ಮಾರಕಾಸ್ತ್ರ ನಟನ ಮತ್ತೊಂದು ಸಿನಿಮಾ RR 77

ಚಿತ್ರದ ಮುಖ್ಯ ಭೂಮಿಕೆಯಲ್ಲಿ ಡಾ. ರಾಜ್‌ವೀರ್ ಅಭಿನಯಿಸಲಿದ್ದಾರೆ. ಚಿತ್ರದ ಶೀರ್ಷಿಕೆಯೊಂದಿಗೆ ಎಲ್ಲರ ಗಮನವನ್ನು ಸೆಳೆಯಲು ಯಾವ ಅನುಮಾನವೂ ಇಲ್ಲ ಎಂದು ಚಿತ್ರದ ನಿರ್ದೇಶಕ ಮಂಜು ಕವಿ ತಿಳಿಸಿದರು.

Jun 23, 2025 - 10:37
Jun 23, 2025 - 12:04
 0
ಮಾರಕಾಸ್ತ್ರ ನಟನ ಮತ್ತೊಂದು ಸಿನಿಮಾ RR 77
RR77 ಚಿತ್ರದಲ್ಲಿ ನಾಯಕ ನಟನಾಗಿ ಡಾ. ನಟರಾಜ ಅಭಿನಯಿಸುತ್ತಿದ್ದಾರೆ.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಡಾ. ನಟರಾಜ್ ಎನ್ನುವ ವ್ಯಕ್ತಿ ಈ ಹಿಂದೆ ಮಾರಕಾಸ್ತ್ರ ಎನ್ನುವ ಘನಘೋರ ಸಿನಿಮಾವೊಂದನ್ನು ನಿರ್ಮಿಸಿದ್ದರು. ನಿರ್ಮಾಣದ ಜೊತೆಗೆ ನಟನೆ, ನೃತ್ಯ ಎಲ್ಲವನ್ನೂ ಮಾಡಿದ್ದರು. ಹಚ್ಚೂ ಕಡಿಮೆ ನಿವೃತ್ತಿಯ ವಯಸ್ಸಿನ ನಟರಾಜ್ ಈಗ ಪೂರ್ಣ ಪ್ರಮಾಣಷ ಹೀರೋ ಆಗುವ ಪ್ರಯತ್ನ ಮಾಡುತ್ತಿದ್ದಾರೆ. ಬಿಬಿಎಂಪಿಯಲ್ಲಿವರು ಎಂಜಿನಿಯರೋ ಏನೋ ಆಗಿದ್ದಾರಂತೆ. ಇವರೇ ನಿರ್ಮಿಸಿದ್ದ ಮೊದಲ ಸಿನಿಮಾ ಮಾರಕಾಸ್ತ್ರದಲ್ಲಿ ಕೆಲಸ ಮಾಡಿದ ಅನೇಕರು ತಮ್ಮತಮ್ಮ ಲೈಫ್ ಸೆಟಲ್ ಮಾಡಿಕೊಂಡರು. ಗುರುಮೂರ್ತಿ ಸುನಾಮಿ ಅನ್ನೋ  ಹುಡುಗ ಈ ಸಿನಿಮಾದ ನಿರ್ದೇಶಕನಾಗಿದ್ದ. ಜೊತೆಗೆ ಧನು ಮಾಸ್ಟರು ಕ್ರಿಯೇಟೀವ್ ಹೆಡ್ ಆಗಿದ್ದರು. ನೂರಾರು ಜನ ಕಲಾವಿದರನ್ನಿಟ್ಟುಕೊಂಡು, ವರ್ಷಗಟ್ಟಲೆ ಶೂಟಿಂಗು ನಡೆಸಿದ್ದ ನಟರಾಜ್ ಏಳೆಂಟು ಕೋಟಿ ಹಣ ವ್ಯಯಿಸಿದ್ದರು. ಹುಂಜ ಸ್ವಾತಿ ಸೊಂಟ ಹಿಡಿದು ಡ್ಯಾನ್ಸು ಮಾಡಿದ್ದೇ ಲಾಭ! ಉಳಿದಂತೆ ನಟರಾಜ್ ಅವರಿಗೆ ಆ ಚಿತ್ರದಿಂದ ಯಾವುದೇ ವರಮಾನ ಗಿಟ್ಟಿರಲಿಲ್ಲ!!

