ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಜಿಲ್ಲಾ ಪ್ರವಾಸ

Jun 25, 2025 - 04:05
Jun 25, 2025 - 04:06
 0
ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಜಿಲ್ಲಾ ಪ್ರವಾಸ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರವರು ದಿ.26 ಗುರುವಾರದಿಂದ ದಿ.29 ರವಿವಾರದವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

 

ದಿ.26 ಗುರುವಾರ ಸಾ.5 ರಿಂದ 7ಗಂ. ವರೆಗೆ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸುವರು. ರಾ.7ಗಂ. ತೊರವಿ (ಕೆಸರಾಳ) ಎಲ್.ಟಿ-3 ರಲ್ಲಿ ನಡೆಯುವ ಕಾಳಿಕಾದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ದಿ.27 ಶುಕ್ರವಾರ ಬೆ.10ಗಂ. ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ, ಬೆ.10.30ಗಂ. ವಿಜಯಪುರ ಐತಿಹಾಸಿಕ ಸ್ಥಳಗಳ ವೀಕ್ಷಣೆಗೆ ವೀಕ್ಷಣಾ ರಥ (ಟೂರಿಸ್ಟ್ ಸರ್ಕ್ಯೂಟ್ ಬಸ್) ಚಾಲನೆ ನೀಡಲಿದ್ದಾರೆ. ಬೆ.11ಗಂ. ರೇಡಿಯೋ ಕೇಂದ್ರದ ಹತ್ತಿರ ನವೀಕರಣಗೊಂಡ ಪಾರಂಪರಿಕ ಗ್ರಂಥಾಲಯ ಕಟ್ಟಡ ಉದ್ಘಾಟಿಸಲಿದ್ದಾರೆ. ಬೆ.11.30ಗಂ. ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಂವಿಧಾನ ಪೀಠಿಕೆ ಉದ್ಘಾಟಿಸಲಿದ್ದಾರೆ. ಮ.12ಗಂ. ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಜರಗುವ ಸರ್ವೋತ್ತಮ ಸೇವಾ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಸಂ.4ಗಂ. ಗ್ರಾಮೀಣ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಎಂ.ಎಸ್.ಐ.ಎಲ್ ಸಿ.ಎಸ್.ಆರ್ ಅನುದಾನದಡಿ ರೂ.20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಭಾಭವನ ಕಟ್ಟಡ ಉದ್ಘಾಟಿಸಲಿದ್ದಾರೆ.

ದಿ.28 ಶನಿವಾರ ತಿಕೋಟಾ ಪೊಲೀಸ್ ಸ್ಟೇಷನ್ ಹಿಂಭಾಗ ಬೆ.11ಗಂ. ಅಂಗನವಾಡಿ ಕಟ್ಟಡ, ಬೆ.11.30ಗಂ. ಕುಡಿಯುವ ನೀರಿನ ಘಟಕ ಹಾಗೂ ಮ.12ಗಂ. ರೈತ ಸಂಪರ್ಕ ಕೇಂದ್ರ ಗೋದಾಮು ಉದ್ಘಾಟಿಸಿ ನಂತರ ಮ12.30ಗಂ. ತಿಕೋಟಾ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಲಿದ್ದಾರೆ. ಸಂ.4ಗಂ. ಬಬಲೇಶ್ವರ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸುವರು. ಸಂ.5ಗಂ. ಸಂಗಾಪುರ ಎಸ್.ಎಚ್ ಸಣ್ಣನೀರಾವರಿ ಇಲಾಖೆಯಿಂದ ರೂ.2.20ಕೋಟಿ ವೆಚ್ಚದಲ್ಲಿ ಬಾಂದಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಸಂ. ಕಂಬಾಗಿಯಲ್ಲಿ ಲೋಕೋಪಯೋಗಿ ಇಲಾಖೆ ರೂ.10ಕೋಟಿ ವೆಚ್ಚದಲ್ಲಿ ಶಿರಬೂರ-ಹಲಗಣಿ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲಿದ್ದಾರೆ.

ದಿ.29 ರವಿವಾರ ಬೆ. 10.30ಗಂ. ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಬಸವರಾಜ ಯಲಿಗಾರ ಅವರು ರಚಿಸಿದ ಮೈ ಮಿ ಈಸ್ ದಿ (ನನ್ನೊಳಗಿನ ನಾನು ನೀನೇ) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.