ಕೊಲೆ ಆರೋಪ ಸಾಬೀತು : ಇಬ್ಬರು ಆರೋಪಿತರಿಗೆ ಜೀವಾವಧಿ ಶಿಕ್ಷೆ

ತನಿಖಾ ಸಹಾಯಕರ ಕಾರ್ಯ ಶ್ಲಾಘಿಸಿದ ಎಸ್ಪಿ ನಿಂಬರಗಿ

Jul 15, 2025 - 21:00
 0
ಕೊಲೆ ಆರೋಪ ಸಾಬೀತು : ಇಬ್ಬರು ಆರೋಪಿತರಿಗೆ ಜೀವಾವಧಿ ಶಿಕ್ಷೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ವಿಜಯಪುರ : ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣವನ್ನು ಬಸವನಬಾಗೇವಾಡಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದು ಕೊಲೆ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ೩.೫೦ ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದೆ.                    

ವಿಜಯಪುರ ಜಿಲ್ಲೆ ಹೆಗಡಿಹಾಳ ಗ್ರಾಮದ ಭೀಮರಾಯ ದಳವಾಯಿ ತನ್ನ ಪುತ್ರ ಜಕರಾಯ ದಳವಾಯಿ ಮನೆಯಿಂದ ಹೋದವನು ವಾಪಸ್ ಆಗಿಲ್ಲ ಆತನನ್ನು ಪತ್ತೆ ಮಾಡಿಕೊಡಲು ಏ.೨೨/೨೦೨೩ ರಂದು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.     

ನಂತರ ಆ.೨೫/ ೨೦೨೩ ರಂದು ನನ್ನ ಮಗನನ್ನು ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು.

                 
ಪ್ರಕರಣ ತನಿಖೆ ನಡೆಸಿದ್ದ ಪೊಲೀಸರು ಜಕರಾಯನ ಪತ್ನಿ ಜಯಶ್ರೀ ದಳವಾಯಿ ಡೋಂಗ್ರಿಸಾಬ ಸೈಪನಸಾಬ ಬೊಮ್ಮನಹಳ್ಳಿ ಜೊತೆ ಅನೈತಿಕ ಸಂಬ0ಧ ಇರಿಸಿಕೊಂಡಿದ್ದು ಇದನ್ನು ಬಿಡುವಂತೆ ಬುದ್ದಿವಾದ ಹೇಳಿದ್ದ ಜಕರಾಯನನ್ನೇ ಕೊಲೆ ಮಾಡಿ ಸಾಕ್ಷಗಳನ್ನು ಮುಚ್ಚಿ ಹಾಕಲು ಯತ್ನಿಸಿದ್ದು ತನಿಖೆಯಿಂದ ತಿಳಿದು ಬಂದಿದೆ.         

ಆರೋಪಿತರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದು ನ್ಯಾಯಾಲಯವು ಜು.೧೪/೨೦೨೫ ರಂದು ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ೩.೫೦ ಲಕ್ಷ ರೂ.ದಂಡವನ್ನು ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.             

ಸರ್ಕಾರದ ಪರವಾಗಿ ೧ನೇ ಅಧಿಕ ಸರಕಾರಿ ಅಭಿಯೋಜಕಿ ವನಿತಾ ಇಟಗಿ ವಾದ ಮಂಡಿಸಿದ್ದರು. ತನಿಖಾಧಿಕಾರಿಗಳಾದ ರಾಯಗೊಂಡ ಎಸ್. ಜಾನರ, ಪೊಲೀಸ್ ಇನ್ಸ್ಪೆಕ್ಟರ್, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ದೋಷಾರೋಪಣೆ ಪಟ್ಟಿ ಸಲ್ಲಿಸಿದ ಶರಣಗೌಡ ಎಮ್ ನ್ಯಾಮಣ್ಣವರ, ಪಿಐ ಬಸವನ ಬಾಗೇವಾಡಿ ಪೊಲೀಸ್ ಠಾಣೆ, ಬಸವನ ಬಾಗೇವಾಡಿಯ ತನಿಖಾ ಸಹಾಯಕರು ಹಾಗೂ ಸಿಬ್ಬಂದಿ ಕಾರ್ಯವನ್ನು ಪೊಲೀಸ ವರಿಷ್ಠಾಧಿಕಾರಿ ಲಕ್ಷö್ಮಣ ಬಿ ನಿಂಬರಗಿ ಶ್ಲಾಘಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.