ಹನುಮಾನ ಚಾಲಿಸಾ ಪಠಣದಿಂದ ಇಷ್ಠ ಸಿದ್ದಿ : ಜೋಶಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ತಾಳಿಕೋಟೆ : ಪ್ರತಿನಿತ್ಯವಾಗಲಿ ಅಥವಾ ಶನಿವಾರರಂದು ಹನುಮಾನ ಚಾಲಿಸಾ ಪಠಣ ಮಾಡುವದರಿಂದ ಮನುಷ್ಯನಿಗೆ ಇರುವ ಎಲ್ಲ ತೊಂದರೆಗಳು ನಿವಾರಣೆಯಾಗಿ ಇಷ್ಠ ಸಿದ್ದಿಗಳು ನೇರವೇರಲಿವೆ ಎಂದು ಖ್ಯಾತ ಜೋತಿಷ್ಯ ಶಾಸ್ತç ಪರಿಣಿತರಾದ ವೇ.ವಸಂತಬಟ್ ಜೋಶಿ ಅವರು ನುಡಿದರು.
ಶನಿವಾರರಂದು ಸ್ಥಳೀಯ ಶ್ರೀ ವಿಠ್ಠಲ ಮಂದಿರದಲ್ಲಿ ೧೩ ವಾರಗಳಿಂದ ಸಾಗಿಬಂದ ಹನುಮಾನ ಚಾಲಿಸಾ ಪಠಣ ಕಾರ್ಯಕ್ರಮದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಹನುಮಾನ ಚಾಲಿಸಾ ಪಾರಾಯಣ ಪಠಣ ಓದುವದರಿಂದ ರೋಗ ರುಜುಗಳು ನಿವಾರಣೆಯಾಗುತ್ತವೆ ಅಲ್ಲದೇ ಅಷ್ಠ ಸಿದ್ದಿಗಳು ಪರಿಣಮಿಸುತ್ತವೆ ಅಲ್ಲದೇ ಶಾಂತಿ ಮತ್ತು ಸುವ್ಯವಸ್ಥೆಯಿಂದ ಬಾಳಿ ಬೆಳಗಲು ಅನುಕೂಲವಾಗುತ್ತದೆ ಎಂದರು. ಈ ಹನುಮಾನ ಚಾಲಿಸಾ ಎಂಬ ೪೦ ನುಡಿಯ ಪಾರಾಯಣ ಪಠಣ ಕುರಿತು ಬರೆದಂತಹ ಮಂತ್ರೋಪದೇಶವು ಇದನ್ನು ತುಳಿಸಿದಾಸರು ಬರೆದಿದ್ದಾರೆ ಮೋಘಲ ಸಾಮ್ರಾಜ್ಯದ ಸಮಯದಲ್ಲಿ ತುಳಸಿದಾಸರ ಈ ಸೇವಾ ಕಾರ್ಯವನ್ನು ಗುರುತಿಸಿ ಇವರನ್ನು ಕರೆತರುವಲ್ಲಿ ಕೆಲವು ಸೈನಿಕರನ್ನು ತುಳಸಿದಾರೆಡೆಗೆ ಕಳುಹಿಸಿಕೊಡುತ್ತಾರೆ ಆ ಸ್ಥಾನಕ್ಕೆ ಹೋಗಲು ತುಳಸಿದಾಸರು ನಿರಾಕರಿಸುತ್ತಾರೆ ಅಷ್ಟರಲ್ಲಿಯೇ ಇವರನ್ನು ಕರೆಯಲು ಬಂದAತಹ ನೂರಾರು ಸೈನಿಕರಿಗೆ ಹನುಮಂತನ ಕೃಪೆಯಿಂದ ನೂರಾರು ವಾಹನರುಗಳು ಸೃಷ್ಠಿಯಾಗಿ ತುಳಸಿದಾಸರನ್ನು ಕರೆಯಲು ಬಂದAತಹ ಆ ಸೈನಿಕರ ಮೇಲೆ ದಾಳಿ ನಡೆಸಿ ಎಲ್ಲರನ್ನು ಓಡಿಸುವಂತಹ ಕಾರ್ಯ ನಡೆಯುತ್ತದೆ ಇದನ್ನೇಲ್ಲಾ ತುಳಸಿದಾಸರು ನೋಡುವಷ್ಟರಲ್ಲಿ ಹನುಮಂತನನ್ನೂ ಸಹ ಪ್ರತ್ಯಕ್ಷ ನೋಡಿದ ತುಳಸಿದಾಸರು ಅಂದಿನ ದಿನವೇ ಈ ಹನುಮಾನ ಚಾಲಿಸಾ ಎಂಬ ೪೦ ನುಡಿಯ ಬರೆದಂತಹ ಮಂತ್ರೋಪದೇಶವಾಗಿದೆ ಎಂದರು.
