ಅಡೆತಡೆಗಳು ಎದುರಿಸಿ ಮುಂದುವರೆದಾಗ ಸಾಧಕರಾಗಲು ಸಾಧ್ಯ : ನಿವೃತ್ತ ಪೊಲೀಸ್ ಅಧಿಕಾರಿ ಸಿ.ಬಿ ಬಾಗೇವಾಡಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಸಾಧನೆ ಮಾಡುವ ದಾರಿಯಲ್ಲಿ ವಿವಿಧ ಅಡೆತಡೆಗಳು, ತೊಂದರೆಗಳು ಬರುವುದು ಸಾಮಾನ್ಯ. ಅವುಗಳನ್ನು ಧೈರ್ಯದಿಂದ ಎದುರಿಸಿ ಮುಂದುವರೆದಾಗ ಸಾಧಕರಾಗಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಸಿ.ಬಿ ಬಾಗೇವಾಡಿ ಹೇಳಿದರು.
ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರ ನಿಖಿಲ್ ಸೊನ್ನದರವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಲನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಯಾಗಿ ಕಾರ್ಯನಿರ್ವಹಿಸುತ್ತಿರುವ ಮಹೇಶ ಸಂಖರವರು ಯಶಸ್ಸಿಗೆ ಮೊದಲನೆಯ ಮೆಟ್ಟಿಲು ಎಂದರೆ ಏಕಾಗ್ರತೆ ಮಹಾಭಾರತದ ಅರ್ಜುನನಲ್ಲಿರುವ ಏಕಾಗ್ರತೆ ನಮ್ಮಲ್ಲಿಯೂ ಇರಬೇಕು. ಆಗ ಆಕರ್ಷಣೆಗಳು ಕಡಿಮೆಯಾಗಿ ಓದಿನಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರರವರು ಶಿಕ್ಷಣ ಪಡೆಯುವಾಗ ನಿಮ್ಮಲ್ಲಿರುವ ಸಮಯ ಪ್ರಜ್ಞೆ, ಪ್ರಾಮಾಣಿಕತನ ಹಾಗೂ ಪರಿಶ್ರಮಗುಣ ಸರ್ಕಾರಿ ನೌಕರಿ ಸೇರಿದನಂತರವೂ ಇರಬೇಕು ಆಗ ಮಾತ್ರ ನೀವು ಉತ್ತಮ ಶಿಕ್ಷಕರಾಗಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷ ಸ್ಥಾನವಹಿಸಿದ ಚಾಣಕ್ಯ ಕರಿಯರ್ ಅಕಾಡೆಮಿಯ ಮುಖ್ಯಸ್ಥರಾದ ಎನ್.ಎಂ. ಬಿರಾದಾರರವರು ಯಶಸ್ಸಿಗೆ ಮೊದಲನೆಯ ಹಂತವೆAದರೆ ಮಾನಸಿಕ ಗಟ್ಟಿತನ ಇದ್ದವರು ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ನನ್ನಿಂದ ಸಾಧ್ಯವಿದೆ ಎಂಬ ಬದ್ಧತೆಯೊಂದಿಗೆ ನಿರಂತರ ಪ್ರಯತ್ನ ಮಾಡುತ್ತಾರೆ ಅದು ಅವರ ಕನಸು ಇಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ರ‍್ಯಾಂಕ್ ಪಡೆದ ನಿಖಿಲ್ ಸೊನ್ನದ್‌ರವರಿಗೆ ೧೧,೦೦೦ ರೂಪಾಯಿಗಳ ನಗದು ಬಹುಮಾನದೊಂದಿಗೆ ನೂರಾರು ಮಕ್ಕಳ ಎದುರಿಗೆ ಸನ್ಮಾನಿಸಲಾಯಿತು. ಅವರು ಸನ್ಮಾನಿತರಾಗಿ ವಿದ್ಯಾರ್ಥಿಗಳಿಗೆ ಪ್ರೇರಣೆಗಿಂತ ಶಿಸ್ತು ಮುಖ್ಯ ಎಂದು ತಿಳಿಸಿಕೊಟ್ಟರು. ವೇದಿಕೆಯ ಮೇಲೆ ಉಪನ್ಯಾಸಕರಾದ ಶಿವುಕುಮಾರ ಹಿರೇಮಠರವರು ನಿಖಿಲ್ ಸೊನ್ನದ್ ಮಾಡಿದ ಸಾಧನೆಯಂತೆ ತಾವೆಲ್ಲರೂ ಸಾಧನೆ ಮಾಡಬೇಕೆಂದು ಹೇಳಿದರು.
ಪ್ರಾರ್ಥನೆಯನ್ನು ಕಮಲಾದೇವಿ ಶಾಲೆಯ ಮಕ್ಕಳು ಮಾಡಿದರು. ಸ್ವಾಗತ ಮತ್ತು ಪರಿಚಯ ಎಮ್.ಎಚ್. ಪಾಟೀಲ್, ನಿರೂಪಣೆ ಶ್ರೀಶೈಲ್ ಹಳಕಟ್ಟಿ, ವಂದನಾರ್ಪನೆ ಉಪನ್ಯಾಸಕಿಯರಾದ ಶ್ರೀಮತಿ ಕವಿತಾ ರಾಠೋಡರವರು ಮಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಕಾಶ ಜಾಧವ, ಯೂಸುಪ್ ಕಲ್ಮನಿ, ಸಚೀನ ಲಾಳಸಂಗಿ, ರಾಹುಲ ನಾವಿ, ಶಂಕರ ಕುಂಬಾರ, ಗುರುರಾಜ ಪಾಟೀಲ, ರೂಪಾಶ್ರೀ ಬಿರಾದಾರ, ಮಹೇಶ ಕಾಂಬಳೆ, ಸಂತೋಷ ಹಲಸಂಗಿ, ಶರಣು ರೇವಡಿ, ಮಾಂತೇಶ ಹೊಸಮನಿ, ಅಶೋಕ ರಾಠೋಡ, ಶರಣು ಹಾವರಗಿ ಉಪಸ್ಥಿತರಿದ್ದರು.