ಧರಣಿ ಸತ್ಯಾಗ್ರಹಕ್ಕೆ ಅಭೂತಪೂರ್ವ ಬೆಂಬಲ : ದರ್ಗಾಕ್ಕೆ ತೆರಳುವ ರಸ್ತೆ ಅತಿಕ್ರಮಣ ತೆರವಿಗೆ ಒತ್ತಾಯ

Jul 24, 2025 - 08:35
 0
ಧರಣಿ ಸತ್ಯಾಗ್ರಹಕ್ಕೆ ಅಭೂತಪೂರ್ವ ಬೆಂಬಲ : ದರ್ಗಾಕ್ಕೆ ತೆರಳುವ ರಸ್ತೆ ಅತಿಕ್ರಮಣ ತೆರವಿಗೆ ಒತ್ತಾಯ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ಆಲಮೇಲ : ಪಟ್ಟಣದ ಸಂತ ಪೀರ ಗಾಲಿಬಸಾಹೇಬ ದರ್ಗಾಕ್ಕೆ ತೆರಳುವ ರುಕುಂಪೂರ ರಸ್ತೆ ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿ ನಾಲ್ಕೆದು ವರ್ಷಗಳಿಂದ ತಹಶೀಲ್ದಾರ, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕ್ಷೇತ್ರದ ಶಾಸಕರಿಗೆ ಸಂಬ0ಧಪಟ್ಟ ಎಲ್ಲ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜವಾಗಿಲ್ಲ ಇದರಿಂದ ಬೇಸತ್ತ ಗ್ರಾಮಸ್ಥರು ಬುಧವಾರ ಪಟ್ಟಣದ ಎಲ್ಲ ಪ್ರಗತಿ ಪರ ಸಂಘಟನೆಗಳ ಒಕ್ಕೂಟದೊಂದಿಗೆ ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತವಾಗಿ ಬಂದಗೊಳಿಸಿ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಧರಣಿ ಸತ್ಯಾಗ್ರಹಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ ಘಟನೆ ಬುಧವಾರ ಜರುಗಿತು.
ದಲಿತ ಸಂಘಟನೆ ಮುಖಂಡ ಹರಿಶ ಯಂಟಮಾನ, ಗುತ್ತಿಗೆದಾರ ಮೈಬೂಬ ಮಸಳಿ ಮಾತನಾಡಿ ಆಲಮೇಲ ಪಟ್ಟಣದ ಆರಾಧ್ಯ ದೇವರಾದ ಸಂತ ಪೀರ ಗಾಲಿಬಸಾಹೆಬ ದರ್ಗಾಕ್ಕೆ ಯಾವುದೇ ಜಾತಿ ಧರ್ಮ ಬೇದಭಾವವಿಲ್ಲದೆ ಭಾವೈಕ್ಯತೆ ಭಕ್ತಿಯಿಂದ ಆರಾಧಿಸುತ್ತ ಬಂದಿದ್ದು ಸದ್ಯ ದರ್ಗಾಕ್ಕೆ ಹೋಗಲು ರಸ್ತೆಯೆ ಇಲ್ಲದಂತಾಗಿದೆ.

