ನಾಳೆ ನಿಂಬೆ ನಾಡಿಗೆ ಸಿಎಂ ಡಿಸಿಎಂ

Jul 13, 2025 - 08:59
 0
ನಾಳೆ ನಿಂಬೆ ನಾಡಿಗೆ ಸಿಎಂ ಡಿಸಿಎಂ
೪೫೫೭ ಕೋಟಿಯ ವಿವಿಧ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನೆ | ಲೋಕಾರ್ಪಣೆ | ಸಚಿವರುಗಳು ಶಾಸಕರುಗಳು ಭಾಗಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ವಿಜಯಪುರ : ಜಿಲ್ಲಾಡಳಿತ ವತಿಯಿಂದ ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಸಮಾರಂಭ ನಾಳೆ ಜುಲೈ ೧೪ರಂದು ಇಂಡಿ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದೆ.         

ಅಂದು ಬೆಳಿಗ್ಗೆ ೧೧ ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ೪೫೫೭ ಕೋಟಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಉಪಸ್ಥಿತರಿರಲಿದ್ದು, ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.

                             
ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್, ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ,  ವಸತಿ ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಬಿ.ಜಡ್ ಜಮೀರ್ ಅಹ್ಮದ ಖಾನ್, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪೂರ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಪಶು ಸಂಗೋಪನೆ ಮತ್ತು ಪೌರಾಡಳಿ ಖಾತೆ ಸಚಿವ ರಹೀಮ್ ಖಾನ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ಎಸ್.ತಂಗಡಗಿ, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಖಾತೆ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ, ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಸೇರಿದಂತೆ ವಿವಿಧ ಇಲಾಖೆಯ ಸಚಿವರು, ವಿವಿಧ ಜನಪ್ರತಿನಿಧಿಗಳು, ಜಿಲ್ಲೆಯ ವಿವಿಧ ಶಾಸಕರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

                         
ಶಂಕು ಸ್ಥಾಪನೆ ಕಾಮಗಾರಿಗಳು :                 
ಅಂದು ನಡೆಯುವ ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಇಲಾಖೆಯ ವತಿಯಿಂದ ೨೩೨.೪೪ ಕೋಟಿ ವೆಚ್ಚದಲ್ಲಿ ಇಂಡಿ ಮತ್ತು ಚಡಚಣ ತಾಲೂಕಿನ ೧೯ ಕೆರೆಗಳನ್ನು ತುಂಬುವ ಯೋಜನೆ, ಆರ್‌ಡಿಡಬ್ಲೂö್ಯಎಸ್ ಹಾಗೂ ಎಸ್ ಇಲಾಖೆಯ ೯.೧೦ಕೋಟಿ ರೂ. ವೆಚ್ಚದ ಜಲ ಜೀವನ ಮಿಷನ್ ಬ್ಯಾಚ್-೧ರ ೩೧ ಕಾಮಗಾರಿಗಳು, ೮೦.೩೨ ಕೋಟಿ ವೆಚ್ಚದ ಜಲ ಜೀವನ ಮಿಷನ್ ಬ್ಯಾಚ್-೨ರ ೬೭ ಕಾಮಗಾರಿಗಳು, ೧೨ ಕೋಟಿ ವೆಚ್ಚದ ಜಲ ಜೀವನ ಮಿಷನ್ ಬ್ಯಾಚ್-೩ರ ೧೯ ಕಾಮಗಾರಿಗಳು ಹಾಗೂ ೩.೨೩ ಕೋಟಿ ವೆಚ್ಚದ ಜಲ ಜೀವನ ಮಿಷನ್ ಬ್ಯಾಚ್-೪ರ ೯ ಕಾಮಗಾರಿಗಳು ಲೋಕಾರ್ಪಣೆ ನೆರವೇರಲಿದೆ.         

ನಗರಾಭಿವೃದ್ಧಿ ಇಲಾಖೆ ವತಿಯಿಂದ  ೩೦ ಕೋಟಿ ರೂ. ವೆಚ್ಚದಲ್ಲಿ ಇಂಡಿ ನಗರದಲ್ಲಿ ನೂತನವಾಗಿ ನಿರ್ಮಾಣವಾದ ೨೪೪ ವಾಣಿಜ್ಯ ಮಳಿಗೆಗಳ  ಶ್ರೀ ಸಿದ್ದೇಶ್ವರ ಬೃಹತ್ ವಾಣಿಜ್ಯ ಸಂಕೀರ್ಣ ಮಾರುಕಟ್ಟೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೬.೫೦ ಕೋಟಿ ರೂ.  ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ೨.೧೫ ಕೋಟಿ ರೂ. ವೆಚ್ಚದಲ್ಲಿ ಇಂಡಿ ನಗರದ ಪ್ರಗತಿ ಕಾಲೋನಿ ಸಿ.ಸಿ.ರಸ್ತೆ, ೧.೫೨ ಕೋಟಿ ರೂ. ವೆಚ್ಚದ ಇಂಡಿ ಮತಕ್ಷೇತ್ರದ ಹೊರ್ತಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿಗಳಿಗೆ ಹೆಚ್ಚುವರಿ ಕೊಠಡಿಗಳು ಹಾಗೂ ಮೂಲಭೂತ ಸೌಕರ್ಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ೧೦ ಕೋಟಿ ರೂ. ವೆಚ್ಚದಲ್ಲಿ  ಇಂಡಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಲೋಕಾರ್ಪಣೆ ನೆರವೇರಲಿದೆ.    

ಸಣ್ಣ ನೀರಾವರಿ ಇಲಾಖೆ ವತಿಯಿಂದ ೩ ಕೋಟಿ ರೂ. ವೆಚ್ಚದಲ್ಲಿ ಮಿರಗಿ ಗ್ರಾಮದ ಹಳ್ಳಕ್ಕೆ ಬ್ರಿಡ್ಜ್ ಕಂ. ಬ್ಯಾರೇಜ್, ೧ ಕೋಟಿ ರೂ. ವೆಚ್ಚದಲ್ಲಿ ಇಂಡಿ ನಗರದ ಹೀರೇ ಇಂಡಿ ಹನುಮಾನ ಗುಡಿಯಿಂದ ಜಲದಪ್ಪನ ಕೆರೆವರೆಗೆ ಹಳ್ಳದ ಅಭಿವೃದ್ಧಿ, ೧ ಕೋಟಿ ರೂ. ವೆಚ್ಚದಲ್ಲಿ ಆಳೂರ ಗ್ರಾಮದಲ್ಲಿ ಸರ್ವೆ ನಂ. ೧೨೮ ರಲ್ಲಿ ಬಾಂದಾರ, ೧ ಕೋಟಿ ರೂ. ವೆಚ್ಚದಲ್ಲಿ ನಿಂಬಾಳ ಗ್ರಾಮದ ಸಣ್ಣ ನೀರಾವರಿ ಕೆರೆ ಅಭಿವೃದ್ಧಿ, ೫೦ ಲಕ್ಷ  ರೂ. ವೆಚ್ಚದಲ್ಲಿ ಹಿರೇಬೇವನೂರ ಗ್ರಾಮದ ಇಂಗು ಕೆರೆ ಅಭಿವೃದ್ಧಿ, ೫೦ ಲಕ್ಷ ರೂ. ವೆಚ್ಚದಲ್ಲಿ  ಹಡಲಸಂಗ ಗ್ರಾಮದ ಸಣ್ಣ ನೀರಾವರಿ ಕೆರೆ ಅಭಿವೃದ್ಧಿ, ಕಾಲೇಜು ಇಲಾಖೆ ವತಿಯಿಂದ ೧ ಕೋಟಿ ರೂ. ವೆಚ್ಚದಲ್ಲಿ ಝುಳಕಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ೧.೭೫ ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಂಡಿ, ಶಿಕ್ಷಣ ಇಲಾಖೆ ವತಿಯಿಂದ ೧.೪೬ ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಪ್ರೌಢ ಶಾಲೆ ಕಟ್ಟಡ ಸಾತಲಗಾಂವ ಪಿ.ಆಯ್., ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ೬೬ ಲಕ್ಷ ರೂ. ವೆಚ್ಚದಲ್ಲಿ ಇಂಡಿ ತಾಲೂಕಿನ ೪ ಅಂಗನವಾಡಿ ಕಟ್ಟಡಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ೧.೨೦ ಕೋಟಿ ರೂ. ವೆಚ್ಚದಲ್ಲಿ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಅಗರಖೇಡ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿಗಳ ವಸತಿ ಗೃಹ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ೧ ಕೋಟಿ ರೂ. ವೆಚ್ಚದಲ್ಲಿ ಝಳಕಿ ಡಿಪ್ಲೋಮಾ ಕಾಲೇಜಿನ ಹೆಚ್ಚುವರಿ ಕೊಠಡಿಗಳು ಸೇರಿದಂತೆ ಒಟ್ಟು ೪೦೧.೩೩ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಮಗಾರಿಗಳ ಲೋಕಾರ್ಪಣೆ ನೆರವೇರಲಿದೆ.
             

ಶಂಕುಸ್ಥಾಪನೆ ಕಾಮಗಾರಿಗಳು :                 

ಜಲ ಸಂಪನ್ಮೂಲ ಇಲಾಖೆ ವತಿಯಿಂದ ೮೧೮.೮೦ ಕೋಟಿ ರೂ. ವೆಚ್ಚದ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಹಂತ-೧, ೮೮೦.೬೭ ಕೋಟಿ ರೂ. ವೆಚ್ಚದ ಹಂತ-೨, ೧೪೦೦ ಕೋಟಿ ರೂ. ವೆಚ್ಚದ ಹಂತ ೩ ಕಾಮಗಾರಿ, ೫೩೪ ಕೋಟಿ ರೂ. ವೆಚ್ಚದಲ್ಲಿ ತಿಡಗುಂದಿ ಶಾಖಾ ಕಾಲುವೆಯ ವಿಸ್ತರಣೆ ಕಿ.ಮೀ. ೫೬.೦೦ ರಿಂದ ೬೫.೫೮ ವರೆಗಿನ ವಿತರಣಾ ಜಾಲ ನಿರ್ಮಾಣದ ಕಾಮಗಾರಿ, ಲೋಕೋಪಯೋಗಿ ಇಲಾಖೆ ವತಿಯಿಂದ ೨೫೫ ಕೋಟಿ ರೂ. ವೆಚ್ಚದ ಚಡಚಣ-ಗಾಣಗಾಪೂರ (೧೧೫ ಕಿ.ಮೀ.) ರಸ್ತೆ ಅಭಿವೃದ್ಧಿ (ಇಂಡಿ ಮತಕ್ಷೇತ್ರದ ೪೮ ಕಿ.ಮೀ.), ೬೫.೪೦ಕೋಟಿ ರೂ. ವೆಚ್ಚದ  (ಪಡನೂರ-ಅಂಕಲಗಿ) ಭೀಮಾ ನದಿಗೆ ಸೇತುವೆ ಕಾಮಗಾರಿ, ೧೦ ಕೋಟಿ ರೂ. ವೆಚ್ಚದ, ಇಂಡಿ ರೈಲು ನಿಲ್ಯಾಣದಿಂದ ಹಲಸಂಗಿ ರಾಷ್ಟ್ರೀಯ ಹೆದ್ದಾರಿವರೆಗೆ ರಸ್ತೆ ಸುಧಾರಣೆ ಕಾಮಗಾರಿ (ಓಊ-೫೨), ೬.೫೦ ಕೋಟಿ ರೂ. ವೆಚ್ಚದ ಔರಾದ ಸದಾಶಿವಗಡ ರಾಜ್ಯ ಹೆದ್ದಾರಿ ೩೪ ರಸ್ತೆ ಸುಧಾರಣೆ ಕಾಮಗಾರಿ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ೭೩.೭೫ ಕೋಟಿ ರೂ. ವೆಚ್ಚದಲ್ಲಿ ಇಂಡಿ ಪಟ್ಟಣದಲ್ಲಿ ಜಿ.ಟಿ.ಟಿ.ಸಿ. ಕಾಲೇಜು ನಿರ್ಮಾಣ ಕಾಮಗಾರಿ, ಪಿ.ಆರ್.ಇ.ಡಿ ಇಲಾಖೆ ವತಿಯಿಂದ ೨೧ ಕೋಟಿ ರೂ. ವೆಚ್ಚದಲ್ಲಿ ಪ್ರಗತಿ ಪಥ ಯೋಜನೆಯಡಿ ರಸ್ತೆ ಕಾಮಗಾರಿ, ೧೦ ಕೋಟಿ ರೂ. ವೆಚ್ಚದ ಅತಿವೃಷ್ಠಿಯಿಂದ ಹಾನಿಗೊಳಗಾದ ರಸ್ತೆ ಅಭಿವೃದ್ಧಿ ಕಾಮಗಾರಿ ಲೆಕ್ಕೆ ಶಿರ್ಷಿಕೆ ೫೦೫೪, ೧ಕೋಟಿ ರೂ. ವೆಚ್ಚದ  ಶುಗರ್ ಸೆಸ್ ಅನುದಾನದಡಿ ಹಲಸಂಗಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೭ ಕೋಟಿ ರೂ. ವೆಚ್ಚದ ಡಾ. ಬಿ. ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಲಚ್ಯಾಣ ಗ್ರಾಮದ ಬಾಲಕರ ವಸತಿ ನಿಲಯ ಕಾಮಗಾರಿ, ೧.೬೦ ಕೋಟಿ ರೂ. ವೆಚ್ಚದ ಇಂಡಿ ತಾಲೂಕಿನ ಗಣವಲಗಾ ಗುಬ್ಬೇವಾಡ, ಮಿರಗಿ, ಭೀಮನಗರ ಚಿಕ್ಕಮಣೂರ ಸಾತಲಗಾಂವ ನಾದ ಕೆ.ಡಿ. ರೋಡಗಿ, ಹಿಂಗಣಿ, ಗ್ರಾಮ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿ, ೧.೩೩ ಕೋಟಿ ರೂ. ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿಗಳಿಗೆ ಹೆಚ್ಚುವರಿ ಕೊಠಡಿಗಳು ಹಾಗೂ ಮೂಲಭೂತ ಸೌಕರ್ಯ (ಹಳಗುಣಕಿ ಹಿರೇಬೇವನೂರ ಹೊರ್ತಿ, ಇಂಡಿ ನಗರ) ಕಾಮಗಾರಿ, ೧ ಕೋಟಿ ರೂ. ವೆಚ್ಚದ ಇಂಡಿ ತಾಲೂಕಿನ ವಿವಿಧ ಗ್ರಾಮಗಳ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಮುಂದುವರೆದ ಕಾಮಗಾರಿ, ೫೦ ಲಕ್ಷ ರೂ. ವೆಚ್ಚದ ಇಂಡಿ ನಗರದ ಶಿವಶರಣ ಹರಳಯ್ಯ ಸಮುದಾಯ ಭವನ ಕಾಮಗಾರಿ, ೪೦ ಲಕ್ಷ ರೂ. ವೆಚ್ಚದ ಇಂಡಿ ತಾಲೂಕಿನ ಸಾಲೋಟಗಿ, ಮಿರಗಿ ಗ್ರಾಮಗಳ ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ೮.೬೬ ಕೋಟಿ ವೆಚ್ಚದ ಇಂಡಿಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಾಮಗಾರಿ, ೧ ಕೋಟಿ ರೂ. ವೆಚ್ಚದಲ್ಲಿ ಇಂಡಿ ನಗರದ ಹುಸೇನಭಾ?À ದರ್ಗಾದ ಜೀರ್ಣೋದ್ವಾರಕ್ಕೆ ಹಾಗೂ ಮೂಲಭೂತ ಸೌಕರ್ಯಗಳ ನಿರ್ಮಾಣ ಕಾಮಗಾರಿ, ೫೦ ಲಕ್ಷ ರೂ. ವೆಚ್ಚದಲ್ಲಿ  ಇಂಡಿ ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯ ಬಳಿ ಶಾದಿ ಮಹಲ್ ಕಾಮಗಾರಿ, ೨೫ ಲಕ್ಷ ರೂ. ವೆಚ್ಚದಲ್ಲಿ ಇಂಡಿ ನಗರದ ಶ್ರೀ ೧೦೦೮ ಆದಿನಾಥ ದಿಗಂಬರ ಜೈನ್ ಮಂದಿರದ ಜೀರ್ಣೋದ್ದಾರ ಹಾಗೂ ಮೂಲಭೂತ ಸೌಕರ್ಯಗಳ ನಿರ್ಮಾಣ ಕಾಮಗಾರಿ, ಕೆಪಿಟಿಸಿಎಲ್ ವತಿಯಿಂದ ೧೯.೮೪ ಕೋಟಿ ರೂ.ಗಳ ವೆಚ್ಚದಲ್ಲಿ ಹÀಡಲಸಂಗ ಗ್ರಾಮದಲ್ಲಿ ೨೪೨೦ ಎಮ್.ವಿ.ಎ.೧೧೦/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಲಿದೆ.                 

ಸಣ್ಣ ಕೈಗಾರಿಕೆ ಇಲಾಖೆ ವತಿಯಿಂದ ೧೯.೩೦ ಕೋಟಿ ರೂ. ವೆಚ್ಚದಲ್ಲಿ ಇಂಡಿ ನಗರದ ಸಣ್ಣ ಕೈಗಾರಿಕಾ ಅಭಿವೃದ್ದಿ ಇಲಾಖೆ ವಸಾಹತು ನಿರ್ಮಾಣ, ೩ ಕೋಟಿ ರೂ. ವೆಚ್ಚದಲ್ಲಿ ಭೀಮಾನದಿಗೆ ಅಡ್ಡಲಾಗಿರುವ ಭೂಯ್ಯಾರ ಸೇತುವೆ ಸಹಿತ ಬ್ಯಾರೇಜ್ ಗೇಟ್ ಅಳವಡಿಸುವ ಕಾಮಗಾರಿ, ೧.೫೦ ಕೋಟಿ ರೂ. ವೆಚ್ಚದಲ್ಲಿ ಭೀಮಾನದಿಗೆ ಅಡ್ಡಲಾಗಿರುವ ಹಿಂಗಣಿ-ಆಳಗಿ ಸೇತುವೆ ಸಹಿತ ಬ್ಯಾರೇಜ್ ಆಳವಡಿಸುವ ಕಾಮಗಾರಿ, ೧ ಕೋಟಿ ರೂ. ವೆಚ್ಚದಲ್ಲಿ ಇಂಡಿ ತಾಲೂಕಿನ ರಾಜನಾಳ ಸಣ್ಣ ನೀರಾವರಿ ಕೆರೆ ಟೀಲ್ ಚಾನಲ್ ಕಾಮಗಾರಿ, ೫೦ ಲಕ್ಷ ರೂ. ವೆಚ್ಚದಲ್ಲಿ ಹಿರೇಬೇವನೂರ ಗ್ರಾಮದ ಸರ್ವೆ ನಂ. ೧೭೩/೩, ೧೯೨/೬ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಲಿದೆ. 


ಕೆ.ಆರ್.ಐ.ಡಿ.ಎಲ್. ಇಲಾಖೆ ವತಿಯಿಂದ  ೨ ಕೋಟಿ ರೂ. ವೆಚ್ಚದಲ್ಲಿ ೨೦೨೩-೨೪ನೇ ಸಾಲಿನ ಮುಖ್ಯಮಂತ್ರಿಗಳ ವಿಶೇ?À ಅನುದಾನದಡಿ (೧೦ ಕಾಮಗಾರಿಗಳು), ೧.೫೦ ಕೋಟಿ ರೂ. ವೆಚ್ಚದಲ್ಲಿ  ೨೦೨೪-೨೫ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ಕಾಮಗಾರಿಗಳು, ಶಿಕ್ಷಣ ಇಲಾಖೆಯಿಂದ ೧.೧೫ ಕೋಟಿ ರೂ. ವೆಚ್ಚದಲ್ಲಿ ತಡವಲಗಾ ಕೆ.ಜಿ.ಬಿ.ವಿ. ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ, ಮುಜರಾಯಿ ಇಲಾಖೆಯಿಂದ  ತಲಾ ೧ ಕೋಟಿ ರೂ. ವೆಚ್ಚದಲ್ಲಿ ಇಂಡಿ ತಾಲೂಕಿನ ಲಚ್ಯಾಣ ಹಾಗೂ ಸಾಲೋಟಗಿ ಗ್ರಾಮದ ಶ್ರೀ ಸಿದ್ದಲಿಂಗ ಮಹಾರಾಜರ ಮಠದ ಜೀರ್ಣೋದ್ದಾರ ಮತ್ತು ಮೂಲಭೂತ ಸೌಕರ್ಯ ಕಾಮಗಾರಿ, ತಲಾ ೧೩ ಲಕ್ಷ ರೂ. ವೆಚ್ಚದಲ್ಲಿ ಇಂಡಿ ನಗರದ ಶ್ರೀ ರಾಘವೇಂದ್ರ ದೇವಸ್ಥಾನ ಹಾಗೂ ಸತ್ಯ ನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಮತ್ತು ಮೂಲಭೂತ ಸೌಕರ್ಯ ಕಾಮಗಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ೦.೭೬ ಲಕ್ಷ ರೂ. ಗಳ ವೆಚ್ಚದಲ್ಲಿ ಇಂಡಿ ತಾಲೂಕಿನ ೫ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ,  ಯುವಜನ ಕ್ರೀಡಾ ಇಲಾಖೆ ವತಿಯಿಂದ ೧ ಕೋಟಿ ರೂ. ವೆಚ್ಚದಲ್ಲಿ ಇಂಡಿ ತಾಲೂಕಾ ಕ್ರೀಡಾಂಗಣದ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಪಶುಸಂಗೋಪನಾ ಇಲಾಖೆಯಿಂದ ಪಡನೂರ ಹಾಗೂ ಮಿರಗಿ ಗ್ರಾಮದಲ್ಲಿ ೧ ಕೋಟಿ ರೂ. ವೆಚ್ಚದಲ್ಲಿ ಪಶು ಚಿಕಿತ್ಸಾಲಯಗಳ ಕಟ್ಟಡ ನಿರ್ಮಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ತಲಾ ೫೦ ಲಕ್ಷ ರೂ. ವೆಚ್ಚದಲ್ಲಿ ಇಂಡಿ ನಗರದಲ್ಲಿ ಶ್ರೀ ಮಹಾತ್ಮ ಜ್ಯೋತಿಭಾ ಪುಲೆ  ಹಾಗೂ ಶ್ರೀ ಮಹರ್ಷಿ ಭಗೀರಥ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಲಿದೆ. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.