ಭೀಮಾ ಸೆಂಟ್ರಲ್ ಯೂನಿವರ್ಸಲ್ ಶಾಲೆಯಲ್ಲಿ ಯೋಗಾ ದಿನ ಆಚರಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ:ಯೋಗವನ್ನು ಸುಮಾರು ಆರು ಸಾವಿರ ವರ್ಷಗಳ ಹಿಂದೆ ಪಂತಜಲಿ ಋಷಿಗಳು ಪರಿಚಯ ಮಾಡಿಕೊಟ್ಟರು. ಯೋಗದಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢಗೊಳ್ಳುವುದರ ಜೊತೆಗೆ ಸುಂದರ ಬದುಕು ಕಟ್ಟಿಕೊಳ್ಳಬಹುವುದು ಎಂದು ಶಾಲೆಯ ವಿದ್ಯಾರ್ಥಿನಿ ಭಕ್ತಿ ಭುಮನ್ನವರ ಹೇಳಿದರು.
ಸಿಂದಗಿ ಪಟ್ಟಣದ ಹೊರವಲಯದಲ್ಲಿರುವ ಭೀಮಾ ಸೆಂಟ್ರಲ್ ಉನಿವರ್ಸಲ್ ಶಾಲೆಯಲ್ಲಿ ಹಮ್ಮಿಕೊಂಡ ಅಂತಾರಾಷ್ಟಿಯ ಯೋಗಾ ದಿನವನ್ನು ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವ ಅವರು, ಯೋಗವು ಎಲ್ಲ ಸಮಸ್ಯೆಗಳಿಗೆ ಪರಿಹಾರ. ಮಾನಸಿಕ ಮತ್ತು ಶಾರೀರಿಕ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಆದ್ದರಿಂದ ಯೋಗವನ್ನು ದೈನಂದಿನ ಚಟುವಟಿಕೆಯಾಗಿ ಮಾಡಿಕೊಳ್ಳುವುದು ರೂಢಿಯಾಗಬೇಕು ಎಂದರು.
ಈ ವೇಳೆ ಪ್ರಾಚಾರ್ಯೆ ಶಾಹೀನ್ ಶೇಖ ಮಾತನಾಡಿ, ಯೋಗದಿಂದ ಏಕಾಗ್ರತೆ ಹೆಚ್ಚುವುದರ ಜೊತೆಗೆ ಓದುವ ಕಡೆ ಹೆಚ್ಚಿನ ಗಮನ ಹರಿಸಲು ಸಹಕಾರವಾಗುವುದು ಎಂದರು.
ಇದೇ ಸಂದರ್ಭದಲ್ಲಿ ಯೋಗದ ಆಸನಗಳನ್ನು ಪ್ರದರ್ಶನ ಮಾಡುವುದರ ಮೂಲಕ ಗಮನ ಸೆಳೆದರು. ದೈಹಿಕ ಶೀಕ್ಷಕರಿಂದ ಶಾಲಾ ವಿದ್ಯಾರ್ಥಿಗಳಿಗೆ ಯೋಗದ ಆಸನಗಳಾದ ಸೂರ್ಯ ನಮಸ್ಕಾರ, ತ್ರಿಕೋನಾಸನ, ವೀರಭದ್ರಾಸನ, ಅರ್ಧಚಕ್ರಾಸನ, ವೃಕ್ಷಾಸನ, ದಂಡಾಸನ, ಅರ್ಥನೌಕಾಸನ, ಭದ್ರಾಸನ, ಪಶ್ಚಿಮೋತ್ಥಾಸಾನ, ಉಷ್ಟ್ರಾಸನ ಸೇರಿದಂತೆ ಅನೇಕ ಆಸನಗಳನ್ನು ವಿದ್ಯಾರ್ಥಿಗಳು ಮಾಡಿದರು. ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.