ವಿದ್ಯಾರ್ಥಿಗಳಲ್ಲಿ ಪ್ರಶ್ನೀಸುವ ಕಲೆ ಮೂಡಬೇಕು : ಡಾ.ಅರವಿಂದ ಮನಗೂಳಿ

Jul 22, 2025 - 22:54
 0
ವಿದ್ಯಾರ್ಥಿಗಳಲ್ಲಿ ಪ್ರಶ್ನೀಸುವ ಕಲೆ ಮೂಡಬೇಕು : ಡಾ.ಅರವಿಂದ ಮನಗೂಳಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 


ಸಿಂದಗಿ ; ಇಂದಿನ ಸಮಾಜ ಸಾಮಾಜಿಕವಾಗಿ ವಿಘಟನೆಯಾಗುತ್ತಿದೆ ಇದು ಖೇದಕರ ಸಂಗತಿ. ದ್ವಿತೀಯ ಪಿಯುಸಿ ನಂತರ ಭಾರತ ಸರ್ಕಾರ ಮಿಲಟರಿ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಎಸ್‌ಎನ್‌ಡಿಸಿಂದಗಿ ಸಿ.ಎಂ.ಮನಗೂಳಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.

  ಅವರು ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಯಲದಲ್ಲಿ ಮಂಗಳವಾರ ಹಮ್ಮಿಕೊಂಡ ೨೦೨೫-೨೬ ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕೊರುವ ಮತ್ತು ಪಠ್ಯಪೂರಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ವಿದ್ಯಾರ್ಥಿಗಳಲ್ಲಿ ಪ್ರಶ್ನೀಸುವ ಕಲೆ ಮೂಡಬೇಕು ಇದು ನಮ್ಮ ಭವಿಷ್ಯವನ್ನು ಧನಾತ್ಮಕದ ಕಡೆಗೆ ಕೊಂಡ್ಯೊಯುತ್ತದೆ. ಉತ್ತಮ ಆರೋಗ್ಯ, ಶಿಸ್ತು, ಸಮಯ ಪಾಲನೆಗಳಂತಹ ಗುಣಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.

 ಈ ವೇಳೆ ಸ್ಪರ್ಧಾತ್ಮಕ ಪರೀಕ್ಷೆಗಳ ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ವಿಜಯಪುರದ ಎಸ್.ಬಿ.ಕರಿಯರ್ ಅಕ್ಯಾಡಮಿಯ ಸಂಚಾಲಕ ಶರಣಯ್ಯ ಭಂಡಾರಿಮಠ ಮಾತನಾಡಿ, ಪಿಯುಸಿ ಹಂತ ಜೀವನದಲ್ಲಿಯೆ ಆದರ್ಶ ಹಂತವಾಗಿದೆ. ಈ ಹಂತದಲ್ಲಿ ಕನಸುಗಳು, ಸಾಧಿಸುವ ಛಲಗಳು ಮುಡುವುದರಿಂದ ವಿದ್ಯಾತೀಗಳು ಓದಿನ ಕಡೆಗೆ ಮತ್ತು ಭವಿಷ್ಯದ ಕಡೆಗೆ ಗಮನ ಹರಿಸಬೇಕು. ಇಂದಿನ ಶಿಕ್ಷಣದ ಮೌಲ್ಯ ಕುಂಠಿತಗೊಳ್ಳುತ್ತಿರುವುದು ವಿಷಾದನಿಯ ಎಂದ ಅವರು ಶಿಕ್ಷಣದಲ್ಲಿ ಯೋಗ್ಯ ಮೌಲ್ಯಗಳು ಬರಬೇಕು. ಜಗತ್ತಿಗೆ ಮಾರ್ಗದರ್ಶನ ನೀಡುವ ಪವಿತ್ರ ದೇಶ ಭಾರತ ನಾವೇಲ್ಲ ಚೆನ್ನಾಗಿ ಓದಿ ಭವಿಷ್ಯವನ್ನು ಗಟ್ಟಿಯಾಗಿ ನಿರ್ಮಿಸಿಕೊಳ್ಳುವ ಸಾಮಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಜ್ಞಾನ ಮತ್ತು ಸೃಜನಶೀಲತೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಇಂದಿನ ಜಗತ್ತು ಕೌಶಲ್ಯಭರಿತವಾಗಿದೆ.ಜ್ಞಾನದ ಜೊತೆಯಾಗಿ ಅನೇಕ ಕ್ಷೇತ್ರಗಳಲ್ಲಿನ ಕೌಶಲ್ಯಗಳನ್ನು ತಿಳಿಯುವುದು ಅವಶ್ಯವಾಗಿದೆ ಎಂದರು.

 ವೇದೆಕೆಯ ಮೇಲೆ ಕಾರ್ಯಾಧ್ಯಕ್ಷ ಎಸ್.ಎ.ಪಾಟೀಲ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಸುಪ್ರಿಯಾ ಅತನೂರ ಇದ್ದರು.

 ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಿ.ಎಸ್.ಬಿರಾದಾರ, ಎಮ್.ಎನ್.ಅಜ್ಜಪ್ಪ, ಎಸ್.ಪಿ.ಬಿರಾದಾರ, ಎಫ್.ಎ.ಹಾಲಪ್ಪನವರ, ಸಿದ್ದಲಿಂಗ ಕಿಣಗಿ, ಮುಕ್ತಾಯಕ್ಕ ಕತ್ತಿ, ಎ.ಆರ್.ಸಿಂದಗಿಕರ, ಡಾ.ಶಾಂತಿಲಾಲ ಚವ್ಹಾಣ, ಸತೀಶ ಬಸರಕೋಡ, ಎ.ಬಿ.ಪಾಟೀಲ, ಜಿ.ಎಸ್.ಪವಾರ, ಜ್ಯೋತಿರ್ಲೇಖಾ ಚೆನ್ನೂರ ಸೇರಿದಂತೆ ಇತರರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.