ಇಂಡಿಯ ನಿಂಬೆ ಪ್ರದೇಶಕ್ಕೆ ರಫ್ತು ಮಾಡುವ ಅರ್ಹತೆ ಹೊಂದಿದೆ : ಮಧುಮತಿ ಅಂಡ್ರೂಸ್
ಇಂಡಿ : ತಾಲೂಕಿನಲ್ಲಿ ಬೆಳೆದ ನಿಂಬೆ ರೈತರು ಓಪೆಡಾ ಬೆಂಗಳೂರ ದೊಂದಿಗೆ ಸದಸ್ಯ ಹೊಂದಿ ಇಲ್ಲವೆ ಇಲ್ಲಿಯ ರೈತರು ರೈತ ಸೇವಾ ಸಂಘಗಳ ಮೂಲಕ ಓಪೆಡಾ ದೊಂದಿಗೆ ಸದಸ್ಯತ್ವ ಹೊಂದಿ ನಿಂಬೆಯನ್ನು ಹೊರದೇಶಕ್ಕೆ ಕಳುಹಿಸಬಹುದು ಎಂದು ಓಪೆಡಾ ವ್ಯವಸ್ಥಾಪಕಿ ಮಧುಮತಿ ಅಂಡ್ರೂಸ್ ಹೇಳಿದರು.
ಅವರು ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಇಂಡಿ ಮತ್ತು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಪ್ತು ಪ್ರಾಧಿಕಾರ ಇವರ ಸಹಯೋಗದಲ್ಲಿ ನಡೆದ ನಿಂಬೆ ಬೆಳೆಗಾರರಿಗೆ ಸಾಮಥ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಡಿಯ ನಿಂಬೆಯನ್ನು ಆಸ್ರೇಲಿಯಾ, ಸಿಂಗಾಪುರ,ಯುನೈಟೆಡ್ ಸ್ಟೇಟ್ಸ , ಕತರ, ಯನೈಟೆಡ್ ಅರಬ ಯಮಿರೇಟ್ಸ ಮತ್ತು ಕೆನಡಾ ದೇಶಗಳಿಗೆ ಕಳುಹಿಸಬಹುದು ಎಂದರು. ಪ್ರಾಧಿಕಾರ ೧೯೮೬ ರಲ್ಲಿ ಪ್ರಾರಂಭಮಾಡಿದ್ದು ಕರ್ನಾಟಕದಲ್ಲಿ ೧೮ ಕೇಂದ್ರಗಳಿವೆ. ಮತ್ತು ೧೬ರಾಜ್ಯಗಳಲ್ಲಿ ಓಪೆಡಾ ಕಚೇರಿ ಹೊಂದಿದೆ ಎಂದರು. ರಸಾಯನಿಕ ಔಷಧಿಗಳನ್ನು ಬಳಸದ ಮತ್ತು ಉತ್ತಮ ಗುಣಮಟ್ಟದ ನಿಂಬೆ ರಫ್ತು ಮಾಡಬಹುದು. ಓಪೆಡಾ ದೊಂದಿಗೆ ರೈತರು ಸದಸ್ಯರಾದರೆ ಓಪೆಡಾದವರು ನಿಮ್ಮ ಹೊಲಕ್ಕೆ ಬಂದು ಸರಿಯಾದ ಮಾರ್ಗದರ್ಶನ ನೀಡಿ ನಿಮ್ಮ ನಿಂಬೆ ರಫ್ತು ಮಾಡುವಲ್ಲಿ ಸಹಕರಿಸುತ್ತಾರೆ ಎಂದರು. ಇಂಡಿಯ ನಿಂಬೆಗೆ ಜಿ.ಐ ಟ್ಯಾಗ ಇದ್ದು ಇಲ್ಲಿಯ ನಿಂಬೆ ವಿದೇಶಗಳಲ್ಲಿಯೂ ಪ್ರಸಿದ್ದಿ ಹೊಂದಿದೆ. ಇಂಡಿಯವರೇ ಆದ ಕೊಳುರಗಿ ಗ್ರಾಮದ ಚಂದ್ರಕಾAತ ಮೆಂಡೆದಾರರವರು ನಿಂಬೆ ಮೌಲ್ಯವರ್ಧನ ಮಾಡಿ ಪರದೇಶಕ್ಕೆ ಕಳುಹಿಸುತ್ತಿದ್ದಾರೆ ಎಂದರು. ಅದಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಸಬ್ಸಿಡಿ ಕೂಡ ನೀಡಲಾಗುತ್ತಿದೆ ಎಂದರು.
