ಒಂದು ಲಕ್ಷ ೬ ಸಾವಿರ ಎಕರೆ ನೀರಾವರಿ ಪ್ರದೇಶ ಕಾರ್ಯಕ್ಕೆ ಸಿಎಂ ಡಿಸಿಎಂ ಲೋಕಾರ್ಪಣೆ : ಶಾಸಕ ಯಶವಂತರಾಯಗೌಡ ಪಾಟೀಲ

Jul 13, 2025 - 09:02
Jul 13, 2025 - 09:15
 0
ಒಂದು ಲಕ್ಷ ೬ ಸಾವಿರ ಎಕರೆ ನೀರಾವರಿ ಪ್ರದೇಶ ಕಾರ್ಯಕ್ಕೆ ಸಿಎಂ ಡಿಸಿಎಂ ಲೋಕಾರ್ಪಣೆ :  ಶಾಸಕ ಯಶವಂತರಾಯಗೌಡ ಪಾಟೀಲ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಇಂಡಿ : ಇಂಡಿ ಮತ್ತು ಚಡಚಣ ಭಾಗದ ರೈತರಿಗೆ ವರದಾನವಾಗಲಿರುವ ಇಂಡಿ ಭಾಗದ ೭೯ ಹಳ್ಳಿಗಳಿಗೆ ಮತ್ತು ಚಡಚಣ ಭಾಗದ ೪೦ ಹಳ್ಳಿಗಳಿಗೆ ಕೃಷಿ ಮತ್ತು ಕುಡಿಯುವ ನೀರು ಮತ್ತು ಜನ ಜಾನುವಾರುಗಳಿಗೆ ಉಪಯೋಗವಾಗುವ ೧೯ ಕೆರೆಗಳಿಂದ ಒಂದು ಲಕ್ಷ ಆರು ಸಾವಿರ ಎಕರೆ ಪ್ರದೇಶ ನೀರಾವರಿ ಒದಗಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಲೋಕಾರ್ಪಣೆ  ಮಾಡಲಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಳವಾಡ ಏತ ನೀರಾವರಿಯ ಮೂರನೆಯ ಹಂತದ ಕಾಮಗಾರಿಯಲ್ಲಿ ತಿಡಗುಂದಿ ಎಕ್ಸಟೆನಷನ್ ಮೂಲಕ ಕಿ.ಮಿ ೫೬ ರಿಂದ ಕಿ.ಮಿ ೬೬ ರ ವರೆಗೆ ೧೦ ಕಿ ಮಿ ಕಾಲುವೆ ಮಾಡಿ ಒಟ್ಟು ೧೪ ಸಾವಿರ ಹೇ ಪ್ರದೇಶಕ್ಕೆ ನೀರು ಒದಗಿಸುತ್ತಿದೆ.  ೧೯ ಗ್ರಾಮದ ರೈತರಿಗೆ ಅನುಕೂಲವಾಗಲಿದ್ದು  ಇದಕ್ಕಾ ೧. ೬೮ ಟಿ ಎಂ ಸಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಇದರ ಉದ್ದ ೮.೫೫ ಕಿ ಮಿ ಮತ್ತು ಜಾಲ ೩೧.೦೫ ಕಿಮಿ ಇದೆ. ಈ ಕಾರ್ಯಾ ಸ್ಕಾಡಾ ಒಳಗೊಂಡ ಕಾರ್ಯವಾಗಿದೆ.  ಬಸನಾಳ ಗ್ರಾಮದ ೫೪೪ ಹೇ  ಕೋಟ್ನಾಳ ಗ್ರಾಮದ ೮೧೫ ಹೇ ನಿಂಬಾಳ ಗ್ರಾಮದ ೯೩೫ ಹೇಕ್ಟರ್, ಅಥರ್ಗಾ ಗ್ರಾಮದ ೧೩೦೬ ಹೇ, ಹಂಜಗಿ ಗ್ರಾಮದ ೨೧೫೬ ಹೇ, ಸೇರಿದಂತೆ ಒಟ್ಟು ೩೬೭೬೦ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ.  ಇದಕ್ಕೆ ಕೇವಲ ರಾಜ್ಯದಲ್ಲಿ ಕಾಂಗ್ರೆಸ ಸರಕಾರ ವಿದ್ದಾಗ ಮತ್ತು ರಾಜ್ಯ ಸರಕಾರ ಮಾತ್ರ ಹಣ ಒದಗಿಸಿದೆ. ಇದರಲ್ಲಿ ಕೇಂದ್ರದ ಹಣ ಸಹಾಯ ವಿಲ್ಲ ಎಂದರು.
ತಾಲೂಕಿನ ೧೯ ಕೆರೆಗಳಿಗೆ ರಾಜ್ಯ ಸರಕಾದಿಂದ ೩೦ ಜೂನ ೨೦೧೩ ರಂದು ೧೯ ಕೋಟಿ ಹಣ ಬಿಡುಗಡೆ, ೧೨ ಅಕ್ಟೋಬರ್ ೨೦೨೩ ರಂದು ೪೧ ಕೋಟಿ, ೧೦ ಜನೇವರಿ ೨೦೨೪ ರಂದು ೩೧ ಕೋಟಿ ಮತ್ತು ೧೫ ಏಪ್ರೀಲ  ೨೦೨೪ ರಂದು ೫೭ ಕೋಟಿ ಹೀಗೆ ಒಟ್ಟು ರಾಜ್ಯ ಸರಕಾರ ಮಾತ್ರ ಹಣ ನೀಡಿದ ೨೩೨ ಕೋಟಿ ಹಣದಲ್ಲಿ ಕೆರೆಗಳಿಗೆ ನೀರು ತುಂಬುವ ಕಾರ್ಯ ಆಗಿದೆ ಎಂದರು.