ಹಳೆಯ ರುಕುಂಪುರ ರಸ್ತೆಯ ಮೂಲಕ ದರ್ಗಾಕ್ಕೆ ಮತ್ತು ಬಸವ ನಗರ, ಹಿಂದೂಗಳ ವಿವಿಧ ಸಮಾಜದ ಸ್ಮಶಾನಕ್ಕೆ ತೆರಳಬೇಕಾದ ಮುಖ್ಯ ರಸ್ತೆ ಅದಾಗಿದ್ದು, ಆ ರಸ್ತೆ ಸಂಪೂರ್ಣವಾಗಿ ಅತಿಕ್ರಮಣಗೊಂಡು ಬಂದಾಗಿದೆ. ಅದರ ಬದಲಿಗೆ ಅಂಜುಮನ ಜಾಗದಲ್ಲಿ ತಾತ್ಕಾಲಿಕವಾಗಿ ಹಾದು ಹೋಗಬೇಕಾಗಿದೆ. ಅಲ್ಲಿ ಕಿರಿದಾದ ರಸ್ತೆ ಇದ್ದು ಅಲ್ಲಿ ಎರಡು ಬದಿಗಳಲ್ಲಿ ಮೌಸದ ಅಂಗಡಿಗಳಿದ್ದು, ಇದರಿಂದ ದರ್ಗಾಕ್ಕೆ ತೆರಳುವ ಭಕ್ತರಿಗೆ, ಮಹಿಳೆಯರಿಗೆ  ತೀವ್ರ ಅನಾನೂಕುಲವಾಗುತ್ತಿದೆ. ಇದನ್ನು ಮನಗಂಡು ಜಾತ್ರಾ ಕಮಿಟಿ, ದಲಿತ ಸಂಘಟನೆ ಸೇರಿದಂತೆ ವಿವಿದ ಸಂಘಟನೆ ಮುಖಂಡರು ಅನೇಕಬಾರಿ ಸಂಬ0ದಪಟ್ಟ ಇಲಾಖೆಗೆ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದರು. ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ಆಲಮೇಲ ಪಟ್ಟಣದ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದೊಂದಿಗೆ ಬೃಹತ್ ಹೋರಾಟದ ಮೂಲಕ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಈ ಹೋರಾಟ ಬರಿ ಆಶ್ವಾಸನೆಗೆ ಒಪ್ಪುವದಿಲ್ಲ ದರ್ಗಾಕ್ಕೆ ತೆರಳುವ ರುಕುಂಪುರ ರಸ್ತೆ ನಿರ್ಮಾಣವಾಗುವವರೆಗೂ ಹೋರಾಟ ಹಿಂಪಡೆಯುವದಿಲ್ಲ ಎಂದು ಹೇಳಿದರು.

ಮಾನವ ಸರಪಳಿ ನಿರ್ಮಾಣ

ಪ್ರತಿಭಟನಾ ಮೇರವಣಿಗೆ ಬಸ್ ನಿಲ್ದಾಣದ ಸಮೀಪ ಮಾನವ ಸರಪಳಿ ನಿರ್ಮಿಸಿ ಎರಡು ಗಂಟೆಗಳ ಕಾಲ ಸಂಚಾರ ಬಂದ್‌ಗೊಳಿಸಿ ಪ್ರತಿಭಟಿಸಿದರು.         
ಸುದ್ದಿ ತಿಳಿದ ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ ಕೆ. ವಿಜಯಕುಮಾರ ಪ್ರತಿಭಟನಾಕಾರರಿಂದ ಮನವಿ ಸ್ವಿಕರಿಸಲು ಮುಂದಾದರು ಇದಕ್ಕೆ ಒಪ್ಪದೆ ಹಲವಾರು ಬಾರಿ ಮನವಿ ನೀಡಿದ್ದು ಇಗ ಮನವಿ ಕುಡುವದಿಲ್ಲ  ಕೆಲಸವಾಗಬೇಕು ಅಲ್ಲಿವರೆಗೂ ಧರಣಿ ಸÀತ್ಯಾಗ್ರಹದ ಮೂಲಕ ಹೋರಾಟ ಮುಂದು ವರೆಯುವದು ಎಂದು ಹಠಹಿಡಿದರು.  ತಹಶೀಲ್ದಾರ ವಾಪಸ ತೆರಳಿದರು.


