ತಳವಾರ ಸಮಾಜದಿಂದ ತಹಶೀಲ್ದಾರ ಕಛೇರಿ ಮುಂದೆ ಪ್ರತಿಭಟನೆ

Jun 20, 2025 - 23:12
Jun 21, 2025 - 08:53
 0
ತಳವಾರ ಸಮಾಜದಿಂದ ತಹಶೀಲ್ದಾರ ಕಛೇರಿ ಮುಂದೆ ಪ್ರತಿಭಟನೆ

ಆಲಮೇಲ: ತಳವಾರ ಸಮಾಜದ ಎಸ್‌ಟಿ ಜಾತಿ ಪ್ರಮಾಣ ಪತ್ರವನ್ನು ನೀಡದಿರುವದನ್ನು ಖಂಡಿಸಿ ತಹಶೀಲ್ದಾರ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರಗೆ ಮನವಿ ಸಲ್ಲಿಸಿದರು.          

 ಮುಖಂಡರಾದ ಪ್ರಭು ವಾಲಿಕಾರ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾದ ಗೇಜೆಟ ಆದೇಶದಂತೆ ತಳವಾರ ಸಮಾಜಕ್ಕೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆಲಮೇಲ ತಾಲೂಕಿನಲ್ಲಿ ಸರ್ಕಾರದ ಆದೇಶದ ಬಳಿಕ ತಳವಾರ ಸಮಾಜದ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡಿದ್ದು ಸದ್ಯ ತಡೆ ಹಿಡದಿರುವದು ಖಂಡನಿಯ ಎಂದರು.                

ರಾಜ್ಯದ ಎಲ್ಲೆಡೆ ತಳವಾರ ಸಮಾಜಕ್ಕೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡುತಿದ್ದು ಅದೆ ರೀತಿ ನಮ್ಮ ಮತ ಕ್ಷೇತ್ರದ  ಸಿಂದಗಿ ತಾಲೂಕು ಸೇರಿದಂತೆ ದೇವರ ಹಿಪ್ಪರಗಿ, ಇಂಡಿ ತಾಲೂಕಿನಲ್ಲಿ ನೀಡಲಾಗುತ್ತಿದೆ ಆದರೆ ಆಲಮೇಲ ತಾಲೂಕಿನ ತಹಶೀಲ್ದಾರರು ಯಾವುದೆ ಸರ್ಕಾರದ ಆದೇಶವಿಲ್ಲದೆ ಹಳೆಯ ಸೂತ್ತೋಲೆ ಪರಿಗಣಿಸಿ ಕಾನೂನು ಬಾಹಿರವಾಗಿ ತಡೆ ಹಿಡಿದಿದ್ದಾರೆ.            

ಈ ನಿರ್ಧಾರವನ್ನು ತಕ್ಷಣವೆ ತಹಶೀಲ್ದಾರರು ಮರು ಪರಿಶೀಲಿಸಿ ತಳವಾರ ಸಮಾಜಕ್ಕೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡಬೇಕು ಸೋಮವಾರದವರೆಗೂ ಕಾದು ನೋಡುತ್ತವೆ ಅಲ್ಲಿವರೆಗೂ ನೀಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.            

ಈ ವೇಳೆಯಲ್ಲಿ ತಳವಾರ ಸಮಾಜದ ರಾಜ್ಯ ಅಧ್ಯಕ್ಷ ಶಿವಾಜಿ ಮೇಟಗಾರ, ತಾಲೂಕು ಅಧ್ಯಕ್ಷ ಗಾಲಿಬ ತಳವಾರ, ಚನ್ನು ಗುರಕಾರ, ಸಿದ್ದು ಹಾವಳಗಿ, ಭಾಗಣ್ಣ ಗುರಕಾರ, ಅಮರ ತಳವಾರ, ಸುನೀಲ ತಳವಾರ, ಸುರೇಶ ಬೋರನಾಯಕ, ನಾಗಪ್ಪ ತಳವಾರ, ಗಣೇಶ ತಳವಾರ, ಶಿವಾನಂದ ತಳವಾರ, ಗಾಲಿಬ ತಳವಾರ ಮುಂತಾದವರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.