ಸದ್ಯದಲ್ಲೇ ಬಿಡುಗಡೆಯಾಗಲಿದೆ ಕಾದಲ್ ಚಿತ್ರದ ಮೊದಲ ಹಾಡು

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಕನ್ನಡದಲ್ಲಿ ಪ್ರೇಮಕಥೆಗಳುಳ್ಳ ಚಿತ್ರಗಳು ಸಾಕಷ್ಟು ಬಂದಿವೆಯಾದರೂ, ಒಂದಕ್ಕಿಂತ ಒಂದು ವಿಭಿನ್ನ ಎನ್ನಬಹುದು. ಪ್ರೇಮಕಥೆಯೇ ಪ್ರಧಾನವಾಗಿರುವ ಆದರೆ ನಿರೂಪಣೆಯಲ್ಲಿ ಸ್ವಲ್ಪ ವಿಭಿನ್ನ ಎನ್ನಬಹುದಾದ ಚಿತ್ರ "ಕಾದಲ್".
ವಿಜಯ್ ಪ್ರಿಯಾ ಅವರು ಈ ಪ್ರೇಮ ಕಥಾನಕಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪ್ರಸ್ತುತ " ಏಳು ಮಲೆ" ಚಿತ್ರದ ನಿರ್ದೇಶಕರೂ ಆಗಿರುವ ಪುನೀತ್ ರಂಗಸ್ವಾಮಿ "ಕಾದಲ್" ಗೆ ಸಂಭಾಷಣೆ ಬರೆದಿದ್ದಾರೆ. ಹಿತನ್ ಹಾಸನ್ ಸಂಗೀತ ಸಂಯೋಜನೆಯಲ್ಲಿ ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ. ಮೊದಲ ಹಾಡಿನ ಪ್ರೋಮೊ ಬಿಡುಗಡೆಯಾಗಿದೆ. ಹಾಡು ಸದ್ಯದಲ್ಲೇ ಅನಾವರಣವಾಗಲಿದೆ. ಹಾಡಿನ ಪ್ರೋಮೊಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪುನೀತ್ ರಂಗಸ್ವಾಮಿ, ಭರ್ಜರಿ ಚೇತನ್ ಹಾಗೂ ಗೌರಿ ಸುತ ಅವರು ಹಾಡುಗಳನ್ನು ಬರೆದಿರುವ "ಕಾದಲ್" ಚಿತ್ರಕ್ಕೆ ರಾಜೇಶ್ ಆಚಾರ್ಯ ಛಾಯಾಗ್ರಹಣ ಹಾಗೂ ಸುಹಾಸ್ ಅಮೀನ್ ಅವರ ನೃತ್ಯ ನಿರ್ದೇಶನವಿದೆ.
ಹೆಚ್ ಆರ್ ಸುರೇಶ್ ಗೌಡ ರಾಮಾಂಜನಪ್ಪ ಹೆಣ್ಣೂರು ನಿರ್ಮಿಸುತ್ತಿರುವ "ಕಾದಲ್" ಚಿತ್ರದ ಚಿತ್ರೀಕರಣ ಆಗಸ್ಟ್ ನಲ್ಲಿ ಆರಂಭವಾಗಲಿದೆ. ನಾಯಕ ಹಾಗೂ ನಾಯಕಿ ಸೇರಿದಂತೆ ಚಿತ್ರದ ತಾರಾಬಳಗವನ್ನು ಸದ್ಯ ಗೌಪ್ಯವಾಗಿಟ್ಟಿರುವ ನಿರ್ದೇಶಕರು ಮುಂದಿನ ದಿನಗಳಲ್ಲಿ ಈ ಕುರಿತು ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.