಿಸಬಹುದಾಗಿದೆ ಎಂದು ಇತ ತೋರಿಸಿಕೊಟ್ಟಿದ್ದಾನೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲವಷ್ಟೇ.