ಪ್ರತಿಭಟನಾ ಟೆಂಟ್ ನಿರ್ಮಾಣ 
ಬಸವೇಶ್ವರ ಸರ್ಕಲ್ ಹತ್ತಿರ ಅನಿರ್ಧಿಷ್ಠಾವಧಿ ಧರಣಿ ಹಮ್ಮಿಕೊಳ್ಳಲು ಟೆಂಟ್ ಹಾಕಲಾಯಿತು. ಅಲ್ಲಿ ಹೋರಾಟವನ್ನು ಧರಣಿ ಕುಳಿತುಕೊಳ್ಳುವ ಮೂಲಕ ಮುಂದುವರೆಸಿದರು. ಸಾಯಂಕಾಲ ತಹಶೀಲ್ದಾರ ಕೆ. ವಿಜಯಕುಮಾರ, ಪ.ಪಂ ಸಿಓ ಸುರೇಶ ನಾಯಕ, ಕಂದಾಯ ನಿರಿಕ್ಷಕ ಎಂ.ಎ ಅತ್ತಾರ ಧರಣಿ ಕುಳಿತ ಸ್ಥಳಕ್ಕೆ ಆಗಮಿಸಿ ಮಾತನಾಡಿದ  ತಹಶೀಲ್ದಾರ ಕೆ. ವಿಜಯಕುಮಾರ ಎರಡು ದಿನದಲ್ಲಿ ಸರ್ವೆ ಮಾಡಿಸಿ ರಸ್ತೆ ನಿರ್ಮಿಸಿ ಕೊಡುತ್ತೆನೆ ಧರಣಿ ಸತ್ಯಾಗ್ರಹ ಹಿಂಪಡೆಯುವ0ತೆ ಮನವಿ ಮಾಡಿದರು. ಅದಕ್ಕೆ ಒಪ್ಪದ ಹೋರಾಟಗಾರರು ರಸ್ತೆ ನಿರ್ಮಿಸುವವರೆಗೂ ಈ ಹೋರಾಟ ಮುಂದು ವರೆಯುವದು ಎಂದು ಹೇಳಿದರು. ಇಂದು ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದುರು.

ಮಾಜಿ ತಾ.ಪಂ ಸದಸ್ಯ ಶಿವಾನಂದ ಜಗತಿ ಮಾತನಾಡಿ ಪಟ್ಟಣ ಪಂಚಾಯಿತಿಯ ೧೯ ಸದಸ್ಯರು ಒಟ್ಟಾಗಿ ಸೂಕ್ತ  ನಿರ್ಣಯ ತಗೆದುಕೊಳ್ಳಬೇಕು ಮತ್ತು ಸಂಬ0ದಪಟ್ಟ ಅಧಿಕಾರಿಗಳು ತಕ್ಷಣವೆ ಕಾರ್ಯಪ್ರವೃತರಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ಬದಲಾಗುವದು ಅದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳೆ ಕಾರಣಿಕರ್ತರು ಎಂದು ಹೇಳಿದರು.
ಪ್ರತಿಭಟನಾ ನೇತೃತ್ವ ವಹಿಸಿದ ಪ್ರಭು ವಾಲಿಕಾರ, ಗಾಲಿಬಸಾಬ ಜಾತ್ರಾ ಕಮಿಟಿಯ ಅಧ್ಯಕ್ಷ ಬಸವರಾಜ ತೆಲ್ಲೂರ ಮಾತನಾಡಿ ಪಟ್ಟಣದ ಐತಿಹಾಸಿಕ ಹಿನ್ನಲೆ ಹೊಂದಿರುವ ಸಂತ ಪೀರ ಗಾಲಿಬಸಾಹೇಬ ದರ್ಗಾದ ಮುಖ್ಯ ರಸ್ತೆ, ದೇವರ ಬಾವಿಯ ಜಾಗ, ಪಂಚಾಯಿತಿ ಸರ್ಕಾರಿ ಜಾಗವನ್ನು ಅತಿಕ್ರಮವಾಗಿ ರಾಜಕೀಯ ಪ್ರಭಾವದಿಂದ ಕಬ್ಜಾ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಅದಕ್ಕೆ ಅಧಿಕಾರಿಗಳು ಶಾಮಿಲಾಗಿದ್ದಾರೆ.
 
