ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಅಧಿಕಾರಿಗಳು ಮಾಡಿ : ನಾಡಗೌಡ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ತಾಳಿಕೋಟೆ : ಅಧಿಕಾರಿಗಳು ಕಾರ್ಯನಿರ್ವಹಿಸುವಾಗ ಬದ್ದತೆಯಿಂದ ಕಾರ್ಯನಿರ್ವಹಿಸಬೇಕು ಜನರ ಮೂಲಬೂತ ಸಮಸ್ಯೆಗಳಿಗೆ ತುರ್ತುಗತಿಯಲ್ಲಿ ಸ್ಪಂದಿಸುವAತಹ ಕೆಲಸ ಮಾಡಬೇಕೆಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಹೇಳಿದರು.
ಶನಿವಾರರಂದು ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ವಿಜಯಪುರ, ತಾಲೂಕಾಡಳಿತ ತಾಲೂಕಾ ಪಂಚಾಯತ್ ತಾಳಿಕೋಟೆ, ಗ್ರಾಂ ಪಂಚಾಯತ್ ಕೊಣ್ಣೂರ ಇವರ ಸಹಯೋಗದಲ್ಲಿ ಏರ್ಪಡಿಸಲಾದ ಜನ ಸಂಪರ್ಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಈಗಾಗಲೇ ಕ್ಷೇತ್ರಕ್ಕೆ ಅವಶ್ಯವಿರುವ ಅನುದಾನವನ್ನು ಸರ್ಕಾರದಿಂದ ತರುವಂತಹ ಕೆಲಸ ಮಾಡುತ್ತಿದ್ದೇನೆ ರಸ್ತೆ ಅಭಿವೃದ್ದಿ, ಕುಡಿಯುವ ನೀರಿನ ಸಮಸ್ಯೆ, ಅಲ್ಲದೇ ನೀರಾವರಿ ಯೋಜನೆಗಳಿಗೂ ಸಹ ಅನುದಾನವನ್ನು ತಂದಿದ್ದೇನೆ ಎಲ್ಲ ಕಾರ್ಯಗಳು ಒಮ್ಮೇಲೆ ಮಾಡಲು ಆಗದಿದ್ದರೂ ಕೂಡಾ ಹಂತ ಹಂತವಾಗಿ ಜನರಿಗೆ ಅವಶ್ಯಕವಾಗಿರುವ ಎಲ್ಲ ಕಾರ್ಯಗಳನ್ನು ಮಾಡಲಿದ್ದೇನೆಂದರು.
ಇನ್ನೋರ್ವ ಅಸ್ಕಿ ಪೌಂಡೇಶನ್ ಅಧ್ಯಕ್ಷ ಕಾಂಗ್ರೇಸ್ ಮುಖಂಡ ಸಿ.ಬಿ.ಅಸ್ಕಿ(ಕೊಣ್ಣೂರ) ಅವರು ಮಾತನಾಡಿ ಸಿದ್ದೇಶ್ವರ ಮಹಾಸ್ವಾಮಿಗಳ ವಾಣಿಯ ದಾರಿಯಲ್ಲಿ ನಡೆಯುತ್ತಿರುವ ಶಾಸಕ ಅಪ್ಪಾಜಿ ನಾಡಗೌಡ ಅವರು ಮಾತು ಕಮ್ಮಿ ಕೆಲಸ ಜಾಸ್ತಿ ಎಂಬAತೆ ಕ್ಷೇತ್ರದ ಎಲ್ಲ ಗ್ರಾಮ ಪಟ್ಟಣಗಳಿಗೆ ಅನುದಾನವನ್ನು ಒದಗಿಸುವ ಕಾರ್ಯ ಮಾಡುತ್ತಾ ಸಾಗಿದ್ದಾರೆ ಈಗಾಗಲೇ ಮೂಕೀಹಾಳ-ಹಡಗಿನಾಳ- ತಾಳಿಕೋಟೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ೩ ಹಂತಗಳಲ್ಲಿ ೧೨.೫೦ ಕೋಟಿ ರೂ. ಬಿಡುಗಡೆಗೊಳಿಸಿ ಕೆಲಸ ಪ್ರಗತಿ ಹಂತದಲ್ಲಿದೆ ಇಂದೂ ಕೂಡಾ ಕೊಣ್ಣೂರ-ಹೂವಿನ ಹಿಪ್ಪರಗಿ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಅದರಂತೆ ಉಕ್ಕಲಿ-ಸಾಸನೂರ-ದಿಂಡಿವಾರ ರಸ್ತೆ ಕಾಮಗಾರಿಯು ೬ ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಅಲ್ಲದೇ ನೀರಾವರಿ ಯೋಜನೆಗಳಿಗೂ ಸಹ ಅನುದಾನವನ್ನು ಒದಗಿಸುವಂತಹ ಕೆಲಸವನ್ನು ಮಾಡಿದ್ದಾರೆ ಜನರ ಯಾವುದೇ ಕೆಲಸಗಳಿದ್ದರೂ ಶಾಸಕರು ಸ್ಪಂದಿಸುತ್ತಾ ಸಾಗಿದ್ದಾರೆ ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ನಡೆದಿದ್ದರೂ ಕೂಡಾ ಯಾವುದೇ ಪ್ರಚಾರವನ್ನು ಬಯಸಿಲ್ಲಾವೆಂದ ಅವರು ಮುಂದಿನ ದಿನಗಳಲ್ಲಿ ಈ ಮುದ್ದೇಬಿಹಾಳ ಕ್ಷೇತ್ರ ಮಾದರಿಯ ಕ್ಷೇತ್ರವಾಗಲಿದೆ ಎಂದರು.
