ಮುಗಳಖೋಡದಲ್ಲಿ ಮೊಳಗಿದ ಹರಿನಾಮ ಸ್ಮರಣೆ

Jun 26, 2025 - 08:25
 0
ಮುಗಳಖೋಡದಲ್ಲಿ ಮೊಳಗಿದ ಹರಿನಾಮ ಸ್ಮರಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ  

ಮುಗಳಖೋಡ : 168ನೇ ಪಾದಯಾತ್ರೆ ಪಂಢರಪುರಕ್ಕೆ ಹೊರಡುವ ದಿಂಡಿ ಯಾತ್ರೆಯಲ್ಲಿ 2 ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿಯಾಗಿದ್ದರು. ಮಂಗಳವಾರ ಪಟ್ಟಣದ ಶ್ರೀ ವಿಠ್ಠಲ ಮಂದಿರದಲ್ಲಿ ವಸತಿ ಹೂಡಿದ್ದರು.. ಅಮವಾಸ್ಯೆಯ ದಿನವಾದ ಬುಧವಾರದಂದು ನಸೂಕಿನ ಜಾವದಲ್ಲಿ ಶ್ರೀ ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆಯ ದರ್ಶನ ಪಡೆದರು.

 

ಬಳಿಕ ಶ್ರೀ ಯಲ್ಲಾಲಿಂಗ ಮಹಾರಾಜರ ಮಠದಲ್ಲಿ ವೀಣೆ, ತಾಳ, ಮೃದಂಗ ನುಡಿಸುತ್ತ ಹರಿ ನಾಮ ಸ್ಮರಣಗೆ ಹೆಜ್ಜೆ ಹಾಕುತ್ತ ಭಕ್ತಿ ಪರವಶರಾಗಿ ಹರ್ಷಗೊಂಡಿದ್ದನ್ನು ನೋಡಿದ್ದರೇ ಇದು ಮುಗಳಖೋಡವೋ? ಅಥವಾ ಪಂಢರಪೂರವೋ ಎನ್ನುವಂತಿತ್ತು.

 

ಈ ವೇಳೆ ಮಾತನಾಡಿದ ಗೋಕಾಕ ಪಟ್ಟಣದ ಸಂತ ಶ್ರೀ ಶಿವರಾಮ ದಾದಾ ಟ್ರಸ್ಟಿ, ಸಂತರಾದ ನಾಮದೇವ ರೆಣಕೆ, ಮೊದಲಿನಿಂದಲೂ ಗೋಕಾಕದಿಂದ ಮುಗಳಖೋಡ ಮಾರ್ಗವಾಗಿ ಪಂಢರಪೂರಕ್ಕೆ ಹೊರಡುವ ನಮ್ಮ ದಿಂಡಿಯಾತ್ರೆ ಪಟ್ಟಣದಲ್ಲಿ ವಸತಿ ಮಾಡಿ ಬೆಳಗ್ಗೆ ಶ್ರೀ ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆಯ ದರ್ಶನ ಪಡೆದು ಸಾಗುವುದು ವಾಡಿಕೆ. ಅಂದಿನ ಶ್ರೀಗಳಾದ ಷಡಕ್ಷರಿ ಸಿದ್ದರಾಮ ಶಿವಯೋಗಿಗಳು ನಮಗೆ ಆಶೀರ್ವಾದಿಸಿ, ಸುಮಾರು 8 ಕಿ ಮೀ ವರಗೆ ನಮ್ಮ ಜೊತೆ ಪಾದಯಾತ್ರೆ ಮಾಡುತಿದ್ದ ಆ ನೆನಪು ಇನ್ನೂ ಹಚ್ಚ ಹಸಿರಾಗಿದೆ. ಅದರಂತೆ ಇಂದು ಡಾ. ಮುರುಘರಾಜೇಂದ್ರ ಶ್ರೀಗಳು ಸಹ ನಮ್ಮ ದಿಂಡಿಯಾತ್ರೆಗೆ ಶುಭ ಹಾರಿಸಿರುವುದು ನಮಗೆ ಸಂತಸ ತಂದಿದೆ ಎಂದರು.

" ಪಂಢರಪೂರ ದಿಂಡಿ ಯಾತ್ರೆಯಲ್ಲಿ ಭಾಗವಹಿಸಿರುವ ಸಕಲ ಸದ್ಭಕ್ತರಿಗೆ ಮುಗಳಖೋಡ ಗುರು ಪರಂಪರೆಯ ಶ್ರೀರಕ್ಷೆ ಹಾಗು ಸುಕ್ಷೇತ್ರ ಪಂಢರಪೂರದ ಪಾಂಡುರಂಗ ಅನುಗ್ರಹ ಲಭಿಸಲಿ. ಮುಂಬರುವ ದಿನಗಳಲ್ಲಿ ನಮ್ಮ ಭಾರತ ದೇಶ ಸುಭಿಕ್ಷವಾಗಲಿ ಜೊತೆಗೆ ನಮ್ಮ ದೇಶದ ಹಿರಿಮೆಯಾದ ಧಾರ್ಮಿಕ ಪರಂಪರೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಗಮವಾಗಿ ಸಾಗಲಿ ಎಂದು ಶುಭ ಹಾರೈಸುವೆವು "

 

ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ, ಮುಗಳಖೋಡ-ಜಿಡಗಾ ಮಠ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.