ನಾಳೆ ಮಾಧವಾನಂದ ಪ್ರಭುಜೀಗಳ ಪುಣ್ಯಸ್ಮರಣೆ : ಪಂಪಕವಿ ರಾಯಪ್ಪ ಬೆಳಗಲಿ ಅವರ ೧೧ನೇ ಪುಣ್ಯಾರಾಧನೆ

Jun 20, 2025 - 23:34
Jun 20, 2025 - 23:55
 0
ನಾಳೆ ಮಾಧವಾನಂದ ಪ್ರಭುಜೀಗಳ ಪುಣ್ಯಸ್ಮರಣೆ : ಪಂಪಕವಿ ರಾಯಪ್ಪ ಬೆಳಗಲಿ ಅವರ ೧೧ನೇ ಪುಣ್ಯಾರಾಧನೆ

ಬೆಂಗಳೂರು : ಉತ್ತರ ಕರ್ನಾಟಕದಿಂದ ಮುಂಬೈ ವರೆಗೂ ದೇವರು ಎಂದೇ ಖ್ಯಾತರಾಗಿದ್ದ ಸಮರ್ಥ ಸದ್ಗುರು ಶ್ರೀ ಮಾಧವಾನಂದ ಪ್ರಭುಜೀ ಪುಣ್ಯಸ್ಮರಣೆ ಹಾಗೂ ಶ್ರೀ ಪಂಪಕವಿ ರಾಯಪ್ಪ ಬೆಳಗಲಿ ಅವರ ೧೧ನೇ ಪುಣ್ಯಾರಾಧನೆ ಕಾರ್ಯಕ್ರಮವನ್ನು ಕಂಟೋನ್ಸೆAಟ್ ರೈಲು ನಿಲ್ದಾಣ ಬಳಿ ಇರುವ ಬಂಜಾರ ಭವನದಲ್ಲಿ ನಾಳೆ ಜೂ.೨೨ರಂದು ಬೆಳಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರ, ಇಂಚಗೇರಿ ಮಠದ ಪೀಠಾಧಿಪತಿ ಪೂಜ್ಯ ಶ್ರೀ ಸಮರ್ಥ ಸದ್ಗುರು ಶ್ರೀ ರೇವಣಸಿದ್ದೇಶ್ವರ ಮಹಾರಾಜರು ವಹಿಸಲಿದ್ದಾರೆ.
ಪಾವನ ಸಾನಿಧ್ಯವನ್ನು ಭೂಕೈಲಾಸ ಆಶ್ರಮ, ನಂದಗಾAವ ಶ್ರೀ ಮಹಾದೇವ ಮಹಾರಾಜರು, ಯಂಕAಚಿ ಕ್ಷೇತ್ರ ಆಶ್ರಮದ ಪೂಜ್ಯ ಶ್ರೀಗುರುಪಾದ ಶರಣರು, ಗುರುದೇವ್, ರಾಮತೀರ್ಥ ಕ್ಷೇತ್ರದ ಶ್ರೀ ತಾರಾಚಂದ ಮಹಾರಾಜರು ವಹಿಸಲಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್, ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ, ಸಹಕಾರ ಘಟಕದ ಅಧ್ಯಕ್ಷ ಧನರಾಜ್ ತಾಳಂಪಳ್ಳಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮವು ಜರುಗಲಿದ್ದು, ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ಡಾ.ಹರೀಶ್‌ಕುಮಾರ್, ರಾಜಶೇಖರ ಎಸ್. ಅವರನ್ನು ಸನ್ಮಾನಿಸಲಾಗುತ್ತಿದೆ.