ಈಗ ಇದೇ ನಟರಾಜು ಡಾ. ರಾಜ್ ವೀರ್ ಎನ್ನುವ ಹೊಸ ಹೆಸರನ್ನಿಟ್ಟುಕೊಂಡು ಮತ್ತೆ ಸಿನಿಮಾ ಅಖಾಡಕ್ಕೆ ಕಾಲಿಟ್ಟಿದ್ದಾರೆ. RR 77 ಎನ್ನುವ ಹೆಸರಿನ ಚಿತ್ರಕ್ಕಿವರು ಹೀರೋ ಆಗಿದ್ದಾರೆ. ಕನ್ನಡ ಸಿನಿಮಾಗಳನ್ನು ಜನ ಥೇಟರಿಗೆ ಬಂದು ನೋಡ್ತಿಲ್ಲ ಅಂತಾ ಇಡೀ ಉದ್ಯಮ ಕಣ್ಣೀರಿಡುತ್ತಿದೆ. ಚಿತ್ರರಂಗ ಯಾವೊಬ್ಬರ ಸ್ವತ್ತಲ್ಲ. ಇಲ್ಲಿ ಯಾರು, ಯಾವಾಗ ಬೇಕಾದರೂ ಬಂದು ಸಾಧಿಸಬಹುದು. ಅವರವರಿಗೊಪ್ಪುವ ಪಾತ್ರ ಆಯ್ಕೆ ಮಾಡಿಕೊಂಡು ನಟಿಸಿದರೆ ಯಾರ ತಕರಾರೂ ಇಲ್ಲ. ತಿಥಿ ಎನ್ನುವ ನೆಲದ ಘಮಲಿನ ಸಿನಿಮಾದಲ್ಲಿ ನಟಿಸಿ ಎಂಭತ್ತು ದಾಟಿದ್ದ ಇಬ್ಬರು ನಿಜಕ್ಕೂ ಹೀರೋಗಳೆನಿಸಿಕೊಂಡಿದ್ದರು.  ಪ್ರಯತ್ನ, ಶ್ರಮಗಳೆಲ್ಲಾ ನೆಟ್ಟಗಿದ್ದರೆ ಅದರ ಪ್ರತಿಫಲವೂ ಉತ್ತಮವಾಗೇ ಇರುತ್ತದೆ. ಆದರೆ, ಎಷ್ಟೋ ಸಲ ಸಿನಿಮಾ ಇಂಡಸ್ಟ್ರಿಗೆ ಬರುವವರ ಅಥವಾ ಕರೆತರುವವರ ಉದ್ದೇಶವೇ ಸರಿ ಇರೋದಿಲ್ಲ. ಆದರೆ, ಬಹುಮುಖ ಪ್ರತಿಭೆಯ ನಿರ್ದೇಶಕ ಮಂಜು ಕವಿ ಅಂಥವರಲ್ಲ. ಅರವತ್ತಲ್ಲ, ತೊಂಬತ್ತು ವರ್ಷದ ಹಣ್ಣಣ್ಣು ಮುದುಕನನ್ನೂ ಹೀರೋ ಮಾಡಬಲ್ಲ ಟ್ಯಾಲೆಂಟ್‌ ಇವರಲ್ಲಿದೆ.

