ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ: ಈ ಆಧುನಿಕ ಜೀವನ ಪದ್ಧತಿಯಲ್ಲಿ ಒತ್ತಡ ಹಾಗೂ ಆಹಾರ ಪದ್ಧತಿಯಿಂದಾಗಿ ದೇಹ ಸದೃಢವಾಗಿರಲು ಸಾಧ್ಯವಾಗುತ್ತಿಲ್ಲ. ಪೂರ್ಣ ಆಯಸ್ಸು ಪಡೆಯಬೇಕಾದರೆ ಯೋಗಕ್ಕೆ ಆಧ್ಯತೆ ನೀಡಬೇಕು ಎಂದು ಮುಖ್ಯಾಧ್ಯಾಪಕರಾದ ಮಹೇಶ ನಾಡಗೇರಿ ಅವರು ತಿಳಿಸಿದರು.
ನಗರದ ಕೆ.ಬಿ.ಎಸ್.ನಂ.೧೦ ಜೋರಾಪುರ ಪೇಠ ವಿಜಯಪುರ ಶಾಲೆಯಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಯೋಗ ದಿನವನ್ನು ಉದ್ಧೇಶಿಸಿ ಅವರು ಮಾತನಾಡಿದರು. ಭಾರತವು ವಿಶ್ವಕ್ಕೆ ಯೋಗದ ಮೂಲಕ ಶಾಂತಿಯನ್ನು ರಫ್ತು ಮಾಡಿದೆ. ಜೀವನದಲ್ಲಿ ಯೋಗವನ್ನು ಅಳಪಡಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು. ಶಿಕ್ಷಕಿಯರಾದ ಶ್ರೀಮತಿ ಎ.ಐ.ಮಾಗಿ ಮಾತನಾಡಿ, ‘ಸದೃಢ ಆರೋಗ್ಯ ಹೊಂದಲು ಯೋಗ ಸಹಕಾರಿಯಾಗಿದ್ದು, ರೋಗಗಳಿಂದಲೂ ದೂರವಿರಬಹುದು. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ’ ಎಂದು ಹೇಳಿದರು.
ಇದೇ ಸಂದರ್ಬದಲ್ಲಿ ಶ್ರೀಮತಿ ಎಮ್.ಎನ್.ಮುಂಜಣ್ಣಿ ಮಾತನಾಡಿ, ಯೋಗವು ಮನುಷ್ಯನ ಮನಸ್ಸು ಏಕಾಗ್ರಗೊಳಿಸುವ ಶಿಕ್ಷಣ ಕ್ರಮವಾಗಿದೆ. ಯೋಗವು ಸೀಮಿತ ಧರ್ಮ, ಜಾತಿ, ಪಂಗಡ ರಾಷ್ಟ್ರೀಯತೆಗಳ ಭೇದ ಮೀರಿ ನಿಂತಿದೆ. ಇದು ಒಂದು ರಾಷ್ಟ್ರೀಯ ಭಾವೈಕ್ಯತೆ ಸಮನ್ವಯ ಜೀವನದ ಶಿಕ್ಷಣವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಎಸ್‌ಡಿಎಂಸಿ ಸದಸ್ಯರಾದ ಶಿವಾನಂದ ಅಫಜಲಪುರ ಮಾತನಾಡುತ್ತಾ ಯೋಗ ನಮ್ಮ ಪ್ರಾಚೀನ ಕಲೆಯಾಗಿದ್ದು, ೬೦೦೦ ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಯೋಗ ನಮ್ಮ ಮನಸ್ಸು, ದೇಹ ಮತ್ತು ಆತ್ಮ ಈ ಎಲ್ಲ ಮೂರು ಅಂಶಗಳನ್ನು ಶುದ್ದೀ ಕರಿಸಲು ನೆರವಾಗುತ್ತದೆ. ಅದಕ್ಕಾ ಗಿಯೇ ನಮ್ಮ ಯುವ ಜನತೆ, ತಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗದ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರಿಗೂ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ ೨೧ ರಂದು ವಿಶ್ವ ಯೋಗ ದಿನಾಚರಣೆ ಯನ್ನು ಆಚರಿಸಲಾಗುತ್ತದೆ ಎಂದರು.
ಈ ಅಂತರಾಷ್ಟಿಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರು ಎಮ್.ಸಿ.ನಾಡಗೇರಿ, ಶ್ರೀಮತಿ ಎಮ್.ಎನ್.ಮುಂಜಣ್ಣಿ, ಶ್ರೀಮತಿ.ಝಡ್.ಎಸ್.ಆಸ್ಕಿ, ಶ್ರೀಮತಿ. ಎ.ಐ.ಮಾಗಿ,ಶಬಾನ ಬೇಗಂ ಕೋತ್ವಾಲ್, ಪಿ.ಕೆ.ಖರಾತ ಪೂಜಾ.ಕುಲಕರ್ಣಿ ಮೆಡಮ್. ಶಾಲಾ ಸಿಬ್ಬಂದಿಯವರು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು. ಎಲ್ಲ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನೀಯರು, ಇನ್ನೀತರರು ಇದ್ದರು.