ಜನನಾಯಕರ ಇಚ್ಛಾಶಕ್ತಿ ಕೊರತೆ : ಸ್ಪಂದಿಸದ ಅಧಿಕಾರಿಗಳು : ಪ್ರಗತಿಪರ ಸಂಘಟನೆಗಳಿ0ದ ಧರಣಿ ಸತ್ಯಾಗ್ರಹ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಆಲಮೇಲ : ತಾಲೂಕಿನ ಆರಾಧ್ಯ ದೇವರಾದ ಹಜರತ್ ಪೀರ ಗಾಲೀಬಸಾಹೇಬರ ದರ್ಗಾ ದೇವರು ಸುತ್ತ ಮುತ್ತಲಿನ ೪೮ ಹಳ್ಳಿಗಳಿಗೆ ಹೆಸರುವಾಸಿಯಾಗಿದೆ. ಈ ದರ್ಗಾಕ್ಕೆ ಹೋಗಲು ತನ್ನದೇ ಆದ ರಸ್ತೆ ಇರುವುದಿಲ್ಲ ಮತ್ತು ದಲಿತ ಸಮುದಾಯ, ಬ್ರಾಹ್ಮಣ ಸಮುದಾಯ, ತಳವಾರ ಸಮುದಾಯ, ಕೃಷ್ಣ (ಗೊಲ್ಲರ) ಸಮುದಾಯ, ಭಜಂತ್ರಿ ಸಮುದಾಯ ಮತ್ತು ಮಾದಿಗ ಸಮುದಾಯ ಸ್ಮಶಾನ ಭೂಮಿಗೆ ಹೋಗಲು ರಸ್ತೆ ಇರುವುದಿಲ್ಲ ಮತ್ತು ಬಸವ ನಗರ ಗಣೇಶ ನಗರದ ಜನರಿಗೆ ಸಾರ್ವಜನಿಕ ರಸ್ತೆ ಇರುವುದಿಲ್ಲ.
ಈ ವಿಷಯವಾಗಿ ಹಲವಾರು ಬಾರಿ ತಹಶೀಲ್ದಾರರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಆದರಿಂದ ಹಳೆಯ ರುಕುಂಪೂರ ರಸ್ತೆಯ ಮೇಲೆ ಇರುವ ಅಂಗಡಿಗಳನ್ನು ತೆರುವು ಮಾಡಿ ಈ ಎಲ್ಲಾ ಸ್ಥಳಗಳಿಗೆ ಸಾರ್ವಜನಿಕರು ಹೋಗಲು ಅವಕಾಶ ಕಲ್ಪಿಸುವ ವರೆಗೂ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಪ್ರಭು ವಾಲಿಕಾರ ತಿಳಿಸಿದರು. ಈ ವೇಳೆ ಬಸವರಾಜ ತೆಲ್ಲೂರ, ಸೋಮನಾಥ ಮೇಲಿನಮನಿ, ಡಾ.ಸಂಜೀವಕುಮಾರ ಯಂಟಮಾನ, ಸಂಜು ಗುಂದಗಿ, ಶಿವಾನಂದ ಜಗತಿ, ನಾಗಪ್ಪ ತಳವಾರ, ಶಿವಲಿಂಗ ಸುಬೇದಾರ, ಶಿವಕುಮಾರ್ ಮೇಲಿನಮನಿ, ಶಶಿಧರ ನಾಯ್ಕೋಡಿ, ಹರೀಶ್ ಯಂಟಮಾನ, ಅಪ್ಪು ಪಟ್ಟಣಶೆಟ್ಟಿ, ದೇವಪ್ಪ ಗುಣಾರಿ ಸೇರಿದಂತೆ ಇತರರು ಇದ್ದರು.