ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಆಲಮೇಲ: ರುಕುಂಪೂರ ರಸ್ತೆ ತೆರವು ಹಾಗೂ ವಿವಿದ ಸಮುದಾಯಗಳ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಶುಕ್ರವಾರ ೩ನೇ ದಿನ ಪೂರ್ಣಗೊಳಿಸಿ ಶನಿವಾರ ನಾಲ್ಕನೇ ದಿನಕ್ಕೆ ಅರೆಬೆತ್ತಲೆ ಮೆರವಣಿಗೆ ಮೂಲಕ ಮುಂದುವರೆಯಲಿದೆ.
ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಹಕ್ಕೆ ಶುಕ್ರವಾರ ವಿವಿದ ಸಮುದಾಯದ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.
ಹೋರಾಟದ ನೇತೃತ್ವ ವಹಿಸಿದ ಹರೀಶ ಎಂಟಮಾನ ಮಾತನಾಡಿ ಧರಣಿ ಸತ್ಯಾಗ್ರಹ ಆರಂಭಗೊoಡು ಮೂರು ದಿನಗಳಾದರು ಯಾವದೆ ಅಧಿಕಾರಿಗಳು ಸ್ಪಂದಿಸಿಲ್ಲ. ಸರಕಾರಿ ಅಧಿಕಾರಿಗಳು ಸರ್ಕಾರದ ಪರ ಸಾರ್ವಜನಿಕ ಕೆಲಸ ಮಾಡದೆ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯoತೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಬೇಡಿಕೆಗಳಿಗಾಗಿ ಕಾನೂನು ರೀತಿ ಶಾಂತಿರಿತಿಯಿoದ ಹೋರಾಟ ನಡೆಸುತ್ತಿದ್ದು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟದ ಸ್ವರೂಪ ಬದಲಾಗುತ್ತೆ ಮುಂದಿನ ಆಗು ಹೋಗುಗಳಿಗೆ ಅಧಿಕಾರಿಗಳೆ ಹೊಣೆ ಎಂದು ಎಚ್ಚರಿಕೆ ನೀಡಿದರು. ಶನಿವಾರ ಅರೆಬೆತ್ತಲೆ ಮೇರವಣಿಗೆ ಮೂಲಕ ಹೋರಾಟ ಮಾಡಲಾಗುವದು ಎಂದು ತಿಳಿಸಿದರು.
ಮೂರನೆ ದಿನದ ಧರಣಿಯಲ್ಲಿ ಮಾಗಣಗೇರಿಯ ಶ್ರೀಶೈಲಗೌಡ ಬಿರಾದಾರ, ಬ್ಲಾಕ ಕಾಂಗ್ರೇಸ್ ಮಾಜಿ ಅಧ್ಯಕ್ಷ, ಅಹಿಂದ ತಾಲೂಕು ಅಧ್ಯಕ್ಷ ಅಯೂಬ ದೇವರಮನಿ ಧರಣಿಯಲ್ಲಿ ಪಾಲ್ಗೊಂಡು ಬೆಂಬಲಿಸಿದರು.
ಮಾಜಿ ಜಿ.ಪಂ ಸದಸ್ಯ ಬಿ.ಆರ್. ಎಂಟಮಾನ, ಪ.ಪಂ ಸದಸ್ಯ ಸಂಜೀವಕುಮಾರ ಎಂಟಮಾನ, ಶ್ರೀಶೈಲ ಮಠಪತಿ, ಶಿವಾನಂದ ಜಗತಿ, ಹರಿಶ ಎಂಟಮಾನ, ಶಿವಾನಂದ ತಳವಾರ, ಶಿವು ಮೇಲಿಮನಿ, ಶಶಿ ನಾಯ್ಕೋಡಿ, ಬಸು ಹೂಗಾರ, ಶ್ರೀಶೈಲ ಭೋವಿ, ಅಪ್ಪು ಶೆಟ್ಟಿ, ರವಿ ವಾರದ, ದೇವಪ್ಪ ಗುಣಾರಿ, ನಾಗಪ್ಪ ತಳವಾರ, ಸಲಿಂ ತಾಂಬೋಳಿ, ಗಾಲಿಬ ತಳವಾರ, ಅಂಬಾದಾಸ ಬಿಳಂಬಗಿ, ನವಿನ ಬ್ಯಾಕೋಡ, ಶರಣು ತಳವಾರ ಮುಂತಾದವರು ಇದ್ದರು.