ಈ ಸಭೆಯಲ್ಲಿ ಕೊಣ್ಣೂರ ಕ್ರಾಸ್‌ದಿಂದ ಗ್ರಾಮದವರೆಗೆ ರಸ್ತೆ ಅಗಲಿಕರಣದ ಜೊತೆಗೆ ಉತ್ತಮ ರಸ್ತೆ ನಿರ್ಮಾಣ, ಕೊಣ್ಣೂರ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಆಶ್ರಯ ಮನೆಗಳಿಗೆ ಜಿಪಿಎಸ್, ವಿಜಯಪುರ ಮಾರ್ಗದ ಕಡೆಗೆ ತೆರಳುವ ತಾಳಿಕೋಟೆ ಬಸ್ ಘಟಕದ ಕೆಲವು ಬಸ್‌ಗಳು ಕೊಣ್ಣೂರ ಕ್ರಾಸ್‌ಗೆ ಸ್ಟಾಪ್ ಆಗುತ್ತಿಲ್ಲಾ, ಕುಡಿಯುವ ನೀರು ಪೂರೈಕೆಯ ಟ್ಯಾಂಕ್ ನಿರ್ಮಾಣಕ್ಕೆ ಜಾಗೆ ನೀಡಿದ್ದೇವೆ ಆದರೆ ಟ್ಯಾಂಕ್ ತುಂಬಿದರೂ ನೀರು ಬಂದ್ ಆಗುತ್ತಿಲ್ಲಾ ಇದರಿಂದ ಜಮೀನು ಹಾಳಾಗುತ್ತಾ ಸಾಗಿದೆ, ಕೆಲವು ಜಮೀನುಗಳಲ್ಲಿ ಕೇನಾಲ್ ಮಾಡಲಾಗಿದೆ ಇಲ್ಲಿಯವರೆಗೂ ನೋಟೀಸು ಕೂಡಾ ನೀಡಿಲ್ಲಾ ಪರಿಹಾರವೂ ಕೂಡಾ ಸಿಕ್ಕಿಲ್ಲಾ, ವಿದ್ಯುತ್ ವಾಯರ್‌ಗಳು ಜೋತು ಬಿದ್ದಿವೆ ಅದನ್ನು ಸರಿಪಡಿಸಿಲ್ಲಾ, ಎಂಬ ಹಲವಾರು ದೂರುಗಳಿಗೆ ಶಾಸಕ ಸಿ.ಎಸ್.ನಾಡಗೌಡ ಅವರು ಸ್ಥಳದಲ್ಲಿಯೇ ಉಪಸ್ಥಿತರಿದ್ದ ಸಂಬAದಿಸಿದ ಅಧಿಕಾರಿಗಳಿಗೆ ವಾರದೊಳಗೆ ಸಮಸ್ಯೆ ಸರಿಪಡಿಸಲು ಸೂಚಿಸಿದರಲ್ಲದೇ ವಿಳಂಬತೆ ಕಂಡು ಬಂದರೆ ಕಠಿಣ ಕ್ರಮದ ಏಚ್ಚರಿಕೆಯನ್ನು ನೀಡಿದರು.
