ಅಬಕಾರಿ ದಾಳಿ : ೬ ಲೀ.ಕಳ್ಳಭಟ್ಟಿ ಸಾರಾಯಿ ಜಪ್ತಿ

ವಿಜಯಪುರ : ವಿಜಯಪುರ ಅಬಕಾರಿ ಇಲಾಖೆ ಅಧಿಕಾರಿಗಳು ತಿಕೋಟಾ ತಾಲೂಕಿನ ಕಳ್ಳಕವಟಗಿ ತಾಂಡಾ-೨ದ ಮನೆಯೊಂದರ ಮೇಲೆ ದಾಳಿ ನಡೆಸಿ, ೦೬ ಲೀ. ಕಳ್ಳಭಟ್ಟಿ ಸಾರಾಯಿ ಜಪ್ತಿ ಮಾಡಿಕೊಂಡು ಆರೋಪಿತ ಅನೀಲ ಪವಾರ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಅನೀಲ ಪತ್ತಾರ, ಮುಖ್ಯ ಪೇದೆ ಎ.ಎ.ನಾಗೂರ, ಎಂ.ಎಸ್.ಕೊಟ್ಟಲಗಿ, ಶ್ರೀಶೈಲ ಬಂಡಗಾರ ಭಾಗವಹಿಸಿದ್ದರು ಎಂದು ಅಬಕಾರಿ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.