ಇನ್ನು ಶ್ರೀ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಕಾಂಗ್ರೆಸ ಸರಕಾರ ಮಾತ್ರ ಹಣ ನೀಡಿದೆ. ಮೊದಲ ಹಂತದ ಕಾಮಗಾರಿ ಬಿಜೆಪಿ ಸರಕಾರ ತರಾತುರಿ ಯಲ್ಲಿ ಕೇವಲ ಅನುಮೋದನೆ ನೀಡಿ ಮಾಜಿ ಮುಖ್ಯಮಂತ್ರಿಗಳು ಶಂಕು ಸ್ಥಾಪನೆ ಮಾಡಿದ್ದರು. ನಂತರ ನಾಮ ಮೋಹನ ವರದಿ ಕೇವಲ ಅನುಮೋದನೆ ನೀಡಿದ ಹಣ ನಿಡದೇ ಇರುವ ಯೋಜನೆಗಳನ್ನು ರದ್ದು ಮಾಡಿತ್ತು. ಕಾಂಗ್ರೆಸ್ ಸರಕಾರ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನವೋಲಿಸಿ ಮತ್ತೆ ಚಾಲನೆ ನೀಡಿ ಮೊದಲ ಹಂತದ ಕಾಮಗಾರಿಗೆ ೨೯ ಅಗಸ್ಟ ೨೩ ರಲ್ಲಿ ೫೦ ಕೋಟಿ, ೨೧ ಫೇ ೨೪ ರಲ್ಲಿ ೯೦ ಕೋಟಿ, ೧೪ ಏಪ್ರೀಲ ೨೪ ರಂದು ೫೦ ಕೋಟಿ ೧೪ ಅಕ್ಟೋಬರ ೨೪ ರಂದು ೧೮ ಕೋಟಿ ಮತ್ತು ೨೯ ಜ ಮತ್ತು ೨೯ ಮಾರ್ಚ ೨೦೨೫ ರಂದು  ಎರಡು ಮತ್ತು ೧೨ ಕೋಟಿ ಹಣ ಬಿಡುಗಡೆ ರಾಜ್ಯ ಸರಕಾರ ಕಾಂಗ್ರೆಸ್ ಸರಕಾರ ಮಾಡಿದೆ ಎಂದರು.
ಮೊದಲ ಹಂತದಲ್ಲಿ ಜಾಕವೆಲ ನಂತರ ಪಾಯಿಪ ಲಾಯಿನ ಮೂಲಕ ನೀರು ನಂತರ ಮೂರನೆಯ ಹಂತದಲ್ಲಿ ಎತ್ತರದ ಸಾವಳಸಂಗ ಪ್ರದೇಶದಿಂದ ನೀರು ವಿತರಣೆ ಹೀಗೆ ಮೂರು ಹಣತದ ಕಾಮಗಾರಿಗೆ ೩೧೦೦ ಕೋಟಿ ರೂ ಬಿಡುಗಡೆ ಮಾಡಿದೆ ಎಂದರು. ಅದರಂತೆ ಪಂದರಪೂರ ಗಾಣಗಾಪುರ ಜನರಿಗೆ ಅನುಕೂಲ ವಾಗಲು ಚಡಚಣ ಗಾಣಗಾಪುರ ರಸ್ತೆಗೆ ೫೪೦ ಕೋಟಿ ರೂ, ಇಂಡಿಯ ಹತ್ತಿರದ ಪಡನೂರ ಗ್ರಾಮದಿಂದ ಸೋಲಾಪುರಕ್ಕೆ ಹೋಗಲು ಒಂದು ಬ್ರೀಡ್ಜ ೪೮ ಕೋಟಿ ವೆಚ್ಚದಲ್ಲಿ ಅನುದಾನ ಕೇವಲ ರಾಜ್ಯ ಸರಕಾರ ನೀಡಿದೆ ಎಂದರು.
ಇಂಡಿಗೆ ಜಿಟಿಟಿಸಿ ಕಾಲೇಜು ೭೩ ಕೋಟಿ ವೆಚ್ಚದಲ್ಲಿ ಹೀಗೆ ೪೫೫೨ ಕೋಟಿ ರೂ ವೆಚ್ಚದ ಕಾಮಗಾರಿಗೆ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನಡೆಯಲಿದೆ ಎಂದರು. ಇಂಡಿಯಲ್ಲಿ ನೂತನ ಮೇಗಾ ಮಾರುಕಟ್ಟೆಗೆ ೩೦ ಕೋಟಿ ರೂ, ಜಲ ಜೀವನ ಮಿಷನ ಗೆ ೮೦ ಕೋಟಿ, ಆಳುರ ಗ್ರಾಮದಲ್ಲಿ ಬಾಂದಾರ ಒಂದು ಕೋಟಿ, ಇಂಡಿಯಲ್ಲಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಝಳಕಿಯಲ್ಲಿ ಸರಕಾರಿ  ಪ್ರಥಮ ದರ್ಜೆ ಮಹಾವಿದ್ಯಾಲಯ , ಝಳಕಿಯಲ್ಲಿ ಸರಕಾರಿ ಪಾಲಿಟೆಕ್ನಿಕ ಅಗರಖೇಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಿಗೆ ವಸತಿ ಗ್ರಹಕ್ಕೆ ಒಂದು ಕೋಟಿ ಸೇರಿದಂತೆ ಹಲವಾರು ಕಾಮಗಾರಿ ಲೋಕಾರ್ಪಣೆ ಗೊಳ್ಳಲಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಇದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.