ಸಿಎಫ್‌ಟಿಆರ್ ಐ ನ ಹಿರಿಯ ತಾಂತ್ರಿಕ ಅಧಿಕಾರಿ ಡಾ. ಅನೀಲಕುಮಾರ ಮಾಡನಾಡಿ ಇಂಡಿಯ ನಿಂಬೆ ೪೫ ದಿನಗಳ ವರೆಗೆ ಶೇಖರಿಸಬಹುದು. ಮತ್ತು ನಿಂಬೆಯಲ್ಲಿನ ಶೇ ೮೦ ರಷ್ಟು ಪ್ರಮಾಣದ ನೀರನ್ನು ಕಡಿಮೆ ಮಾಡಿ ಅದನ್ನು ಮೌಲ್ಯವರ್ಧನ ಮಾಡಿ ಮಾರುವದರಿಂದ ಒಂದು ರೂ ನಿಂಬೆಪರದೇಶದಲ್ಲಿ ಮೂವತ್ತು ರೂ ಗೆ ಮಾರಾಟ ಮಾಡಬಹುದು ಎಂದರು.ಇಲ್ಲವೆ ತಂತ್ರಜ್ಞಾನದ ಬಳಕೆ ಮಾಡಿಕೊಂಡು ನಿಂಬೆ ಸಂಸ್ಕರಣೆ ಮಾಡಿ ಮೌಲ್ಯವರ್ಧನೆ ಮಾಡಿ ವಸ್ತುಗಳನ್ನು ತಯಾರಿಸಿದರೆ ಅಧಿಕ ಲಾಭ ಪಡೆಯಬಹುದು ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ ರಾಜ್ಯದ ಶೇ ೬೦ ರಷ್ಟು ನಿಂಬೆ ಇಂಡಿ ತಾಲೂಕಿನಲ್ಲಿದ್ದು ನಿಂಬೆಗೆ ಸಂಬAದಿತ ಅನೇಕ ಸೇಮಿನಾರ ಮತ್ತು ವಿಚಾರಗೋಷ್ಠಿಗಳನ್ನು ತರಬೇತಿಗಳನ್ನು ರೈತರಿಗೆ ಹಮ್ಮಿಕೊಂಡು ರೈತರಿಗೆ ಉತ್ತಮ ಬೆಲೆ ಸಿಗುವ ಉದ್ದೇಶದಿಂದ ಎಲ್ಲರೂ ಕಾರ್ಯ ಮಾಡಬೇಕಾಗಿದೆ ಎಂದರು..
ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತçದ, ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಪಾಟೀಲ,ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ತಿಡಗುಂದಿ ವಿಜ್ಞಾನಿ ಸಿದ್ದಣ್ಣರೋಕೆ, ಪುಂಡಲೀಕ ಹೂಗಾರ, ವೀಣಾ ಚಂದಾವರಿ ಮಾತನಾಡಿದರು.
ಕೆವಿಕೆ ಮುಖ್ಯಸ್ಥ ಡಾ. ಉಮರ ಫಾರುಕ, ಕಿಶೋರ ಜಾಧವ ವೇದಿಕೆಯ ಮೇಲಿದ್ದರು. ರಾಜ್ಯದ ವಿವಿಧ ಭಾಗಗಳಿಂದ ನಿಂಬೆ ಬೆಳೆಗಾರರು ಸಂಘದ ಪ್ರಮುಖರು ಮತ್ತು ರೈತರು ಪಾಲ್ಗೊಂಡಿದ್ದರು.