ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಜಿ.ಬಿ.ಮಂಗಳಗಟ್ಟಿ ಸ್ಮರಣಾರ್ಥ ಸಪ್ತಾಹ ಮಂಗಲ

ಬೆಂಗಳೂರು : ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯ ನಾಮಧಾರಿಕರಾದ ಜಿ.ಬಿ.ಮಂಗಳಗಟ್ಟಿ ಅವರ ಹಾಗೂ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ ಸ್ಮರಣಾರ್ಥ ಆಧ್ಯಾತ್ಮ ಸಪ್ತಾಹ ಶುಕ್ರವಾರ ಬೆಂಗಳೂರಿನಲ್ಲಿರುವ ಮಾಧವಾನಂದ. ಜಿ. ಮಂಗಳಗಟ್ಟಿ ರವರ ಮನೆಯಲ್ಲಿ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ರೇವಣಸಿದ್ದೇಶ್ವರ ಶ್ರೀಗಳು ಜಿ.ಬಿ.ಮಂಗಳಗಟ್ಟಿರವರ ಕುರಿತು ಮಾತನಾಡಿ ಶ್ರೀ ಸದ್ಗುರು ಸಮರ್ಥ ಶಿವಪ್ರಭು ಮಹಾರಾಜರಿಂದ ನಾಮೋಪದೆಶ ಪಡೆದು ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜೀ ಅವರ ಸಂಗಡ ಸತತ ಒಡನಾಟಹೊಂದಿ ಸರ್ವೋದಯ ಪಾದಯಾತ್ರೆ, ದಿಂಡಿಪಾದಯಾತ್ರೆ ಇನ್ನೂ ಹಲವಾರು ಆಧ್ಯಾತ್ಮಿಕ ಕಾರ್ಯಗಳನ್ನು ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜೀ ಅವರ ಆದೇಶದಂತೆ ಆಧ್ಯಾತ್ಮ ಚಟುವಟಿಕೆಗಳಲ್ಲಿ ಕೈಜೋಡಿಸಿ ಕಲಬುರಗಿಯಲ್ಲಿ ಭವ್ಯ ಆಶ್ರಮಸ್ಥಾಪಿಸಲು ಹಗಲಿರುಳು ಶ್ರಮಿಸಿದವರು ಸಪ್ತಾಹ, ಭಜನೆ, ನಿತ್ಯನೇಮ, ಧ್ಯಾನ ಮಾಡಿಕೊಂಡು ಸದ್ಗುರುವಿನ ಸಾನಿಧ್ಯದಲ್ಲಿ ಕಾಲವನ್ನು ಕಳೆದವರು. ತಮ್ಮ ಇಡೀ ಬದುಕು ಆಧ್ಯಾತ್ಮಿಕತೆಯಲ್ಲಿ ತೊಡಗಿಸಿ ತುಂಬು ಜೀವನ ನಡೆಸಿದ ಸಾಧಕ ಜೀವಿ ಎಂದು ಬಣ್ಣಿಸಿದರು.
ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದದ ವಿಮಲಬ್ರಹ್ಮ ನಿರೂಪಣೆ. ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಸಪ್ತಾಹ ಮಂಗಲಗೊAಡಿತು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿರುವ ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.