ಮೃತ ವೃದ್ಧನ ಸಂಬ0ಧಿಕರ ಪತ್ತೆಗೆ ಮನವಿ

Jun 24, 2025 - 18:35
 0
ಮೃತ ವೃದ್ಧನ ಸಂಬ0ಧಿಕರ ಪತ್ತೆಗೆ ಮನವಿ
ಕಲಬುರಗಿ : ದಿನಾಂಕ: ೧೮-೦೬-೨೦೨೫ ರಂದು ರಾತ್ರಿ ಸುಮಾರ ೯.೩೦ ಗಂಟೆಗೆ ನಂದಿಕೂರ ಗ್ರಾಮದ ಆಕಾಶವಾಣಿ ವಸತಿ ಗೃಹದ ಹತ್ತಿರದ ರಸ್ತೆಯ ಮೇಲೆ ಆಟೋ ರಿಕ್ಷಾ ಚಾಲಕರಾದ ಮಲ್ಲಿಕಾರ್ಜುನ ಕೊಗನೂರ ಇವರು ನಂದಿಕೂರ ಕ್ರಾಸ್‌ದಿಂದ ಕಲಬುರಗಿ ಕಡೆಗೆ ಹೋಗುವ ಆಟೋ ರಿಕ್ಷಾವನ್ನು ಅತೀವೇಗ ಹಾಗೂ ಆಲಕ್ಷö್ಯತನದಿಂದ ಚಲಾಯಿಸಿಕೊಂಡು ಬಂದು ಸುಮಾರು ೫೦ ರಿಂದ ೫೫ ವರ್ಷದ ಅಪರಿಚಿತ ವೃದ್ಧನಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ಭಾರಿಗಾಯಗೊಂಡು  ಅಪಘಾತಕ್ಕಿಡಾದ ವೃದ್ಧನ ಉಪಚಾರಕ್ಕಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಉಪಚಾರ ಪಡೆದು ಆದರೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: ೨೨-೦೬-೨೦೨೫ ರಂದು ಸಂಜೆ ೪.೦೪ ಗಂಟೆಗೆ ಮೃತಪಟ್ಟಿರುತ್ತಾರೆ ಎಂದು ಕಲಬುರಗಿ ನಗರ ಸಂಚಾರ ಪೊಲೀಸ್ ಠಾಣೆ-೦೧ರ ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ. ಈ ಮೃತಪಟ್ಟ ವೃದ್ಧನು ೫ ಅಡಿ ೩ ಇಂಚು ಎತ್ತರ ಇದ್ದು, ಸಾಧಾ ಕಪ್ಪು ಬಣ್ಣ, ಚಪ್ಪಟೆ ಮುಖ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದು, ಮುಖದ ಮೇಲೆ ಗಡ್ಡ ಹಾಗೂ ತಲೆಯಲ್ಲಿ ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು ಇರುತ್ತದೆ. ಬಲಗೈ ಹೆಬ್ಬಟ್ಟಿನ ಮೇಲೆ ತೊನ್ನಿನ ಗುರುತು ಇರುತ್ತದೆ. ಮೃತಪಟ್ಟ ವೃದ್ಧನ ಶವವನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಯ ಕೂಲಿಂಗ್ ಸ್ಟೋರ್‌ನಲ್ಲಿ ಇಡಲಾಗಿದೆ.  ಈರವರೆಗೆ ಮೃತಪಟ್ಟ ವೃದ್ಧನ ಸಂಬAಧಿಕರು ಪತ್ತೆಯಾಗಿರುವುದಿಲ್ಲ.  
ಈ ಮೃತ ವೃದ್ಧನ ಸಂಬAಧಿಕರು ಯಾರಾದರೂ ಇದ್ದಲ್ಲಿ  ಸಂಚಾರಿ  ಪೊಲೀಸ್ ಠಾಣೆ-೦೧ ಕಲಬುರಗಿ ನಗರ ಅಥವಾ ಪೊಲೀಸ್ ನಗರ ನಿಯಂತ್ರಣ ಕೋಣೆಗೆ ತಿಳಿಸಬೇಕು. ದೂರವಾಣಿ ಸಂಖ್ಯೆ ೦೮೪೭೨-೨೬೩೬೨೫, ೯೪೮೦೮೦೫೫೩೦, ನಿಯಂತ್ರಣ ಕೋಣೆ ಸಂಖ್ಯೆ ೦೮೪೭೨-೨೨೮೧೧೩, ೨೨೮೧೧೨ ಗಳಿಗೆ ಸಂಪರ್ಕಿಸಬೇಕೆAದು ಅವರು ತಿಳಿಸಿದ್ದಾರೆ. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.