ಇದೇ ಸಮಯದಲ್ಲಿ ಕೊಣ್ಣೂರ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಮಾಡಲಾಗಿದೆ ಕೇವಲ ೨ ಇಂಚಿನ ಪೈಪುಗಳನ್ನು ಬಳೆಸಲಾಗಿದೆ ಇದರಿಂದ ಇಡೀ ಗ್ರಾಮದ ಜನರಿಗೆ ನೀರು ಸಿಗುವದಿಲ್ಲಾ ಎಂಬ ದೂರು ಬಂದಾಗ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿ ಹಿರೇಗೌಡರಿಗೆ ಶಾಸಕ ನಾಡಗೌಡ ಅವರು ತರಾಟೆಗೆ ತೆಗೆದುಕೊಂಡರಲ್ಲದೇ ಕಾಮಗಾರಿ ಮಾಡುವಾಗ ಲಕ್ಷ ವಹಿಸಬೇಕು ಈ ರೀತಿ ೨ ಇಂಚಿನ ಪೈಪುಗಳನ್ನು ಹಾಕಿದರೆ ನೀರು ಸರಬರಾಜು ಮಾಡಲು ಹೇಗೆ ಸಾದ್ಯವೆಂದ ಅವರು ಉಪಸ್ಥಿತ ಗ್ರಾಂ ಪಂ ಅಧಿಕಾರಿಗಳಿಂದ ಸದರಿ ಕಾಮಗಾರಿ ಹ್ಯಾಂಡೋರ ತೆಗೆದುಕೊಂಡ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೇ ಇನ್ನೂ ಹ್ಯಾಂಡೋರ್ ಪಡೆದಿಲ್ಲಾವೆಂದ ಮೇಲೆ ಗುತ್ತಿಗೆದಾರನ ಬಿಲ್ ತಡೆ ಹಿಡಿಯಲು ಸೂಚಿಸಿದರಲ್ಲದೇ ಸದರಿ ಗುತ್ತಿಗೆದಾರನ ಲೈಸನ್ಸ್ ಕಪ್ಪು ಪಟ್ಟಿಗೆ ಸೇರಿಸಲು ವರಧಿ ತಯಾರಿಸಿ ಮೇಲಾಧಿಕಾರಿಗೆ ಕಳುಹಿಸಿ ನನಗೆ ವರಧಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.
ಕೊಣ್ಣೂರ ಪ್ರಾಥಮಿಕ ಚಿಕೀತ್ಸಾ ಕೇಂದ್ರವು ಸದ್ಯ ರಾಜ್ಯದ ೧೫ ಪ್ರಾಥಮಿಕ ಚಿಕೀತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ ಸಮೂದಾಯ ಆರೋಗ್ಯ ಕೇಂದ್ರಗಳ ಪಟ್ಟಿಗೆ ಸೇರಿಸಲಾಗಿದೆ ಅದನ್ನು ಪೂರ್ಣಗತಿಯಲ್ಲಿ ಮಾಡಿಕೊಡಲು ಎಲ್ಲ ಜನರ ಬೇಡಿಕೆಯಾಗಿದೆ ಈ ಕುರಿತು ಸರ್ಕಾರದ ಮಟ್ಟದಲ್ಲಿ ಮಂತ್ರಿಗಳೊAದಿಗೆ ಚರ್ಚಿಸಿ ಸಮೂದಾಯ ಆರೋಗ್ಯ ಕೇಂದ್ರದಡಿಗೆ ಸೇರಿಸಲು ಶಾಸಕರಿಗೆ ವೈಧ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಅವರು ಮನವಿ ಮಾಡಿದರಲ್ಲದೇ ಈ ಕಾರ್ಯ ಕ್ಷಮತೆಯಲ್ಲಿ ಶಾಸಕರ ಕಾರ್ಯವನ್ನು ಶ್ಲಾಘಿಸಿ ಶಾಸಕರಿಗೆ ಚಿಕೀತ್ಸಾ ಕೇಂದ್ರದ ಪರವಾಗಿ ಸನ್ಮಾನಿಸಿ ಗೌರವಿಸಿದರು. ಅದರಂತೆ ಕೊಣ್ಣೂರ ಗ್ರಾಮವು ತಾಲೂಕಿನಲ್ಲಿಯೇ ದೊಡ್ಡ ಗ್ರಾಮವಾಗಿದೆ ಈ ಗ್ರಾಮವನ್ನು ಹೋಬಳಿಯನ್ನಾಗಿ ಮಾಡುವದರ ಜೊತೆಗೆ ರೈತರಿಗೆ ಬೀಜ ಗೊಬ್ಬರ ಅಲ್ಲದೇ ಎಲ್ಲರೀತಿಯ ಅನುಕೂಲ ಕಲ್ಪಿಸಿಕೊಡಬೇಕೆಂದು ಗ್ರಾಮದ ಮುಖಂಡರಾದ ತಾಳಿಕೋಟಿ ಅವರು ಮನವಿ ಮಾಡಿದರು. ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕ ಸಿ.ಎಸ್.ನಾಡಗೌಡ ಅವರು ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರಲ್ಲದೇ ಇನ್ನೂ ಕೇಲವು ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಸಮಸ್ಯೆಗಳನ್ನು ಹೋಗಲಾಡಿಸುವದಾಗಿ ಬರವಸೆ ನೀಡಿದರು. ಈ ಜನ ಸಂಪರ್ಕ ಸಭೆಯಲ್ಲಿ ತಾಲೂಕಾ ತಹಶಿಲ್ದಾರ ಶ್ರೀಮತಿ ವಿನಯಾ ಹೂಗಾರ, ತಾಪಂ ಇಓ ನಿಂಗಪ್ಪ ಮಸಳಿ, ಬಿಇಓ ಬಿ.ಎಸ್.ಸಾವಳಗಿ, ಕೃಷಿ ಇಲಾಖೆಯ ಬಾವಿಕಟ್ಟಿ, ಎಂ.ಎA.ಬೆಳಗಲ್ಲ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ಸತೀಶ ತಿವಾರಿ, ಒಳಗೊಂಡು ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.