ಡಿವೈಎಸ್ಪಿ ಬಸವರಾಜ ಯಲಿಗಾರಗೆ ಸನ್ಮಾನ

Jun 22, 2025 - 22:35
 0
ಡಿವೈಎಸ್ಪಿ ಬಸವರಾಜ ಯಲಿಗಾರಗೆ ಸನ್ಮಾನ
ತಿಕೋಟಾ ತಾಲ್ಲೂಕಿನ ಕೊಟ್ಯಾಳ ಗ್ರಾಮದಲ್ಲಿ ಡಿವೈಎಸ್ಪಿ ಬಸವರಾಜ ಯಲಿಗಾರ ಅವರ ನನ್ನೊಳಗಿನ ನಾನು ನೀನೆ ಗ್ರಂಥ ಲೋಕಾರ್ಪಣೆ ನಿಮಿತ್ಯ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ತಿಕೋಟಾ:  ಕರ್ತವ್ಯದ ಮಧ್ಯೆ ಜವಾಬ್ದಾರಿ ಹುದ್ದೆಯೊಂದಿಗೆ ಬಸವಣ್ಣನವರ 959 ವಚನಗಳನ್ನು ಇಂಗ್ಲೀಷಕ್ಕೆ ಅನುವಾದ ಮಾಡಿದ ಕೀರ್ತಿ ಡಿವೈಎಸ್ಪಿ ಬಸವರಾಜ ಯಲಿಗಾರ ಅವರಿಗೆ ಸಲ್ಲುತ್ತದೆ ಎಂದು ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜ ಹೇಳಿದರು.

ತಾಲ್ಲೂಕಿನ ಕೊಟ್ಯಾಳ ಗ್ರಾಮದಲ್ಲಿ ಶುಕ್ರವಾರ ಸಂಜೆ  ಡಿವೈಎಸ್ಪಿ ಬಸವರಾಜ ಯಲಿಗಾರ ಅವರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿಡುವಿಲ್ಲದ ಸಮಯದ ಮಧ್ಯದಲ್ಲಿ ಬಸವಣ್ಣನವರ ವಚನಗಳನ್ನು ಕನ್ನಡದಿಂದ ಇಂಗ್ಲೀಷಕ್ಕೆ ಅನುವಾದ ಮಾಡಿದ ಮೈ ಮೀ ಇಸ್ ದಿ (ನನ್ನೊಳಗಿನ ನಾನು ನೀನೆ) ಆ ವಚನ ಗ್ರಂಥ ಲೋಕಾರ್ಪಣೆ ಮಾಡಿದ್ದಾರೆ. ಕರ್ತವ್ಯದೊಂದಿಗೆ ಸಮಯದ ಸದುಪಯೋಗ ಪಡಿಸಿಕೊಂಡು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ಡಿವೈಎಸ್ಪಿ ಬಸವರಾಜ ಯಲಿಗಾರ ಮಾತನಾಡಿ ಹನ್ನೆರಡನೇಯ ಶತಮಾನದ ಬಸವಣ್ಣನವರ ವಚನಗಳನ್ನು ಕನ್ನಡಿಗರಷ್ಟೆ ಅಲ್ಲದೇ ಇತರೆ ಭಾಷಿಕರಿಗೂ ಓದಲು ಅನೂಕೂಲವಾಗಲು ಇಂಗ್ಲೀಷಕ್ಕೆ ಅನುವಾದಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಭೀಮನಗೌಡ ಪಾಟೀಲ, ಸಹೋದರರು, ಕಾಶಿನಾಥ ಕಾಖಂಡಕಿ, ಕಾಶಿನಾಥ ಸ್ವಾಮೀಜಿ, ದೇಸಾಯಿ ಹಿಪ್ಪರಗಿ, ಎಂ.ಪಿ.ಪಾಟೀಲ , ಸಂಗಪ್ಪ ನಾಗರಾಳ, ಉಮೇಶ ಕೋಟ್ಯಾಳ ಹಾಗೂ ಗ್ರಾಮಸ್ಥರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.