ಈ ಕಾರ್ಯಕ್ರಮವು ಪ್ರತಿ ಶನಿವಾರ ಶ್ರೀ ವಿಠ್ಠಲ ಮಂದಿರದಲ್ಲಿ ಸಾಯಂಕಾಲ ೭ ಗಂಟೆಯಿAದ ೭-೩೦ ಗಂಟೆಯವರೆಗೆ ಸರಾಗವಾಗಿ ಸಾಗಿ ಬರುತ್ತಲಿದ್ದು ಕಾರಣ ಭಕ್ತಾಧಿಗಳು ಪ್ರತಿ ಶನಿವಾರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಹನುಮಾನ ಕೃಪೆಗೆ ಪಾತ್ರರಾಗಬೇಕೆಂದು ವೇ.ವೆಂಕಟೇಶ ಗ್ರಾಂಪೊರೊಹಿತ ಅವರು ತಿಳಿಸಿದರು.
ಈ ಕಾರ್ಯಕ್ರಮದ ಮೊದಲು ಶ್ರೀ ವಿಠ್ಠಲ ಮಂದಿರದಲ್ಲಿ ವಿಠ್ಠಲ ರುಕುಮಾಯಿ ಮಹಾಮೂರ್ತಿಗಳಿಗೆ ಮಹಾಭಿಷೇಕ, ಬಿಲವಾರ್ಚನೆ, ಪುಷ್ಪಾರ್ಚನೆಯನ್ನು ಅರ್ಚಕರಾದ ದೀಪಕ ಜೋಶಿ ಅವರು ನೇರವೇರಿಸಿದರು.
ಈ ಸಮಯದಲ್ಲಿ ವೇ.ವೇಂಕಟೇಶ ಗ್ರಾಂಪೊರೊಹಿತ, ನಿಂಗೋಜಿ ಕುಲಕರ್ಣಿ, ಶಾಮ ಹಂಚಾಟೆ, ರಾಜಣ್ಣ ಸೊಂಡೂರ, ಬಾಬು ಹಂಚಾಟೆ, ಆನಂದ ಕುಲಕರ್ಣಿ, ಮಲ್ಲಿಕಾರ್ಜುನ ಹಿಪ್ಪರಗಿ, ದತ್ತಾ ಮಹೇಂದ್ರಕರ, ಅರುಣ ಕನಕಗಿರಿ, ಪ್ರಶಾಂತ ಜನಾದ್ರಿ, ಜೈಸಿಂಗ್ ಮೂಲಿಮನಿ, ಸುದೀರ ದೇಶಪಾಂಡೆ, ಪ್ರದೀಪ ಭುಸಾರೆ, ಪ್ರಮೋದ ಅಗರವಾಲಾ, ಶ್ರೀಮತಿ ರೇಣುಕಾ ಹಂಚಾಟೆ, ಸುಧಾ ನಿಡಗುಂದಿ, ಶೈಲಾ ಯಾಳಗಿ, ರಮಾ ತಾಳಪಲ್ಲೆ, ರಾಧಾ ಕನಕಗಿರಿ, ಭೋರಮ್ಮ ಕುಂಭಾರ, ದೀಪಲಕ್ಷಿö್ಮÃ ಮಹೇಂದ್ರಕರ, ಕವಿತಾ ಜನಾದ್ರಿ, ಮೊದಲಾದವರು ಉಪಸ್ಥಿತರಿದ್ದರು.