ಹೀಗೇ ತಲೆ ನೆರೆತಮೇಲೆ ಹೀರೋ ಆದ ವೃದ್ದ ಜೀವವೊಂದು ಇತ್ತೀಚೆಗೆ ತನ್ನ ಸಿನಿಮಾದ ಹಂಡ್ರೆಡ್ ಡೇಸ್ ಕಾರ್ಯಕ್ರಮ ಮಾಡಿತ್ತು. ಈ ಚಿತ್ರವನ್ನು ನೋಡಲು ಯಾವ್ಯಾವ ಥೇಟರುಗಳ ಮುಂದೆ ಜನ ಕ್ಯೂ ನಿಂತಿದ್ದರೋ ಗೊತ್ತಿಲ್ಲ. ಆದರೆ ಆವಯ್ಯ 'ಕೆ ಜಿ ಎಫ್ ಮತ್ತು ಕಾಂತಾರದ ನಡುವಿನ ಗೆಲುವು ನಮ್ಮದು' ಅಂತೆಲ್ಲಾ ಮಾತಾಡಿ ಬಾಯಿತೀಟೆ ತೀರಿಸಿಕೊಂಡಿತ್ತು. ಇವರ ಮಾತನ್ನು ಯೂಟ್ಯೂಬಲ್ಲಿ ನೋಡಿದವರೆಲ್ಲಾ ನಗಬಾರದ ಜಾಗದಲ್ಲಿ ನಕ್ಕು ಸುಮ್ಮನಾಗಿದ್ದಾರೆ. ಕಾಸು ಜಾಸ್ತಿ ಇದ್ದರೆ, ಗುಣಮಟ್ಟದ ಸಿನಿಮಾಮೇಲೆ ಇನ್ವೆಸ್ಟ್‌ ಮಾಡಬಹುದಿತ್ತು. ಅದು ಬಿಟ್ಟು ನಾನೇ ಹೀರೋ ಆಗ್ತೀನಿ ಅಂತಾ ಹೊರಟವರಿಗೆ ಏನು ಹೇಳಬೇಕೋ ಗೊತ್ತಿಲ್ಲ. ಇಂಥವರಿಂದ ಚಿತ್ರರಂಗಕ್ಕೆ ಲವಲೇಶದ ಲಾಭವೂ ಇಲ್ಲ. ಬದಲಿಗೆ ಲುಕ್ಸಾನೇ ಹೆಚ್ಚು. 

ಈಗಾಗಲೇ ಮಾರಕಾಸ್ತ್ರದಲ್ಲಿ ನಟರಾಜ್‌ ಅವರ ಜೇಬನ್ನು ಸಿಕ್ಕಸಿಕ್ಕವರೆಲ್ಲಾ ಸಿಗಿದುಹಾಕಿದ್ದಾರೆ. ನಟರಾಜ್‌ ಅಲಿಯಾಸ್‌ ಡಾ. ರಾಜ್‌ ವೀರ್‌ ಈ ಸಲವಾದರೂ ಒಂಚೂರು ಹುಷಾರಾಗಿರಲಿ.

-ಶಿವು ಅರಿಸಿನಗೆರೆ 

ಡಿಪಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಡಿಪಿ ವೆಂಕಟೇಶ್ ನಿರ್ಮಾಣದ ಚಿತ್ರ RR77


 ಇನ್ನು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಡಾ. ರಾಜ್‌ವೀರ್ ಅಭಿನಯಿಸಲಿದ್ದಾರೆ  ಚಿತ್ರದ ಶೀರ್ಷಿಕೆಯೊಂದಿಗೆ ಎಲ್ಲರ ಗಮನವನ್ನು ಸೆಳೆಯಲು ಯಾವ ಅನುಮಾನವೂ ಇಲ್ಲ ಎಂದು ಚಿತ್ರದ ನಿರ್ದೇಶಕ ಮಂಜು ಕವಿ ತಿಳಿಸಿದರು.

ಸಂಪೂರ್ಣ ಕಥೆಯನ್ನು ಕೇಳಿ ಡಿಪಿ ವೆಂಕಟೇಶ್ ರವರು ಕಥೆ ತುಂಬ ಮನಸ್ಸಿಗೆ ಹತ್ತಿರವಾಗಿದೆ ಇಂತಹ ಕಥೆಗಾಗಿ ಕಾಯುತ್ತಿದ್ದೆ ಕರ್ನಾಟಕದ ಜನತೆಗೆ ನಮ್ಮ ಸಿನಿಮಾ ಕೊಡುಗೆಯಾಗಲಿ ಎಂದು ತಿಳಿಸಿ ಬಂಡವಾಳ ಹೂಡಲಿದ್ದಾರೆ.

