ಯೋಗಾಸನ ಮಾಡುವುದರಿಂದ ಮಾನಸಿಕ ಸಾಮರ್ಥ್ಯ ವೃದ್ಧಿ : ಆರ್.ಡಿ.ಕುಲಕರ್ಣಿ

Jun 22, 2025 - 23:14
 0
ಯೋಗಾಸನ ಮಾಡುವುದರಿಂದ ಮಾನಸಿಕ ಸಾಮರ್ಥ್ಯ ವೃದ್ಧಿ : ಆರ್.ಡಿ.ಕುಲಕರ್ಣಿ
ಸಿಂದಗಿ ಪಟ್ಟಣದ ಸಮರ್ಥ ವಿದ್ಯಾವಿಕಾಸ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೇರಣಾ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೧೧ನೇ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಸಿಂದಗಿ: ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ. ಮತ್ತು ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಹೇಳಿದರು.


 ಸಿಂದಗಿ ಪಟ್ಟಣದ ಸಮರ್ಥ ವಿದ್ಯಾವಿಕಾಸ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೇರಣಾ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ೧೧ನೇ ಅಂತಾರಾಷ್ಟಿಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಣಿತರ ಮಾರ್ಗದರ್ಶನದಲ್ಲಿ ನಿತ್ಯವೂ ಯೋಗಾಸನ ಮಾಡುವುದರಿಂದ ಮನಸ್ಸು ಮತ್ತು ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


    ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ, ಪ್ರೌಢಶಾಲಾ ಮುಖ್ಯಗುರುಮಾತೆ ಎಸ್.ಆಯ್.ಅಸ್ಕಿ, ಸಹಶಿಕ್ಷಕಿ ಎಮ್.ಜಿ.ಧ್ಯಾಮಗೊಂಡ ಮಾತನಾಡಿದರು. ಮಕ್ಕಳಿಗೆ ಸೂರ್ಯ ನಮಸ್ಕಾರ, ವೃಕ್ಷಾಸನ, ತಾಡಾಸನ, ತ್ರಿಕೋನಾಸನ, ಬಾಲಾಸನ, ಪಾರ್ಶ್ವ ಕೋನಾಸನ, ಅನುಲೋಮ, ವಿಲೋಮದ ಆಸನಗಳನ್ನು ಮಾಡಿ ಮಕ್ಕಳು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಯೋಗ ತರಬೇತಿಯನ್ನು ಸಹಶಿಕ್ಷಕಿ ಸುಜಾತಾ ನಾಯಕ ಅವರ ನೇತೃತ್ವದ ತಂಡದಲ್ಲಿ ೪ನೇ ತರಗತಿ ವಿದ್ಯಾರ್ಥಿಗಳಾದ ಶ್ರೀಗೌರಿ ಬಿರಾದಾರ, ಶಶಾಂಕ ಡಂಬಳ, ವೈಷ್ಣವಿ ರಾಠೋಡ, ಸಿದ್ದಾರ್ಥ ನಿಂಬರಗಿ ಯೋಗ ಪಟುಗಳ ತಂಡ ತರಬೇತಿ ನೀಡಿತು. 


ಈ ವೇಳೆ ಸತೀಶ ಕುಲಕರ್ಣಿ, ಕಿರಣ ಕುಲಕರ್ಣಿ, ಅಲ್ತಾಪ ತಾಂಬೋಳಿ, ಅಕ್ಷಯ ಯಲಗಟ್ಟಿ, ಶ್ರೀಕಾಂತ ಹೂನಳ್ಳಿ, ಯಲ್ಲಾಲಿಂಗ ಹೊಸೂರ, ಎಸ್.ಬಿ.ಕುಂಟೋಜಿ, ಎಮ್.ಎಮ್.ಜೂಮನಾಳ, ಬಿ.ಎಸ್. ಪಾಟೀಲ, ಎಸ್‌ವ್ಹಿ. ಕಡಣಿ, ವಿ.ಎ.ನಾಯಕ, ಎಸ್.ಡಿ. ನಾಯಕ, ವಿಜಯಲಕ್ಷಿö್ಮÃ ಅಲಾಳಮಠ, ಎನ್.ಜಿ. ಬಳಗಾನೂರ, ವಿ.ಕೆ. ಚವ್ಹಾಣ, ಆರ್.ಎಮ್.ಫಕೀರಪುರ, ಆರ್.ಎಸ್.ಶಿವಸಿಂಪಿಗೇರ, ಎಸ್.ಎಸ್.ಪಾಟೀಲ, ಲಕ್ಷಿö್ಮÃ ಸೇರದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.