ಯೋಗವು ದೇಹ, ಮನಸ್ಸು ಮತ್ತು ಆತ್ಮಗಳೊಡನೆ ಬೆಸೆಯುವಲ್ಲಿ ಸಹಕರಿಸುತ್ತದೆ : ಡಾ.ಪ್ರಭುಸಾರಂಗದೇವ ಶಿವಾಚಾರ್ಯರು

Jun 22, 2025 - 23:11
 0
ಯೋಗವು ದೇಹ, ಮನಸ್ಸು ಮತ್ತು ಆತ್ಮಗಳೊಡನೆ ಬೆಸೆಯುವಲ್ಲಿ ಸಹಕರಿಸುತ್ತದೆ : ಡಾ.ಪ್ರಭುಸಾರಂಗದೇವ ಶಿವಾಚಾರ್ಯರು
ಸಿಂದಗಿ ಪಟ್ಟಣದ ಸಾರಂಗಮಠದ ಸಭಾಮಂಟಪದಲ್ಲಿ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ, ಶ್ರೀಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥೆಯ ಅಡಿಯಲ್ಲಿರುವ ಎಲ್ಲ ಸಂಗ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಅಂತರ ರಾಷ್ಟಿçÃಯ ಯೋಗ ದಿನವನ್ನು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಉದ್ಘಾಟಿಸಿದರು.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ಸಿಂದಗಿ: ಯೋಗವು ದೇಹ, ಮನಸ್ಸು ಮತ್ತು ಆತ್ಮಗಳೊಡನೆ ಬೆಸೆಯುವಲ್ಲಿ ಸಹಕರಿಸುತ್ತದೆ. ಕಳೆದ ೧೧ ವರ್ಷಗಳ ಹಿಂದೆ ಆರಂಭವಾದ ಯೋಗ ದಿನಾಚರಣೆ ಈಗ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಸಿಂದಗಿ ಪಟ್ಟಣದ ಸಾರಂಗಮಠದ ಸಭಾಮಂಟಪದಲ್ಲಿ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ, ಶ್ರೀಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥೆಯ ಅಡಿಯಲ್ಲಿರುವ ಎಲ್ಲ ಸಂಗ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಅಂತರ ರಾಷ್ಟಿಯ ಯೋಗ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗವು ಭಾರತೀಯ ಸಂಸ್ಕೃತಿಯ ಹಿರಿಮೆ, ಗರಿಮೆಗಳ ಸಾಕಾರ ರೂಪವಾಗಿದೆ. ಯೋಗಭ್ಯಾಸ ಒತ್ತಡವನ್ನು ನಿವರಿಸುತ್ತದೆ. ಪ್ರತಿ ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಯೋಗ ಸಾಧಕರನ್ನು ಗಮನಿಸಿದರೆ ತಿಳಿಯುತ್ತದೆ. ಯೋಗ ದಿನಾಚರಣೆಯಂದು ಕಲಿತಿರುವ ಆಸನಗಳನ್ನು ಮುಂದುವರೆಸಿಕೊ0ಡು ಹೋಗುವ ಮೂಲಕ ಯೋಗ ದಿನದ ಆಚರಣೆಯ ಆಶಯಕ್ಕೆ ಸ್ಪಂದಿಸುವ0ತಾಗಬೇಕು ಎಂದರು.
ಈ ವೇಳೆ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ಸಾರಂಗಮಠದಲ್ಲಿ ಯಾದಗಿರಿ ಜಿಲ್ಲೆಯ ಗೋಗಿ ಜ್ಞಾನಯೋಗ ಮಂದಿರ ಯೋಗ ಸಾಧಕರು ಹಾಗೂ ಮಾರ್ಗದರ್ಶಕರಾದ ಯೋಗಿ ಜಯಗುರುದೇವ ಸ್ವಾಮೀಜಿ ಅವರಿಂದ ಜೂ.೨೧ ರಿಂದ ಜೂ.೨೯ ರವೆರೆಗೆ ಪ್ರತಿನಿತ್ಯ ಬೆಳಿಗ್ಗೆ ೬-೭ಗಂಟೆಯವರೆಗೆ ಅಷ್ಟಾಂಗ ಯೋಗ, ಸಾಯಂಕಾಲ ೭-೮ಗಂಟೆವರೆಗೆ ಪ್ರಣವ ಧ್ಯಾನ ಯೋಗ ನಡೆಯುತ್ತದೆ ಇದರ ಸದುಪಯೋಗವನ್ನು ಸಿಂದಗಿ ಜನತೆ, ಶ್ರೀಮಠದ ಭಕ್ತರು ಹಾಗೂ ಮಕ್ಕಳ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಗೋಗಿ ಜ್ಞಾನಯೋಗ ಮಂದಿರ ಯೋಗ ಸಾಧಕರು ಹಾಗೂ ಮಾರ್ಗದರ್ಶಕರಾದ ಯೋಗಿ ಜಯಗುರುದೇವ ಸ್ವಾಮೀಜಿಗಳು ಅಷ್ಟಾಂಗ ಯೋಗದ ಬಗ್ಗೆ ತಿಳಿಸಿ ಆಸನಗಳನ್ನು ಮಾಡಿಸಿದರು. ಬಳಿಕ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಯೋಗ ಸಪ್ತಾಹದಲ್ಲಿ ಪಾಲ್ಗೊಂಡ ಯೋಗಾಸಕ್ತರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯ ಅಶೋಕ ವಾರದ, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಶಕುಂತಲಾ ಹಿರೇಮಠ, ಮಡಿವಾಳಮ್ಮ ಗದಗಿಮಠ, ಶಿಕ್ಷಕಿ ಕವಿತಾ, ಭಾಗ್ಯಶ್ರೀ ನಂದಿಮಠ, ಮುಕ್ತಾಯಕ್ಕ ಕತ್ತಿ ಶ್ರೀದೇವಿ ದುದ್ದಗಿ, ಬಸಮ್ಮ ಧರಿ ಸೇರಿದಂತೆ ಶ್ರೀಮಠದ ಭಕ್ತರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.