ಇನ್ನು ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲರ ಗಮನ ಸೆಳೆಯುತ್ತದೆ ಎಂದು ಮಂಜು ಕವಿ ತಿಳಿಸಿದರು.

ನಿರ್ದೇಶನ ತಂಡದಲ್ಲಿ ಎಸ್ ಜೆ ಸಂಜಯ್ ದಯಾ ಗಿರೀಶ್ ಸಾಕಿ ಸಂಗೀತ ಶೆಟ್ಟಿ ಕಾರ್ಯನಿರ್ವಹಿಸಿದ್ದಾರೆ ಇನ್ನು ಛಾಯಾಗ್ರಹಣ ರಾಜಕಡುರ್ ಇನ್ನು ಚಿತ್ರದಲ್ಲಿ ಎನ್ ಟಿ ರಾಮಸ್ವಾಮಿಗೌಡ ತುಷಾರ್ ವಿನೋದ್ ಸನತ್ ಜಗದೀಶ್ ಕೊಪ್ಪ ಪವಿತ್ರ ಗೊಬ್ಬರಗಾಲ ಚಂದ್ರಪ್ರಭ ವಿಕ್ಟರಿ ಸಿಲ್ಲಿ ಲಲ್ಲಿ ಚಿದಾನಂದ ಇನ್ನು  ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಧರಣಿ ಹಾಗೂ ನಿಕಿತ ಸ್ವಾಮಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಚಿತ್ರಕ್ಕೆ ನಾಲ್ಕು ಹಾಡುಗಳು ಮಂಜು ಕವಿ ರಚಿಸಿ , ರಾಗ ಸಂಯೋಜನೆ ಮಾಡಿದ್ದಾರೆ ನಾಲ್ಕು ಹಾಡುಗಳಿಗೆ ಉತ್ತಮವಾದ ವಾದ್ಯ ಸಂಯೋಜನೆ ವಿಜಯ ಹರಿತ್ಸ. ವಿನು ಮನಸ್ಸು ನೀಡಿದ್ದಾರೆ ಚಿತ್ರಕಥೆಗೆ  ಸೂಕ್ತವಾದ ಕಲಾವಿದ  ಡಾ. ರಾಜ್ ವೀರ್ ಎಂದು ಮಂಜು ಕವಿ ಆಯ್ಕೆ ಮಾಡಿಕೊಂಡಿದ್ದಾರೆ.

ಸದ್ಯದಲ್ಲೇ ಚಿತ್ರೀಕರಣ ಶುರು ಮಾಡಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ ಚಿತ್ರಕ್ಕೆ ನೃತ್ಯ ಸಂಯೋಜನೆ  ಜಗ್ಗು ಅವರು ಕಾರ್ಯನಿರ್ವಹಿಸಿದ್ದಾರೆ ಇನ್ನು ಚಿತ್ರದ ಮೊದಲನೇ ಪೋಸ್ಟರ್ ಲುಕ್ಕನ್ನು ರಂಭಾಪುರಿ ಶ್ರೀಗಳು ಬಿಡುಗಡೆ ಮಾಡಿ  ಡಾ. ರಾಜ್ ವೀರ್ ರವರ ಮೊದಲನೆ ಲುಕ್ಕು ಬಹಳ ಸುಂದರವಾಗಿ ಕಾಣುತ್ತದೆ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿ RR77 ಚಿತ್ರ ತಂಡಕ್ಕೆ ಶುಭ ಹಾರೈಸಿದರು.

|| Aparadhake Savalu || ಅಪರಾಧಕ್ಕೆಸವಾಲು || 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.