ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಇಂಡಿ : ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಇಂಡಿ ತಾಲೂಕಿನ ಬಬಲಾದ, ಹಳಗುಣಕಿ, ಹಡಲಸಂಗ ಮತ್ತು ಕೂಡಗಿ ಕೆರೆಗಳಿಗೆ ಬಾಗೀನು ಅರ್ಪಿಸಿದರು.
ಶಾಸಕ ಯಶವಂತರಾಯ ಗೌಡ ಪಾಟೀಲರು ಮಾತನಾಡಿ ತಾಲೂಕಿನ ೧೯ ಕೆರೆ ತುಂಬುವ ಕಾರ್ಯ ಯಶಸ್ವಿಯಾಗಿದೆ. ಬೇಸಿಗೆಯಲ್ಲಿ ತಿಡಗುಂದಿ ಶಾಖಾಕಾಲುವೆ ಮತ್ತು ಕೃಷ್ಣಾ ಕಾಲುವೆಯಿಂದ ಎಲ್ಲ ಕೆರೆಗಳನ್ನು ತುಂಬಿ ಗ್ರಾಮಸ್ಥರಿಗೆ ಮತ್ತು ಜನ ಜಾನುವಾರುಗಳಿಗೆ ನೀರಿನ ತೊಂದರೆ ಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅದಲ್ಲದೆ ಕೃಷಿಗೂ ಅನುಕೂಲ ವಾಗುತ್ತದೆ ಎಂದರು.
ಬಬಲಾದ ಗ್ರಾಮದಲ್ಲಿ ಬಾಗೀನು ಅರ್ಪಣೆ ಕಾರ್ಯಕ್ರಮದಲ್ಲಿ ಯುಕೆಪಿಯ ಅಧಿಕ್ಷಕ ಅಭಿಯಂತರ ಗೋವಿಂದ ರಾಠೋಡ, ಸಣ್ಣ ನೀರಾವರಿ ಎಇಇ ಸಂದೀಪ ಕೂಡಲೂರ, ಗ್ರಾ.ಪಂ ಅಧ್ಯಕ್ಷ ಸಿದರಾಯಗೌಡ ಬಿರಾದಾರ, ಪಿಡಿಒ ಸಿದರಾಯ ಬಿರಾದಾರ, ಗ್ರಾ.ಪಂ ಸದಸ್ಯರಾದ ತುಕಾರಾಮ ದಶವಂತ, ಯಲಗೊಂಡ ಪೂಜಾರಿ, ಮಹಾದೇವಿ ಪಾರೆ, ಸುನಂದಾ ಬಿರಾದಾರ, ನೀಲಕ್ಕ ದಶವಂತ, ಶಾಂತಾಬಾಯಿ ಬನಸೋಡೆ, ಮತ್ತಿತರಿದ್ದರು.