ಸೌಹಾರ್ದತೆಯಿಂದ ಮೊಹರಂ ಆಚರಣೆ ಸಂತಸದ ಸಂಗತಿ : ಶಾಸಕ ಯಶವಂತರಾಯಗೌಡ ಪಾಟೀಲ

Jul 6, 2025 - 04:16
 0
ಸೌಹಾರ್ದತೆಯಿಂದ ಮೊಹರಂ ಆಚರಣೆ ಸಂತಸದ ಸಂಗತಿ : ಶಾಸಕ ಯಶವಂತರಾಯಗೌಡ ಪಾಟೀಲ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಇಂಡಿ: ಪಟ್ಟಣದಲ್ಲಿ ಮೊಹರಂ ಹಬ್ಬದ ನಿಮಿತ್ಯ ಪ್ರಸಿದ್ಧ ಆಟವಿ ಖತಾಲ ಹಬ್ಬವನ್ನು ಭಕ್ತರು ಶಾಂತಿ ಸೌಹಾರ್ಧತೆಯಿಂದ ಆಚರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಶಾಸಕ ಯಶವಂತರಾಯಗೌಡ ಹೇಳಿದರು.


ಅವರು ಪಟ್ಟಣದ ಹುಸೇನ ಬಾದಷಹಾ ದರ್ಗಾದಲ್ಲಿ ಆಟವಿ ಖತಲ ನಿಮಿತ್ಯ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ಜನತೆ ಶಾಂತಿ ಹಾಗೂ ಸೌಹಾರ್ಧತೆ ಕಾಪಾಡಿಕೊಂಡು ಬಂದಿದ್ದಾರೆ. ಮೊಹರಂ ಹಬ್ಬವೂ ಕೂಡ ತ್ಯಾಗದ ಪ್ರತೀಕವಾಗಿರುವದರಿಂದ ಸರ್ವ ದರ್ಮಿಯರು ಭಾವೈಕ್ಯತೆಯಿಂದ ಆಚರಿಸುತ್ತಿದ್ದಾರೆ ಎಂದರು.


ಜಾವೇದ ಮೋಮಿನ, ಪ್ರಶಾಂತ ಕಾಳೆ, ಷಹನಷಹಾ ಜಹಾಗೀರದಾರ, ಜಟ್ಟೆಪ್ಪ ರವಳಿ, ಪ್ರಕಾಶ ಐರೋಡಗಿ, ತುಕಾರಾಮ ವಾಲಿಕಾರ, ದೇವಸ್ಥಾನ ಸಮಿತಿಯ ಮಕಾನದಾರ ಅರ್ಚಕ ಬಂದುಗಳು ಕುಟುಂಬದವರು ಪಾಲ್ಗೊಂಡಿದ್ದರು.
ಇದಕ್ಕೂ ಮುಂಚೆ ಬೆಳಗ್ಗೆ ೪ ಗಂಟೆಗೆ ಭಕ್ತರು ನೈವೆಧ್ಯ ಕ್ಕಾಗಿ ದೇವಸ್ಥಾನಕ್ಕೆ ಬರಲು ಪ್ರಾರಂಭಿಸಿದರು. ಜಿಲ್ಲೆಯ ಬೇರೆ ಜಿಲ್ಲೆ ಸುಮಾರು ೫೦ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದರು, ಬಿಜೆಪಿ ಕಾಸುಗೌಡ ಬಿರಾದಾರ, ದಾದಾಗೌಡರ ಮನೆತನದ ಪ್ರಭುಗೌಡ ಪಾಟೀಲ ಸೇರಿದಂತೆ ಅನೇಕ ಗಣ್ಯರು ದರ್ಶನ ಪಡೆದರು.


ಪಟ್ಟಣದ ಸಿಪಿಐ ಪ್ರದೀಪ ಬಿಸೆ ನೇತೃತ್ವದಲ್ಲಿ ಪೋಲಿಸ ಬಿಗಿ ಬಂದೋಬಸ್ತ ವ್ಯವಸ್ಥೆ ಮಾಡಲಾಗಿತ್ತು. ಮತ್ತು ಪುರಸಭೆ ಮುಖ್ಯಾಧಿಕಾರಿಗಳು, ಸಿಬ್ಬಂದಿ ಚುನಾಯಿತ ಸದಸ್ಯರು ಕುಡಿಯುವ ನೀರಿನ ಮತ್ತು ಸ್ವಚ್ಛತೆ ವ್ಯವಸ್ಥೆ ಮಾಡಿದ್ದರಿಂದ ಭಕ್ತಾದಿಗಳಿಗೆ ಯಾವದೇ ರೀತಿಯ ತೊಂದರೆ ಯಾಗಲಿಲ್ಲ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.