ಭಾರೀ ಬಿರುಗಾಳಿ,ಮಳೆಗೆ ಉರುಳಿ ಬಿದ್ದ ವಿದ್ಯುತ್ ಕಂಬಗಳು : ಶಿರೋಳದಲ್ಲಿ ಒಬ್ಬನಿಗೆ ಗಾಯ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಮುದ್ದೇಬಿಹಾಳ : ಭಾರೀ ಬಿರುಗಾಳಿ, ಮಳೆಗೆ ೧೪ ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವ ಘಟನೆ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿ ಶನಿವಾರ ನಡೆದಿದೆ.
ಶಿರೋಳದಲ್ಲಿ ಮದ್ಯಾಹ್ನದ ಹೊತ್ತಲ್ಲಿ ಏಕಾಏಕಿ ಬಿರುಗಾಳಿ ಬೀಸಲು ಆರಂಭಿಸಿದಾಗ ಗ್ರಾಮದ ಶುದ್ಧ ಕುಡಿವ ನೀರಿನ ಘಟಕದ ಬಳಿ ಇದ್ದ ಗಿಡವೊಂದು ಕಂಬದ ಮೇಲೆ ಬಿದ್ದಿದೆ.ಈ ವೇಳೆ ಒಂದರ ಹಿಂದೆ ಕಂಬಗಳು ಉರುಳಿ ಬಿದ್ದಿವೆ.ಗ್ರಾಮದ ಹನುಮಾನ ದೇವಸ್ಥಾನದ ಬಳಿ ಇದ್ದ ಗ್ರಾಮದ ನಿವಾಸಿ ಇಬ್ರಾಹಿಂ ತಮದಡ್ಡಿ(೩೬) ಮೇಲೂ ವಿದ್ಯುತ್ ಕಂಬ ಬಿದ್ದು ಆತ ಗಾಯಗೊಂಡಿದ್ದು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಅವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಹೆಸ್ಕಾಂ ಎಇಇ ಆರ್.ಎನ್.ಹಾದಿಮನಿ, ಭಾರೀ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು ಅವುಗಳನ್ನು ಬದಲಿಸಿ ಜೋಡಿಸಲು ಸಮಯ ಬೇಕಾಗುತ್ತದೆ.ಮೊಹರಂ ಹಬ್ಬದ ಸಮಯದ ವೇಳೆ ಕೆಲಸಗಾರರು ಸಿಗುತ್ತಿಲ್ಲ.ಆದಷ್ಟು ಬೇಗನೇ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು.