ಗ್ರಾಮೀಣ ಭಾಗದ ಸೊಗಡು ತಿಳಿಸಲು ಪೌರತ್ವ ತರಬೇತಿ ಶಿಬಿರ ತುಂಬಾ ಉಪಯುಕ್ತ : ಉಮಾದೇವಿ ಸೊನ್ನದ

Jun 20, 2025 - 23:17
 0
ಗ್ರಾಮೀಣ ಭಾಗದ ಸೊಗಡು ತಿಳಿಸಲು ಪೌರತ್ವ ತರಬೇತಿ ಶಿಬಿರ ತುಂಬಾ ಉಪಯುಕ್ತ : ಉಮಾದೇವಿ ಸೊನ್ನದ

ವಿಜಯಪುರ: ಜೀವನವನ್ನು ಪರಿಪೂರ್ಣಗೊಳಿಸಲು ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ಸೊಗಡು ತಿಳಿಸಲು ಪೌರತ್ವ ತರಬೇತಿ ಶಿಬಿರ ತುಂಬಾ ಉಪಯುಕ್ತವಾಗಿದೆ ಎಂದು ಡಯಟ್ ಪ್ರಾಚಾರ್ಯೆ ಉಮಾದೇವಿ ಸೊನ್ನದ ಹೇಳಿದ್ದಾರೆ.        

ಗುರುವಾರ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಬಳಿ ಇರುವ ಸದ್ಗುರು ಶ್ರೀ ಸಚ್ಚಿದಾನಂದ ಮಹಾರಾಜಯರ ಆಶ್ರಮದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮಜಿ ಶಿಕ್ಷಣ ಮಹಾವಿದ್ಯಾಲಯ  ಮತ್ತು ಎನ್.ಎಸ್.ಎಸ್ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರ ಮಾತನಾಡಿದರು.            

ಗ್ರಾಮೀಣ ಭಾಗದ ಸಂಸ್ಕೃತಿಯ ಬಗ್ಗೆ ತಿಳಿಯಲು ಇಂಥ ಶಿಬಿರಗಳು ಅನುಕೂಲವಾಗಿವೆ.  ಅಲ್ಲದೇ, ನಗರದ ಜೊತೆಗೆ ಗ್ರಾಮೀಣ ಸೊಗಡನ್ನು ಅರ್ಥ ಮಾಡಿಕೊಂಡು ದೇಶದ ಉತ್ತಮಛಿ ನಾಗರಿಕನ್ನಾಗಿ ಮಾಡಲು ಸಹಕಾರಿಯಾಗಿವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಇಟ್ಟಂಗಿಹಾಳ ಸಮತಾ ನಿಕೇತನ ಚಾರಿಟೇಬಲ್ ಟ್ಸಸ್ಟ್ ಸದಸ್ಯ ಎಂ. ಎಂ. ಬಿರಾದಾರ, ಕಾಲೇಜಿನ ಪ್ರಾಚಾರ್ಯೆ ಡಾ. ಬಿ ವೈ ಖಾಸನಿಸ, ಸಹಪ್ರಾಧ್ಯಾಪಕ ಡಾ. ಎಂ. ಬಿ. ಕೋರಿ, ಆಶ್ರಮದ ಚೇರಮನ್ ಡಾ. ಎಂ. ಎಸ್. ಹಿರೇಮಠ, ಏನ್.ಎಸ್.ಎಸ್ ಸಂಯೋಜಕ ಡಾ. ಬಿ. ಎಸ್. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.