ಮನೆ ಹಾಕಿಸುವದಾಗಿ ನಂಬಿಸಿ ದಾಖಲೆ ತಿದ್ದುಪಡಿಮಾಡಿ ವಂಚನೆ

Jun 24, 2025 - 18:24
 0
ಮನೆ ಹಾಕಿಸುವದಾಗಿ ನಂಬಿಸಿ ದಾಖಲೆ ತಿದ್ದುಪಡಿಮಾಡಿ ವಂಚನೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ತಾಳಿಕೋಟೆ : ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಭೀಮಣ್ಣ ಕೋಟಾರಸಸ್ತಿ ಎನ್ನುವ ವ್ಯಕ್ತಿ ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದಲ್ಲಿನ ನೂರಾರು ಜನರಿಗೆ ಮನೆ ಹಾಕಿಸುವದಾಗಿ ನಂಬಿಸಿ ಆಧಾರ ಕಾರ್ಡ ಮತ್ತು ಪಡಿತರ ಚೀಟಿ ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿಮಾಡಿರುವುದನ್ನು ರದ್ದುಗೊಳಿಸಿ ಮೊದಲಿನಂತೆ ತಿದ್ದುಪಡಿ ಮಾಡಿಕೊಡಿ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡಬೇಕೆಂದು ಭೀಮ ಆರ್ಮಿ ಜಿಲ್ಲಾಧ್ಯಕ್ಷ ದ್ಯಾವಪ್ಪ ದೊಡಮನಿ ಹಾಗೂ ಜೈಭೀಮ ಮುತ್ತಗಿ ನೇತೃತ್ವದಲ್ಲಿ ಸೋಮವಾರರಂದು ತಹಶಿಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ತಾಳಿಕೋಟಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಅತೀ ಹೆಚ್ಚು ಜನರು ಕೂಲಿ ಕೆಲಸ ಮತ್ತು ಒಕ್ಕಲುತನ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಮತ್ತು ಸಾಕಷ್ಟು ಜನ ಅವಿದ್ಯಾವಂತರು ಇದ್ದಾರೆ. ಇದರ ಬಗ್ಗೆ ಮಾಹಿತಿ ಅರೀತ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಭೀಮಣ್ಣ ಕೋಟಾರಗಸ್ತಿ ಅನ್ನುವ ವ್ಯಕ್ತಿ ೨೦೧೭-೧೮ ರಲ್ಲಿ ಅಸ್ಕಿ ಗ್ರಾಮಕ್ಕೆ ಬಂದು ಸುಮಾರು ೫೦ ರಿಂದ ೧೦೦ ಜನರಿಗೆ ನಿಮಗೆ ಸರ್ಕಾರದಿಂದ ಮನೆ ಹಾಕಿಸಿಕೊಡುತ್ತೇನೆ. ಅದಕ್ಕೆ ನೀವು ನಿಮ್ಮ ಆಧಾರ ಕಾರ್ಡ ಮತ್ತು ರೇಷನ್ ಕಾರ್ಡಗಳನ್ನು ನನಗೆ ಕೊಡಬೇಕು. ಮತ್ತು ಸರ್ಕಾರದಿಂದ ಮನೆ ಪಡೆಯಲು ಆನ್‌ಲೈನ್ ಅರ್ಜಿ ಹಾಕಬೇಕು ಎಂದು ಕರೆದುಕೊಂಡು ಹೋಗಿ ಇವರಿಗೆ ತಿಳಿಸದೇ (ಅಕ್ರಮವಾಗಿ ಈ ಗ್ರಾಮಸ್ಥರ ತಂಬ್ ಇಂಪ್ರೆಸ್ ಬಳಸಿಕೊಂಡು) ಇವರ ಆಧಾರ ಕಾರ್ಡ ಮತ್ತು ರೇಷನ್ ಕಾರ್ಡಗಳಲ್ಲಿ ವಿಳಾಸ ಅಸ್ಕಿ ಬದಲು ಆಲಮೇಲ ಎಂದು ನಮೋದಿಸಿ ಪ್ರತಿಯೊಬ್ಬರಿಂದ ೩೦ ಸಾವಿರದಿಂದ ೫೦ ಸಾವಿರದ ವರೆಗೆ ಹಣ ಪಡೆದುಕೊಂಡು ವಂಚಿಸಿದ್ದಾನೆ ಅಲ್ಲಿಂದ ಇಲ್ಲಿಯವರೆಗೆ ಮನೆಯೂ ಕೂಡಾ ಹಾಕಿಸಿಲ್ಲಾ ಮತ್ತು ಪಡೆದ ಹಣವನ್ನೂ ಕೂಡಾ ಮರಳಿಸಿಲ್ಲಾ ಜನರು ಕೊಟ್ಟ ಹಣವನ್ನಾದರೂ ಕೊಡು ಎಂದು ಕೇಳಿದರೆ ಅವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ಈ ವ್ಯಕ್ತಿ ಅಕ್ರಮವಾಗಿ ದಾಖಲಾತಿ ತಿದ್ದುಪಡಿ ಮಾಡಿ ವಂಚಿಸಿರುವದರಿAದ ಅಸ್ಕಿ ಗ್ರಾಮದ ಈ ಬಡವರು ಸರ್ಕಾರದಿಂದ ಬರುವ ಗೃಹಲಕ್ಷಿ ವೃದ್ಧಾಪೆ, ವಿದವಾ ವೇತನ ಮತ್ತು ಇತರೆ ಯಾವುದೇ ಸೇವೆಗಳು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಗ್ರಾಮಸ್ಥರು ಸದ್ಯ ಭೀಮ ಆರ್ಮಿ ಸಂಘಟನೆಯ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದು ಅನ್ಯಾಯಕೊಳಗಾದ ಜನರೊಂದಿಗೆ ನಮ್ಮ ಸಂಘಟನೆ ನಿಂತಿದ್ದು ಈ ವಿಷಯದ ಬಗ್ಗೆ ಈ ಹಿಂದೆಯೂ ಕೂಡಾ ತಾಳಿಕೋಟೆಯ ಹಿಂದಿನ ತಹಸೀಲ್ದಾರರಿಗೆ ಮನವಿ ಮಾಡಿಕೊಂಡಿದ್ದಾರೆ. ಮತ್ತು ಕಲಕೇರಿ ಪೋಲಿಸ್ ಠಾಣೆಯಲ್ಲಿ ಪಿ.ಎಸ್.ಐ ರವರ ಬಳಿ ಕೂಡಾ ಮನವಿ ಮಾಡಿಕೊಂಡಿದ್ದಾರೆ ಆದರೂ ಯಾವುದೇ ಪ್ರಯೋಜನೆಯಾಗಿರುವುದಿಲ್ಲ ಸದರಿ ಅಸ್ಕಿ ಗ್ರಾಮದಲ್ಲಿ ಈ ರೀತಿಯಾಗಿ ಅಕ್ರಮವಾಗಿ ವಿಳಾಸ ಬದಲಾವಣೆಯಾದವರ ವಿವರ ಪಡೆದು ಆ ಎಲ್ಲರ ದಾಖಲೆಗಳಲ್ಲಿ ಕೂಡಲೇ ವಿಳಾಸ ಬದಲಾವಣೆ ಮಾಡಿ ಮೊದಲಿದ್ದ ಹಾಗೆ ವಿಳಾಸ ತಿದ್ದುಪಡಿ ಮಾಡಬೇಕು. ಮತ್ತು ಈ ಗ್ರಾಮಸ್ಥರಿಗೆ ಈ ರೀತಿಯಾಗಿ ವಂಚಿಸಿರುವ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಭೀಮಣ್ಣ ಕೋಟಾರಗಸ್ತಿ ಯ ಮೇಲೆ ಕೂಡಲೇ ಕ್ರಿಮಿನಲ್ ಮೊಕ್ಕದ್ದಮೆ ಹಾಕಿ ಈತನನ್ನು ಜೈಲಿಗೆ ಕಳುಹಿಸಬೇಕು ಎಂದು ಅಸ್ಕಿ ಗ್ರಾಮದ ವಂಚನೆಗೊಳಗಾದ ಬಡವರ ಪರವಾಗಿ ಒತ್ತಾಯಿಸುತ್ತದೆ ಎಂದು ವಂಚನೆಗೊಳಗಾದ ಜನರ ವಿವರದೊಂದಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮನವಿ ಪತ್ರವನ್ನು ತಹಶಿಲ್ದಾರ ಶ್ರೀಮತಿ ವಿನಯಾ ಹೂಗಾರ ಅವರಿಗೆ ಸಲ್ಲಿಸಿದರು. ಈ ಸಮಯದಲ್ಲಿ ಗಂಗಾಬಾಯಿ ಬಜಂತ್ರಿ, ಕಸ್ತೂರಿಬಾಯಿ ದೇಸಾಯಿ, ರೇಣುಕಾ ಅಂಬಲಗಿ, ಗಿರಿಜಾ ಭಂಜAತ್ರಿ, ಮಶಬಿ ವಾಲಿಕಾರ, ಮಂಜುಳಾ ಭಜಂತ್ರಿ, ಮದುಮತಿ ತಳವಾರ, ಕಸ್ತೂರಿಬಾಯಿ ತಳವಾರ, ನಿಜಲಿಂಗಪ್ಪ ತಳವಾರ, ಒಳಗೊಂಡು ಅನೇಕರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.