ವಿಜಯಪುರ ವೈನ್ ಪಾರ್ಕ್ ೧೦೦ ಕೋಟಿ ಮಂಜೂರಿಸಲು ಸಿಎಂಗೆ ಶಾಸಕ ಯತ್ನಾಳ ಪತ್ರ

Jun 22, 2025 - 08:25
 0
ವಿಜಯಪುರ ವೈನ್ ಪಾರ್ಕ್ ೧೦೦ ಕೋಟಿ ಮಂಜೂರಿಸಲು  ಸಿಎಂಗೆ ಶಾಸಕ ಯತ್ನಾಳ ಪತ್ರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ವಿಜಯಪುರ ವೈನ್ ಪಾರ್ಕ್ ನಿರ್ಮಾಣಕ್ಕಾಗಿ ರೂ. ೧೦೦ ಕೋಟಿ ರೂಗಳ ಅನುದಾನ ಮಂಜೂರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಪತ್ರ ಬರೆದಿದ್ದಾರೆ.        

ರಾಜ್ಯದಲ್ಲಿಯೇ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ಮೂಲಕ ದ್ರಾಕ್ಷಿ ಕಣಜ ಎಂದು ಕರೆಯಲ್ಪಡುವ ವಿಜಯಪುರ ಜಿಲ್ಲೆಯಲ್ಲಿ ಪ್ರತಿ ವರ್ಷ ೧೮.೯೦೦ ರೈತರಿಂದ ೨೫,೫೭೬ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳೀಯ ಸುಮಾರು ೭.೪೬ ಲಕ್ಷ ಮೆಟ್ರಿಕ್ ಟನ್ ಹಸಿ ದ್ರಾಕ್ಷಿ ಬೆಳೆಯುತ್ತಿದ್ದು, ಇದರಿಂದ ೧.೭೪ ಲಕ್ಷ ಮೆಟ್ರಿಕ್ ಟನ್ ಒಣ ದ್ರಾಕ್ಷಿ ಉತ್ಪಾದಿಸಲಾಗುತ್ತಿದೆ.                

ವಿಜಯಪುರ ಸೇರಿದಂತೆ ರಾಜ್ಯದಲ್ಲಿ ಅವಶ್ಯಕ ಪ್ರಮಾಣದಲ್ಲಿ ಶೀತಲ ಘಟಕಗಳ ಕೊರತೆ, ಮಾರುಕಟ್ಟೆ ಸಮಸ್ಯೆಯಿಂದ ನೆರೆಯ ಮಹಾರಾಷ್ಟ್ರದ ಮಾರುಕಟ್ಟೆಗೆ ನಮ್ಮ ರೈತರು ತಮ್ಮ ಉತ್ಪನ್ನಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮ ರಾಜ್ಯದ ರೈತರು ಬೆಳೆದ ದ್ರಾಕ್ಷಿ ಮಹಾರಾಷ್ಟ್ರದ ಬ್ಯಾಂಡ್ ದಲ್ಲಿ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಅವರಿಗೆ ಹೆಚ್ಚಿನ ಬೆಲೆ ಸಿಕ್ಕರೂ ನಮ್ಮ ರೈತರಿಗೆ ನಿರೀಕ್ಷೆ ಪ್ರಮಾಣದ ದರ ಸಿಗುತ್ತಿಲ್ಲ.            ಈ ಸಮಸ್ಯೆ ನಿವಾರಣೆಗಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ವಿಜಯಪುರಕ್ಕೆ ವೈನ್ ಪಾರ್ಕ್ ಮಂಜೂರಿಸಿ, ಮೊದಲ ಹಂತದಲ್ಲಿ ರೂ.೪೦ ಕೋಟಿ ಅನುದಾನ ಮಂಜೂರಿಸಿ ಕಾಮಗಾರಿ ಆರಂಭಿಸಿತ್ತು. ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿತ್ತು. ಆ ನಿಟ್ಟಿನಲ್ಲಿ ನಂತರದ ಬಜೆಟ್ ದಲ್ಲಿ ರೂ.೧೦೦ ಕೋಟಿ ಅನುದಾನ ಘೋಷಿಸಲಾಗಿತ್ತು. ಆದರೆ, ೨೦೨೩ ರ ನಂತರ ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೂ.೧೦೦ ಅನುದಾನ ಹಿಂಪಡೆದಿದ್ದರಿAದ, ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಮನಸ್ಸಿಗೆ ನೋವುಂಟು ಮಾಡಿದೆ. ಈ ಕುರಿತಂತೆ ಕಳೆದ ಬೆಳೆಗಾವಿ ಚಳಿಗಾಲ ಅಧಿವೇಶನದಲ್ಲಿ ಪ್ರಶ್ನೆ ಎತ್ತಿದಾಗ ಮುಂದಿನ ಬಜೆಟ್ ದಲ್ಲಿ ರೂ.೧೦೦ ಕೋಟಿ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಲಾಗಿದ್ದು. ಅದರಂತೆ ದ್ರಾಕ್ಷಿ ಬೆಳೆಗೆ ಉತ್ತೇಜನ, ಬೆಳೆಗಾರರ ಅನುಕೂಲಕ್ಕಾಗಿ ವೈನ್ ಪಾರ್ಕ್ ನಿರ್ಮಾಣ ಅಗತ್ಯವಿರುತ್ತದೆ. ಕಾರಣ ರೂ.೫೦೦ ಕೋಟಿ ಯೋಜನೆಯಾದ ವೈನ್ ಪಾರ್ಕ್ ಕಾಮಗಾರಿ ಪರಿಪೂರ್ಣಗೊಂಡರೆ, ಪ್ರತಿ ವರ್ಷ ರೂ.೨೫೦೦ ದಿಂದ ರೂ.೩,೦೦೦ ಕೋಟಿ ವರೆಗೆ ವ್ಯವಹಾರ ನಡೆಯಲಿದೆ. ಜಿ.ಎಸ್.ಟಿ ಮತ್ತು ಸೆಸ್ ರೂಪದಲ್ಲಿ ಸರ್ಕಾರಕ್ಕೂ ಸಾಕಷ್ಟು ಆದಾಯ ಹರಿದು ಬರಲಿದೆ. ದ್ರಾಕ್ಷಿ ಬೆಳೆಗಾರರ ಬಹು ವರ್ಷದ ಬೇಡಿಕೆಯೂ ಈಡೇರಲಿದೆ.            

ಆದ್ದರಿಂದ ಸದರಿ ಕಾಮಗಾರಿಯನ್ನು ಪರಿಪೂರ್ಣಗೊಳಿಸಲು ಅವಶ್ಯವಾದ ಅಗತ್ಯ ಅನುದಾನವಾಗಿ ಪ್ರಥಮ ಕಂತವಾಗಿ ರೂ.೧೦೦ ಕೋಟಿ ಅನುದಾನ ಮಂಜೂರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.            

ಇದೇ ವಿಷಯ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ತೋಟಗಾರಿಕಾ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೂ ಪತ್ರ ಬರೆಯಲಾಗಿದೆ ಎಂದು ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.