ಪ್ರೀತಿ ಬಿಲ್ಡರ್ಸನ ಮಾಲೀಕರು ಜಿ.ಕೆ. ಆನಂದ ಕುಮಾರ, ಮಾಜಿ ಬಾಗಲಕೋಟ ಜಿಪಂ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಜಮಖಂಡಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂತೋಷ ತಳಕೇರಿ, ರಾಮನಗರ ಜಿ.ಪಂ. ಮಾಜಿ ಸದಸ್ಯರಾದ ಈಶ್ವರ, ರಾಮಣ್ಣ ಮಹಾರಾಜರು ನಾಗನೂರ, ಶಂಕ್ರೆಪ್ಪ ಮಹಾರಾಜರು ಕೌಜಲಗಿ, ನಾಮದೇವ ಮಹಾರಾಜರು, ಕೆಂಚಪ್ಪ ಮಹಾರಾಜರು ಮಮದಾಪುರ, ಸಂಗಪ್ಪ ಸಾಲಿ ಮಹಾರಾಜರು ತಲ್ಲೂರ, ತಮ್ಮಣ್ಣಪ್ಪ ಮಹಾರಾಜರು ವೆಂಕಟಾಪೂರ, ಗಿರೀಶ ಮಹಾರಾಜರು ಮೋಜನವಾಡಿ, ವಸಂತ ಮಹಾರಾಜರು ನಾಗನೂರ ಜ್ಞಾನದೇವ ಖೋತ ರೆಡ್ಡರಹಟ್ಟಿ, ಶಶಿಕಾಂತ ಶಿವನೂರ ಸಾಹಿತಿಗಳು, ಖೋಜನವಾಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಮುಕುಂದ ಬೆಳಗಲಿ, ಷಡಕ್ಷರಿ ಕಂಪೂನವರ, ಸುರೇಶ ಜಂಬಗಿ ಪತ್ರಿಕಾ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ಸೇನಾನಿ ಮಾಧವಾನಂದರ ಇತಿಹಾಸ ;
ಉತ್ತರ ಕರ್ನಾಟಕದ ಭಾಗದಿಂದ ಮಹಾರಾಷ್ಟ್ರದ ಮುಂಬೈವರೆಗೆ ದೇವರು ಎಂದೇ ಖ್ಯಾತನಾಮರಾದ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭುಜಿ (ಮುರಗೋಡ ಮಹಾದೇವರು) ಅವರು ೧೯೧೫, ನವೆಂಬರ್ ೨ರಂದು ಹುಬ್ಬಳ್ಳಿಯಲ್ಲಿ ತಪಸ್ವಿ ಶ್ರೀ ಸದ್ಗುರು ಶಿವಪ್ರಭು ಮಹಾರಾಜರ ಹಾಗೂ ಮಾತೋಶ್ರೀ ಕಾಳಮ್ಮ ಅವರ ಉದರದಲ್ಲಿ ಜನಿಸಿದರು. ಸದ್ಗುರು ಶ್ರೀ ಗಿರಿಮಲ್ಲೇಶ್ವರ ಮಹಾರಾಜರ ಸ್ಪರ್ಶದಿಂದ ಸುಲಲಿತ ಉಸಿರಾಟ ಆರಂಭಿಸಿದ ಮಹಾದೇವರು ತಮ್ಮ ೧೩ನೇ ವಯಸ್ಸಿನಲ್ಲಿ ಶ್ರೀ ಗಿರಿಮಲ್ಲೇಶ್ವರ ಮಹಾರಾಜರಿಂದಲೇ ಉಪದೇಶ ಪಡೆದು ಲೋಕೋದ್ಧಾರಕ್ಕಾಗಿ ದಾಪುಗಾಲು ನೀಡಲಾರಂಭಿಸಿದರು. ಕಿರಿಯ ವಯಸ್ಸಿನಲ್ಲೇ
ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಮಹಾದೇವರ ಕಠಿಣ ಶ್ರಮ, ತಪೋಬಲ ಹಾಗೂ ಹೋರಾಟದ ತೇಜಸ್ಸನ್ನು ಅರಿತು-ಅನುಭವಿಸಿದ ಲಕ್ಷಾಂತರ ಜನರು ಅವರ ಅನುಯಾಯಿಗಳಾಗಿ, ಭಕ್ತರಾಗಿ ಅವರ ನಿಸ್ವಾರ್ಥ ಹೋರಾಟಕ್ಕೆ ಕೈಜೋಡಿಸಿದರು.  ಸಾಮೂಹಿಕ ಬೇಸಾಯ ಆರಂಭಿಸಿ ಕೃಷಿ ಋಷಿ ಎಂದು ಖ್ಯಾತನಾಮರಾದರು. ೧೯೮೦, ಮೇ ೨೫ರಂದು ಮಾಧವಾನಂದರು ಬ್ರಹ್ಮ ಲೀನರಾದರು. ದೇಶ ಹಾಗೂ ನಾಡಿನ ಒಳಿತಿಗೆ ಹೋರಾಡಿದ ಮಾಧವಾನಂದರ ಹಾಗೂ ಇಂಚಗೇರಿ ಸಂಪ್ರದಾಯದ ಕೊಡುಗೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ ೨೦೦೬ರ ನವೆಂಬರ್ ೧ರಂದು ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿತು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.