ಸರಕಾರಿ ಉರ್ದು ಶಾಲೆಯ ಮಕ್ಕಳ ಶಾಲಾ ಸಂಸತ್ತು ರಚನೆ

ಕಾರ್ಯದಲ್ಲಿ ಮಕ್ಕಳು ಉತ್ಸಾಹ ಭರಿತವಾಗಿ ಸಂತಸವಾಗಿ ಮತ ಚಲಾವಣೆ ಮಾಡಿ ಸಂಭ್ರಮಿಸಿದರು ತಮ್ಮ ತರಗತಿಯ ನಾಯಕವನ್ನು ಮತ ಮಾಡುವ ಮೂಲಕ ಆಯ್ಕೆ ಮಾಡಿದರು ಪ್ರಜಾಪ್ರಭುತ್ವದ ವ್ಯವಸ್ಥೆ ಹೇಗಿರುತ್ತದೆ ಎಂದು ಮಾದರಿಯಾಗಿ ಮುಖ್ಯ ಗುರುಗಳು ಸಿಬ್ಬಂದಿ ವರ್ಗ ಎಸ್ ಡಿ ಎಮ್ ಸಿ ಅವರು ಸಹಕಾರದಿಂದ ಮತ ಪತ್ರ ಬ್ಯಾಲೆಟ್ ಬಾಕ್ಸ್ ಪೋಲಿಂಗ ಅಧಿಕಾರಿಗಳು ವ್ಯವಸ್ಥೆಗಾಗಿ ಪೋಲಿಸ್ ಸಿಬ್ಬಂದಿ ಹಾಗೂ ಇಡೀ ವ್ಯವಸ್ಥೆಯ ಮಾದರಿಯಾಗಿ ನೇಮಕ ಮಾಡಿ ಚುನಾವಣೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಚುನಾವಣೆ ಮಹತ್ವ ಮತ್ತು ಮತದಾನದ ಹಕ್ಕು ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು.
ಶಾಲಾ ವಿದ್ಯಾರ್ಥಿ ಸಂಘದ ೧೩ ಸ್ಥಾನಗಳಿಗಾಗಿ ನಡೆದ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗದ ನೀತಿಸಂಹಿತೆ ಪ್ರಕಾರ ನಡೆಸಲಾಯಿತು.
ವಿದ್ಯಾರ್ಥಿ ಮತದಾರರು ಗೌಪ್ಯವಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತದಾನ ಮಾಡಿದರು. ಶಾಲೆಯ ಕೋಣೆಯಲ್ಲಿ ನಡೆದ ಮಕ್ಕಳ ಸಂಸತ್ತು ರಚನೆ ಮುಖ್ಯ ಚುನಾವಣೆಯಲ್ಲಿ ಮುಖ್ಯ ಗುರು ಆರ್ ಎಂ ಕುಮಸಗಿ, ಕೆ ಡಿ ಮುಲ್ಲಾ ಶ್ರೀಮತಿ ಜುಮುನಾಳ ಶ್ರೀಮತಿ ಎಫ ಎಂ ಭಗವಾನ ಶ್ರೀಮತಿ ಇಂಡಿಕರ್ ಶ್ರೀಮತಿ ಎನ್ ಹೆಚ್ ಸಿಂದಗಿ ಕುಮಾರಿ ಆಲಿಯಾ ಕಾಜಿ ಆರಿಫ್ ತಾಂಬೂಳಿ ಎಸ್ ಡಿ ಎಂ ಸಿ ಅಧ್ಯಕ್ಷ ಮೊಹಮ್ಮದ್ ಅಶ್ಪಾಕ್ ಕರಜಗಿ ಸೇರಿಂದತೆ ಮಕ್ಕಳು ಭಾಗವಹಿಸಿದರು.