ಬಸವಣ್ಣನವರ ವಚನ ಇಂಗ್ಲಿಷಗೆ ಭಾಷಾಂತರಿಸಿದ ಡಿವೈಎಸ್ಪಿ ಬಸವರಾಜ ಯಲಿಗಾರ ಅಭಿನಂದಾರ್ಹರು

Jun 24, 2025 - 18:34
 0
ಬಸವಣ್ಣನವರ ವಚನ ಇಂಗ್ಲಿಷಗೆ ಭಾಷಾಂತರಿಸಿದ ಡಿವೈಎಸ್ಪಿ ಬಸವರಾಜ ಯಲಿಗಾರ ಅಭಿನಂದಾರ್ಹರು

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ಡಿವೈಎಸ್ಪಿ  ಬಸವರಾಜ ಯಲಿಗಾರ ಬಸವಣ್ಣನವರ ವಚನಗಳನ್ನು  ಇಂಗ್ಲಿಷ ಮಾಧ್ಯಮಕ್ಕೆ  ಭಾಷಾಂತರಿಸಿ  ನಾಡಿನ ಕೀರ್ತಿ  ಹಾಗು  ಘನತೆ ಹೆಚ್ಚಿಸುವ ಕಾರ್ಯ ಮಾಡಿದ್ದಾರೆಂದು ಕಸಾಪ  ಸಂಘಟನಾ ಕಾರ್ಯದರ್ಶಿ ಮಹಮ್ಮದಗೌಸ ಹವಾಲ್ದಾರ ಅಭಿಪ್ರಾಯ ವ್ಯಕ್ತಪಡಿಸಿದರು.            

ಮಂಗಳವಾರ  ಮುಂಜಾನೆ  ಡಿಎಸ್‌ಪಿ ಕಛೇರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗು ವಚನ ಸಾಹಿತ್ಯ ಸಂಸ್ಕೃತಿ ವೇದಿಕೆಯ ಪದಾಧಿಕಾರಿಗಳು ಬಸವರಾಜ ಯಲಗಾರ ಅವರನ್ನು ಗೌರವಿದರು.            

ಈ ಸಂದರ್ಭದಲ್ಲಿ  ಮಾತನಾಡಿದ ಮಹಮ್ಮದಗೌಸ ಹವಾಲ್ದಾರ ಇಂಗ್ಲಿಷ ಮಾಧ್ಯಮ ವಚನ ಸಾಹಿತ್ಯ ವಿಶ್ವಕ್ಕೆಲ್ಲ  ಪರಿಚಯಿಸಿದ ಕೀರ್ತಿ  ಬಸವರಾಜ ಯಲಗಾರ ಅವರಿಗೆ ಸಲ್ಲುತ್ತದೆ ಎಂದರು. ಜಿಲ್ಲಾ ಕಸಾಪ  ಸಂಘಟನಾ  ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಮಾತನಾಡಿ ಜಗತ್ತಿನ ಎಲ್ಲ ರಾಷ್ಟ್ರಗಳು  ಬಸವಣ್ಣನವರ ವಚನಗಳನ್ನು ಸ್ವೀಕರಿಸುತ್ತಿದ್ದಾರೆ. ಇಂತಹ ಅಪರೂಪದ ಸಂದರ್ಭದಲ್ಲಿ  mಥಿ me is ಣhee ಎಂಬ ವಚನಗಳ  ಭಾಷಾಂತರ ಮಾಡುವ ಮೂಲಕ  ಬಸವಣ್ಣನವರ ವಚನ ಸಾಹಿತ್ಯ  ವಿಶ್ವಕ್ಕೆ  ಪರಿಚಯಿಸುತ್ತಿರುವದು   ನಾಡಿನ  ಬಸವಾದಿ ಅನುಯಾಯಿಗಳು ಅತ್ಯಂತ ಸಂತೋಷ ವ್ಯಕ್ತಪಡಿಸುತ್ತಿದ್ದಾನೆ ಎಂದರು.      

ವಚನ ಸಾಹಿತ್ಯ ಸಂಸ್ಕೃತಿ ವೇದಿಕೆಯ ಅಧ್ಯಕ್ಷ ವಿ ಎಸ್ ಖಾಡೆ  ಮಾತನಾಡಿ ಬಸವರಾಜ ಯಲಗಾರ ಅವರು ಪೋಲೀಸ ಇಲಾಖೆಯಲ್ಲಿ ಇದ್ದುಕೊಂಡು  ಈ ಸಾಧನೆ  ಮಾಡಿದ್ದು ಅತ್ಯಂತ ಸಂತೋಷದ ಸಂಗತಿ  ಎಂದರು.                    

ಕಾರ್ಯಕ್ರಮದಲ್ಲಿ  ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪದಾಧಿಕಾರಿಗಳಾದ ಸಂಗಮೇಶ ಮೇತ್ರಿ. ವಿಜಯಲಕ್ಷ್ಮಿ  ಹಳಕಟ್ಟಿ. ಎಸ್ ಎಮ ಕಣಬೂರ. ಎನ್ ಆರ ಕುಲಕರ್ಣಿ. ಆಶಾ ಬಿರಾದಾರ.ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಬಿ ಎಂ ಅಜೂರ ಮಮತಾ ಮುಳಸಾವಳಗಿ ಮುಂತಾದವರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.