ಈ ಬಗ್ಗೆ ಯಾರು ಕೇಳುವವರೆ ಇಲ್ಲದಂತಾಗಿ. ಆಲಮೇಲ ಪಟ್ಟಣದಲ್ಲಿನ ಪಂಚಾಯಿತಿ ಜಾಗವು ಪ್ರಭಾವಿ ವ್ಯಕ್ತಿಗಳ ಪಾಲಾಗಿದೆ. ಹಾಗೆ ಪುರಾತನ ಐತಿಹಾಸಿಕ ಹಿನ್ನಲೆ ಹೊಂದಿರುವ ದೇವರ ಬಾವಿ, ಅಕ್ಕ ತಂಗಿ ಬಾವಿ ಅನೇಕ ಬಾವಿ ಮಲಿನಗೊಂಡಿದ್ದು ಅದನ್ನು ಸ್ವಚ್ಚಗೊಳಿಸದೆ ಮುಚ್ಚುವ ಹುನ್ನಾರ ನಡೆದಿದೆ. ಸಂಬ0ದಿಸಿಧ ಮೇಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿಂದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರೆಕೊಟ್ಟಿದ ಆಲಮೇಲ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಸ್ವಯಂ ಪ್ರೇರಿತವಾಗಿ ವ್ಯಾಪಾರಿಗಳು ಅಂಗಡಿಗಳು ಬಂದ ಮಾಡಿ ಬೆಂಬಲ ಸೂಚಿಸಿದರು.
ಬೆಳಗ್ಗೆ ಪ್ರತಿಭಟನೆ ಕಾವು ಏರತೊಡಗಿತು, ಪಟ್ಟಣದ ಎಲ್ಲ ಸಮುದಾಯಗಳ ಪ್ರಮುಖರು ದರ್ಗಾದಲ್ಲಿ ಸೇರಿ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಹಲಗೆ ಬಾರಿಸುತ್ತಾ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಈ ಮೆರವಣಿಗೆಯಲ್ಲಿ ಎಲ್ಲ ಅಂಗಡಿ ಮಾಲೀಕರು ಸಾರ್ವಜನಿಕರು ಸೇರಿದಂತೆ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹೋರಾಟದಲ್ಲಿ ಪ.ಪಂ ಸದಸ್ಯ ಸಂಜೀವಕುಮಾರ ಎಂಟಮಾನ, ಅಶೋಕ ಕೊಳಾರಿ, ಚಂದು ಹಳೆಮನಿ, ಚಂದು ಕಾಂಬಳೆ, ಮಲ್ಲು ಅಚಲೇರಿ, ಮುಖಂಡರಾದ ಬಸವರಾಜ ಹೂಗಾರ, ಶಿವು ಮೇಲಿನಮನಿ, ಶಶಿ ನಾಯ್ಕೋಡಿ, ರವಿ ವಾರದ, ಶ್ರೀಶೈಲ ಅಗಸರ, ನಾಗಪ್ಪ ತಳವಾರ, ಅಹಮ್ಮದ ವಾಲಿಕಾರ, ವಾಹಬ ಸುಂಬಡ, ಪಿ.ಟಿ. ಪಾಟೀಲ, ಯಲ್ಲಪ್ಪ ಬುರಡ, ಬೀಮ ಕಲಕುಟಗೇರ, ಶಿವು ತಳವಾರ, ಶಶಿಧರ ಗಣಿಯಾರ, ನಾಗಪ್ಪ ತಳವಾರ, ಶ್ರೀಶೈಲ ಭೋವಿ, ಮದನ ರಜಪೂತ, ಶ್ರೀಶೈಲ ಕುಂಬಾರ, ಮಲ್ಲು ಜ್ಯೋಶೀ, ನಿಂಬಾಜಿ ಚೋರಮಲ್ಲ, ಸಿದ್ದು ಬಂಡಗಾರ, ಕರೆಪ್ಪ ಪೂಜಾರಿ ಸೇರಿದ್ದಂತೆ ಪಟ್ಟಣದ ಎಲ್ಲ ಸಮಾಜದವರು ಪಾಲ್ಗೊಂಡಿದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.