ಮೊಹರಂ ಹಬ್ಬ ಭಾವೈಕ್ಯತೆಯ ಸಾಗರ ; ಬಾಳನಗೌಡ ಪಾಟೀಲ

Jul 6, 2025 - 10:12
 0
ಮೊಹರಂ ಹಬ್ಬ ಭಾವೈಕ್ಯತೆಯ ಸಾಗರ ; ಬಾಳನಗೌಡ ಪಾಟೀಲ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಕೊಲ್ಹಾರ : ಮೊಹರಂ ಉತ್ಸವ ಇಸ್ಲಾಂ ಸಂಸ್ಕೃತಿಯಲ್ಲಿ ಹುಟ್ಟಿದರೂ ಹಿಂದೂ ಧರ್ಮದೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ದೇಶದೆಲ್ಲೆಡೆ ಹಿಂದೂ- ಮುಸ್ಲಿಂ ಜನರು ಒಟ್ಟಾಗಿ ಭಕ್ತಿ - ಭಾವ - ಪ್ರೀತಿಯಿಂದ  ಆಚರಣೆ ಮಾಡಲಾಗುತ್ತದೆ. ಹೀಗಾಗಿ ಮೊಹರಂ ಹಬ್ಬ ಭಾವೈಕ್ಯತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಅಭಿಪ್ರಾಯಪಟ್ಟರು.
           ಕೊಲ್ಹಾರ ತಾಲೂಕಿನ ಕವಲಗಿ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಕನ್ನಡ ಜಾನಪದ ಪರಿಷತ್ ವತಿಯಿಂದ ಏರ್ಪಡಿಸಿದ " ರಿವಾಯತ ಸಂಬ್ರಮ " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ರಿವಾಯತ ಹಾಡು ಮತ್ತು ಹೆಜ್ಜೆ ಕುಣಿತ ಕಲೆ ಜಾನಪದ ಸಂಸ್ಕೃತಿಯನ್ನು ಜೀವಂತವಾಗಿಟ್ಟಿದೆ. ಜಾನಪದ ಕಲಾವಿದರಿಗೆ ಸಮಾಜ ಮತ್ತು ಸರಕಾರ ಸಹಾಯ - ಸಹಕಾರ ನೀಡಬೇಕೆಂದು ಕರೆ ನೀಡಿದರು.
           ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಸದಸ್ಯ ಕಲಾವಿದ ಮೌಲಾಸಾಹೇಬ ಜಹಾಗೀರದಾರ ಕಲಾವಿದರು ಕಷ್ಟಪಟ್ಟು ಕಲೆ ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದಾರೆ. ಜಾನಪದ ಕಲಾವಿದರನ್ನು ಜನರು ಮತ್ತು ಸರಕಾರ ಅನಾದಾರದಿಂದ ನೋಡುತ್ತಿರುವುದು ಬೇಸರವಾಗುತ್ತಿದೆ. ಸರಕಾರಕ್ಕಿಂತ ಸಮುದಾಯದ ಬೆಂಬಲ ಬೇಕಾಗಿದೆ ಎಂದರು.
          ಕನ್ನಡ ಜಾನಪದ ಪರಿಷತ್ ಕೊಲ್ಹಾರ ತಾಲೂಕು ಅಧ್ಯಕ್ಷ ಮಲ್ಲಪ್ಪ ಗಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ರಿವಾಯತ ಕಲೆ ಕುರಿತು ಹೇಳಿದರು.
             ಕೂಡಗಿ ವಲಯ ಘಟಕದ ಅಧ್ಯಕ್ಷ ದುಂಡಯ್ಯ ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
      ವೇದಿಕೆಯಲ್ಲಿ ಶಿವರುದ್ರಯ್ಯ ಹೀರೆಮಠ, ಈರಯ್ಯ ಮಠಪತಿ, ಹಣಮಂತ ಸೌದಿ,ಚಂದ್ರಮಪ್ಪ ಹೊನರಡ್ಡಿ,ಯಲ್ಲಪ್ಪಗೌಡ ಬಿರಾದಾರ , ಭೀಮಶಿ ಬೀಳಗಿ, ಮಲ್ಲಪ್ಪ ದೇಸಾಯಿ, ಪರಪ್ಪ ಕುಂಬಾರ, ಅರುಣ ಗಾಣಿಗೇರ, ಶಂಕ್ರಪ್ಪ ತಳವಾರ, ರಾಮನಿಂಗ ಜೀರಗಾಳ ಮತ್ತು ಪರಶುರಾಮ ಕುಂಬಾರ ಉಪಸ್ಥಿತರಿದ್ದರು.
      ಭಾಗವಹಿಸಿದ ಕಲಾವಿದರನ್ನು ಸನ್ಮಾನಿಸಲಾಯಿತು.
ಕೂಡಗಿ,ಉಪ್ಪಲದಿನ್ನಿ, ಹನಮಾಪುರ , ಕವಲಗಿ, ಜೈನಾಪುರ, ಕೊಲ್ಹಾರ , ಅರಸುಣಗಿ, ಸುಳಖೋಡ ಮತ್ತು ಬಳೂತಿ ಕಲಾವಿದರು ಇಡಿ ರಾತ್ರಿ ಕಲಾ ಪ್ರದರ್ಶನ ನಡೆಸಿದರು.
    ಶಿಕ್ಷಕ ಮಂಜುನಾಥ ದಳವಾಯಿ ನಿರೂಪಿಸಿದರು. ಅನಿಲ ತಳವಾರ ವಂದಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.