ಅಹಿಂದ ತಾಲೂಕಾಧ್ಯಕ್ಷರಾಗಿ ಭೀರು ಹಳ್ಳಿ ನೇಮಕ : ಗುರುನಾಥ ಹರ್ಷ

Jul 21, 2025 - 23:30
 0
ಅಹಿಂದ ತಾಲೂಕಾಧ್ಯಕ್ಷರಾಗಿ ಭೀರು ಹಳ್ಳಿ ನೇಮಕ : ಗುರುನಾಥ ಹರ್ಷ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ದೇವರಹಿಪ್ಪರಗಿ : ಅಹಿಂದ ಒಕ್ಕೂಟ ಬೆಂಗಳೂರು ಅವರ ಆದೇಶದ ಮೇರೆಗೆ ತಾಲ್ಲೂಕು ಅಧ್ಯಕ್ಷರಾಗಿ ಭೀರು ಹಳ್ಳಿ ನೇಮಕ.ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ಗುರುನಾಥ ಮುರಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಪಡಗಾನೂರ ಗ್ರಾಮದ ತಮ್ಮ ಸ್ವಗೃಹದಲ್ಲಿ ನೂತನ ಅಹಿಂದ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಭೀರು ಹಳ್ಳಿ ಅವರನ್ನು ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು,ಅಹಿಂದ ತತ್ವವನ್ನು ಅನುಸರಿಸಿ ನೊಂದವರಿಗೆ ಸಾಮಾಜಿಕ ಶೈಕ್ಷಣಕ ಆರ್ಥಿಕ ಸಮಾನತೆ ಸಿಗುವಂತೆ ಮಾಡುವ ಉದ್ದೇಶದಿಂದ ಈ  ಸಂಘಟನೆ ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದೆ.ಅಸ್ಪೃಶ್ಯತೆಯಿಂದ ಬಳಲುತ್ತಿರುವ ಜನರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಜೊತೆಗೆ ಸಮಾಜದಲ್ಲಿ ತಮ್ಮ ಹಕ್ಕನ್ನು ಪ್ರಶ್ನಿಸಿ ಪಡೆಯುವುದನ್ನು  ಸಂಘಟನೆಯ ಅಹಿಂದ ಸಿದ್ಧಾಂತ ತಿಳಿಸುತ್ತದೆ. ಅಂಬೇಡ್ಕರ್, ಬಸವಣ್ಣ, ಕನಕದಾಸರ ಸಿದ್ದಾಂತಗಳನ್ನು ಒಳಗೊಂಡು ಸಂಘಟನೆ ರಾಜ್ಯಾದ್ಯಾಂತ  ಕಾರ್ಯನಿರ್ವಹಿಸುತ್ತಿದೆ.ಅಹಿಂದ ವರ್ಗಗಳ,ತಳ ಮಟ್ಟದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನೂತನ ಅಹಿಂದ ತಾಲ್ಲೂಕು ಅಧ್ಯಕ್ಷರಾದ ಭೀರು ಹಳ್ಳಿ ಅವರು ಶೃಮ ವಹಿಸಬೇಕು ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಯಲ್ಲಪ್ಪ ನಿಡಗುಂದಿ,ಸಾಯಿಬಣ್ಣ ಮುರಾಳ, ಮಾಳಪ್ಪ ಹಳ್ಳಿ,ಚಂದ್ರಾಮ ಪೂಜಾರಿ,ಅಮ್ಮೋಗಿ ಕಗ್ಗೋಡ, ರಮೇಶ ಮುರಾಳ, ಭೀಮು ಬಿಸನಾಳ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.