ಶಿಕ್ಷಣ ಕ್ಷೇತ್ರ ಆಧುನಿಕ ಆವಿಷ್ಕಾರಗಳೊಂದಿಗೆ ನಿರಂತರ ಅಭಿವೃದ್ಧಿಯಾಗಬೇಕು

ವಿಜಯಪುರ: ಶಿಕ್ಷಣ ಕ್ಷೇತ್ರವು ಆಧುನಿಕ ಆವಿಷ್ಕಾರಗಳೊಂದಿಗೆ ನಿರಂತರವಾಗಿ ಅಭಿವೃದ್ಧಿಯಾಗಬೇಕು ಎಂದು ಎನ್.ಸಿ.ಟಿ.ಇ ದಕ್ಷಿಣ ಪ್ರಾಂತ ನಿರ್ದೇಶಕಿ ಪ್ರೊ.ಮೀನಾ ಆರ್. ಚಂದಾವರಕರÀ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ‘ಎನ್.ಸಿ.ಟಿ.ಇ ನಿಯಮಗಳು ಮತ್ತು ಮಾನದಂಡಗಳ ಹಿನ್ನೆಲೆಯಲ್ಲಿ ಬಹುಶಿಸ್ತಿನ ಉನ್ನತ ಶಿಕ್ಷಣದ ಪರಿಕಲ್ಪನೆ’ ಎಂಬ ವಿಷಯದ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಎನ್.ಇ.ಪಿ. ೨೦೨೦ ಆಧಾರಿತ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣದ ಅಳವಡಿಕೆಗೆ ಸನ್ನದ್ಧವಾಗಬೇಕೆಂದು ಕರೆ ನೀಡಿದರು. ಇಂದಿನ ಪರಿಸ್ಥಿತಿಯಲ್ಲಿ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದ್ದು, ಅದರ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳ ಸಬಲೀಕರಣ, ವಿದ್ಯಾರ್ಥಿ ಕೇಂದ್ರೀಕೃತ ಶಿಕ್ಷಣ ಹಾಗೂ ಉತ್ತಮ ಶಾಲಾ ಶಿಕ್ಷಣವು ಅತ್ಯಂತ ಬೇಡಿಕೆಯ ವಿಷಯಗಳಾಗಿವೆ ಎಂದರು. ಇದೇ ಸಂದರ್ಭದಲ್ಲಿ ಕಲಬುರಗಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗದ ಡೀನ್ ಪ್ರೊ.ಜಿ.ಆರ್.ಅಂಗಡಿ ಮಾತನಾಡಿ, ಭವಿಷ್ಯದ ಶಿಕ್ಷಣ ಸಂಸ್ಥೆಗಳ ರೂಪರೇಖೆಯ ಕುರಿತು ಎನ್.ಸಿ.ಟಿ.ಇ ನಿಂದ ಹೊರಬಂದಿರುವ ಹೊಸ ನಿಯಮಗಳು ಮತ್ತು ಅವುಗಳ ಅನ್ವಯಿಕೆ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಮಾತನಾಡಿ, ವಿಶ್ವವಿದ್ಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೊರಡುವ ಶಿಕ್ಷಣ ಸಂಬAಧಿತ ನಿಯಮಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಅಳವಡಿಸಿಕೊಳ್ಳುವುದು ಅತ್ಯಂತ ತುರ್ತು ಮತ್ತು ಅವಶ್ಯಕವಾಗಿದೆ ಎಂದರು.
ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯ ಚಟುವಟಿಕೆಯ ಸವಾಲುಗಳ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚೆ ಗೋಷ್ಠಿಗಳು ನಡೆದವು. ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ.ಚAದ್ರಶೇಖರ್, ವಿವಿಧ ಮಹಿಳಾ ಶಿಕ್ಷಣ ಮಹಾವಿದ್ಯಾಲಯಗಳ ಪ್ರಾಚಾರ್ಯರು ಮತ್ತು ಹಿರಿಯ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿಎಡ್ ಪ್ರಶಿಕ್ಷಣಾರ್ಥಿಗಳು ಮಹಿಳಾ ಗೀತೆ ಹಾಡಿದರು. ಶಿಕ್ಷಣ ನಿಕಾಯದ ಡೀನ್ ಡಾ. ಸಕ್ಬಾಲ್ ಹೂವಣ್ಣ ಸ್ವಾಗತಿಸಿದರು. ಪ್ರೊ. ಬಸವರಾಜ್ ಲಕ್ಕಣ್ಣನವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ವಿಷ್ಣು ಎಂ.ಶಿAದೆ ನಿರೂಪಿಸಿದರು. ಪ್ರೊ.ಅಶೋಕ್ ಕುಮಾರ್ ಬಿ ಸುರಪುರ ವಂದಿಸಿದರು.