ಸಾಧಕ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಅತ್ಯವಶ್ಯ: ಹಾಸಿಂಪೀರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಾಧಕ ವಿಧ್ಯಾರ್ಥಿಗಳಿಗೆ ಸನ್ಮಾನಿಸುವದು ಸಮಾಜದ ಹಾಗು ಸಂಘ ಸಂಸ್ದೆಗಳ ಪ್ರೋತ್ಸಾಹ ಅತ್ಯವಶ್ಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿಧ್ಯಾಥಿ೯ಗಳು ಜಿಲ್ಲೆಗೆ ಪ್ರಥಮ ,ದ್ವಿತೀಯ ಹಾಗು ತೃತೀಯ ಸ್ಥಾನ ಪಡೆದ ವಿಧ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸಿ ಸನ್ಮಾನಿಸಿದ್ದು ಅತ್ಯಂತ ಸ್ತುತಾರ್ಹವೆಂದು ಕನ್ನಡ ಸಾಹಿತ್ಯ ಪರಿತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ರವಿವಾರ ಸಂಜೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷÀತ್ತಿನ ಸಭಾಂಗಣದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯವಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶ್ರದ್ಧೆಯಿಂದ ಶ್ರಮವಹಿಸಿ ಸಮಯ ಹಾಳುಮಾಡದೆ ವಿದ್ಯಾರ್ಜನೆ ಮಾಡಿದರೆ ಗುರಿಮುಟ್ಟಲು ಸಾಧ್ಯ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಡಾ ಮಾಧವ ಗುಡಿ ಮಾತನಾಡಿ ಮೂರು ವಿದ್ಯಾರ್ಥಿನಿಯರು ಸರಕಾರಿ ಪ್ರೌಢ ಶಾಲೆಯಲ್ಲಿ ಈ ಸಾಧನೆ ಮಾಡಿದ್ದು ಶ್ಲಾಘನಿಯವಾಗಿದೆ. ಸರಕಾರಿ ಶಾಲೆಗಳ ಶಿಕ್ಷಕರು ಅತ್ಯಂತ ಪ್ರತಿಭಾವಂತರಾಗಿರುವದರಿAದ ಇಂತಹ ಫಲಿತಾಂಶ ಪಡೆಯಲು ಸಾಧ್ಯ ಎಂದರು. ಕರ್ನಾಟಕ ಪಬ್ಲಿಕ ಶಾಲೆ ಉಪ ಪ್ರಾಚಾರ್ಯ ಜೈನೂಬ ಬಗಲಿ ಮಾತನಾಡಿದರು ಸರಕಾರಿ ಪ್ರೌಢ ಶಾಲೆ ಜಂಬಗಿ ವಿಧ್ಯಾರ್ಥಿನಿ ಅನ್ನಪೂರ್ಣೇಶ್ವರಿ ದೇಶಮುಖ ೬೧೯ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸರಕಾರಿ ಕರ್ನಾಟಕ ಪಬ್ಲಿಕ ಶಾಲೆ ಮಮದಾಪೂರ ಗಂಗಾ ಪೂಜಾರಿ ೬೧೮ ಅಂಕ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಸರಕಾರಿ ಪ್ರೌಢ ಶಾಲೆ ಚಟ್ಟರಕಿ ವೈಶಾಲಿ ಹಿರೇಮಠ ೬೧೭ ಅಂಕ ಪಡೆದು ತೃತೀಯ ಸ್ಥಾನ ಗಿಟ್ಟಿಸಿದ್ದಾರೆ. ಆ ಶಾಲೆಗಳ ಮುಖ್ಯ ಅಧ್ಯಾಪಕಿ ರೇಣುಕಾ ಕೊಣ್ಣೂರ, ಜೆನೂಬ ಬಗಲಿ.ಶಶಿಕಲಾ ನಾಯಕ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಡಾ. ಯು ಕೆ ಕುಲಕರ್ಣಿ, ಎಸ್ ಎಸ್ ಖಾದ್ರಿ ಇನಾಮದಾರ, ಸಿದ್ದಲಿಂಗಯ್ಯ ಚೌಕಿಮಠ, ವಾಣಿಶ್ರೀ ದೇಶಮುಖ, ಸಂತೋಷÀ ಪಾಟೀಲ, ಲತಾ ಗುಂಡಿ.ಶರಣಮ್ಮಾ ಹಾದಿಮ, .ಕಮಲಾ ಮುರಾಳ. ರಾಘವೇಂದ್ರ ಪುರೋಹಿತ.ಕೆ ಎಸ್ ಹಣಮಾಣಿ, ಶ್ರೀಕಾಂತ ನಾಡಗೌಡ. ಅರ್ಜುನ ಶಿರೂರ.ವಾಯ್ ಎಚ್ ಲಂಬು.ಎಸ್ ಎಲ್ ಇಂಗಳೇಶ್ವರ, ಬಸವರಾಜ ಬಿರಾದಾರ, ಎ ಡಿ ಮುಲ್ಲಾ.ಭಾಗಿರಥಿ ಸಿಂಧೆ .ಸುನಂದಾ ಕೋರಿ ಶಿಲ್ಫಾ ಭಸ್ಮೆ, ಪರವೀನ ಶೇಖ.ಯಮನಪ್ಪಾ ಪವಾರ ಮುಂತಾದವರು ಉಪಸ್ಥಿತರಿದ್ದರು.