ಎಮ್ ಬಿ ಸಂಕದ ವಯೋನಿವೃತ್ತಿ : ಅಭೂತಪೂರ್ವ ಬಿಳ್ಕೊಟ್ಟಿರುವ ಖಾಕಿ ಪಡೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
•ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದಂತಹ
ಛಾಪು ಮೂಡಿಸಿದ ಎಂ ಬಿ ಸಂಕದ
•ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಲೂಕುಗಳಲ್ಲಿ ಸೇವೆ
•ಭೀಮಾತೀರದ ಕುಖ್ಯಾತ ಹಾಗೂ ಸಮಾಜ ಘಾತುಕರನ್ನ ಮೂಲೆಗುಂಪು ಮಾಡಿದ ಕೀರ್ತಿ
•ಪೊಲೀಸ್ ಇಲಾಖೆಯಲ್ಲಿ 31 ವರ್ಷಗಳ ಸುದೀರ್ಘವಾಗಿ ಸಮರ್ಥ ಸೇವೆ
•ಗದಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ
•ನಮ್ಮ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಬೆಂಗಳೂರು ಸತ್ಯ ಶೋಧನಾ ತಂಡದಿಂದ ಹಾರ್ದಿಕ ಅಭಿನಂದನೆಗಳು
ಗದಗ: ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ ಗದಗ ಮೂಲದ ಎಂ ಬಿ ಸಂಕದ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಲೂಕುಗಳಲ್ಲಿ ಸೇವೆ ಸಲ್ಲಿಸಲ್ಲಿಸಿದ್ದಾರೆ.
ಈ ಹಿಂದೆ ವಿಜಯಪುರ ಜಿಲ್ಲೆಯ ಇಂಡಿ ವಿಭಾಗದ ಡಿವೈಎಸ್ಪಿ ಯಾಗಿದ್ದ ಸಂದರ್ಭದಲ್ಲಿ ಭೀಮಾತೀರದ ಕುಖ್ಯಾತ ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ಮೂಲೆಗುಂಪು ಮಾಡಿ ಈ ಭಾಗದಲ್ಲಿ ಛಾಪು ಮೂಡಿಸಿದ ಎಂ ಬಿ ಸಂಕದ ಅವರು ಮುಂದೆ ಪದೋನ್ನತಿ ಹೊಂದಿ ಗದಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಪೊಲೀಸ್ ಇಲಾಖೆಯಲ್ಲಿ ಮೂವತ್ತೊಂದು ವರ್ಷಗಳ ಸುದೀರ್ಘವಾಗಿ ಸಮರ್ಥ ಸೇವೆ ಸಲ್ಲಿಸಿ ಜೂನ್ 30/2025 ರಂದು ವಯೋ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ತಮ್ಮ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಅಭೂತಪೂರ್ವ ಬಿಳ್ಕೊಟ್ಟಿದ್ದಾರೆ.
ಅವರ ನಿವೃತ್ತಿ ಜೀವನ ಆನಂದಮಯ ಹಾಗೂ ಅವರ ಸಂಕಲ್ಪಗಳು ಯಶಸ್ವಿಯಾಗಲಿ ಶುಭವಾಗಲಿ ಎಂದು ನಮ್ಮ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಬೆಂಗಳೂರು ಸತ್ಯ ಶೋಧನಾ ತಂಡದಿಂದ ಹಾರ್ದಿಕ ಅಭಿನಂದನೆಗಳು.