ಬಸವೇಶ್ವರ ಪ್ರಥಮ ಮಹಾರಥೋತ್ಸವಕ್ಕೆ ಗವಿಸಿದ್ದೇಶ್ವರ ಶ್ರೀ ಚಾಲನೆ

Jun 20, 2025 - 23:13
 0
ಬಸವೇಶ್ವರ ಪ್ರಥಮ ಮಹಾರಥೋತ್ಸವಕ್ಕೆ ಗವಿಸಿದ್ದೇಶ್ವರ ಶ್ರೀ ಚಾಲನೆ

ಮುದ್ದೇಬಿಹಾಳ :  ತಾಲೂಕಿನ ಕುಂಟೋಜಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಪ್ರಥಮ ಮಹಾರಥೋತ್ಸವಕ್ಕೆ ಚಾಲನೆ ನೀಡಲು ಕೊಪ್ಪಳ್ಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ತಿಳಿಸಿದರು.        

ಕೊಪ್ಪಳಕ್ಕೆ ಶುಕ್ರವಾರ ಕಮೀಟಿ ಪದಾಧಿಕಾರಿಗಳು, ಗ್ರಾಮದ ಹಿರಿಯರೊಂದಿಗೆ ಪೂಜ್ಯರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ದೂರವಾಣಿಯಲ್ಲಿ ಈ ಮಾಹಿತಿ ನೀಡಿದರು.                  

 ಕುಂಟೋಜಿ ಬಸವೇಶ್ವರ ಪ್ರಥಮ ಮಹಾರಥೋತ್ಸವ ಆಗಷ್ಟ ೧೭ ರಂದು ಕಡೆಯ ಸೋಮುವಾರ ಜರುಗಲಿದೆ. ಜಾತ್ರಾಮಹೋತ್ಸವ ಸಮಾರಂಭ ಹಾಗೂ ರಥೋತ್ಸವಕ್ಕೆ ಚಾಲನೆ ನೀಡಲು ಪೂಜ್ಯರನ್ನು ಕೋರಿದಾಗ ಅವರು ಬರುವುದಾಗಿ ತಿಳಿಸಿದರು ಎಂದು ಹೇಳಿದರು. ಶ್ರೀಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ದೇವಸ್ಥಾನ ಕಮೀಟಿಯ ಗೌರವ ಅಧ್ಯಕ್ಷ  ನಾಗಲಿಂಗಯ್ಯ ಮಠ, ಉಪಾಧ್ಯಕ್ಷ ಆನಂದ ಗಸ್ತಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಾಟೇಕಾರ, ರಾಮಣ್ಣ ಹುಲಗಣ್ಣಿ, ಬಸಲಿಂಗಪ್ಪ ಬಿರಾದಾರ, ಬಸವರಾಜ ಹುಲಗಣ್ಣಿ, ಮಲ್ಲಿಕಾರ್ಜುನ ಹುಲಬೆಂಚಿ, ಅಶೋಕ ಕಾಟಿ, ಕುಮಾರ ಹಡಪದ, ಮಂಜುನಾಥ ಅಬ್ಬಿಹಾಳಮಠ,ಪರಶುರಾಮ ತಳವಾರ ಸಂಗಪ್ಪ ಜಾವುರ, ರೇವಣ್ಣಪ್ಪ ತಳವಾರ ಮೊದಲಾದವರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.