೧೯ನೇ ಸಾಂಖ್ಯಿಕ ದಿನ ಆಚರಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಸಾಂಖ್ಯಿಕ ತಜ್ಞ ಪ್ರೊ: ಪಿ.ಸಿ.ಮಹಾಲನೋಬಿಸ್ ಜನ್ಮ ದಿನದ ಅಂಗವಾಗಿ ೭೫ ವರ್ಷಗಳ ರಾಷ್ಟ್ರೀಯ ಮಾದರಿ ಸಮೀಕ್ಷೆ ಎಂಬ ಘೋಷವಾಕ್ಯದೊಂದಿಗೆ ೧೯ನೇ ಸಾಂಖ್ಯಿಕ ದಿನಾಚರಣೆ ಕಾಯಕ್ರಮ ವನ್ನು ಜು.೧೧ ರಂದು ನಗರದ ಕರ್ನಾಟಕ ರಾಜ್ಯ ನೌಕರರ ಸಂಘದ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಪ್ರಭಾರ ಮುಖ್ಯ ಯೋಜನಾಧಿಕಾರಿ ಎ.ಬಿ.ಅಲ್ಲಾಪುರ ಅವರು ಮಾತನಾಡಿ, ಯಾವುದೇ ಯೋಜನೆಗಳನ್ನು ರೂಪಿಸಬೇಕಾದಲ್ಲಿ ಅಂಕಿ-ಅಂಶಗಳ ಮಹತ್ವದ್ದಾಗಿರುತ್ತದೆ. ಸಮೀಕ್ಷೆ ಕಾರ್ಯದಿಂದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಕಾರಿ ಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸಿ.ಬಿ. ಕುಂಬಾರ, ವಿ.ಬಿ.ದರಬಾರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಗಿರೀಶ ಮಣ್ಣೂರ, ನಿವೃತ್ತ ಮುಖ್ಯ ಯೋಜನಾಧಿಕಾರಿ ಎನ್.ಕೆ.ಗೋಠೆ, ಸಂಖ್ಯಾ ಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಜಯಶ್ರೀ ಹೊರಕೇರಿ, ಉಪನ್ಯಾಸಕರಾಗಿ ಆನಂದ ಕುಲಕರ್ಣಿ ಅವರು ಭಾಗವಹಿಸಿ ಮಾತನಾಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಅಲ್ತಾಫಅಹ್ಮದ ಮನಿಯಾರ ಪ್ರಾಸ್ತಾವಿಕವಾಗಿ ಪೊ. ಪಿ. ಸಿ. ಮಹಾಲ್‌ನೋಬಿಸ್ ಅವರು ಸಾಂಖ್ಯಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಕುರಿತು ಮಾತನಾಡಿದರು.