ತಾಳಿಕೋಟೆಯಲ್ಲಿ ಶ್ರೀ ಶಿರಡಿ ಸಾಯಿಬಾಬಾ ಗುರುನಮನ ಕಾರ್ಯಕ್ರಮ

Jun 20, 2025 - 12:35
 0
ತಾಳಿಕೋಟೆಯಲ್ಲಿ ಶ್ರೀ ಶಿರಡಿ ಸಾಯಿಬಾಬಾ ಗುರುನಮನ ಕಾರ್ಯಕ್ರಮ
ತಾಳಿಕೋಟೆ : ಪಟ್ಟಣದಲ್ಲಿ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ವತಿಯಿಂದ ಗುರುನಮನ ಕಾರ್ಯಕ್ರಮ ಭಕ್ತಿಭಾವದೊಂದಿಗೆ ಜರುಗಿತು.

ತಾಳಿಕೋಟೆ : ಸ್ಥಳೀಯ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ನಿ.ವತಿಯಿಂದ ಶ್ರೀ ನಿಮಿಷಾಂಭಾದೇವಿ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಗುರುನಮನ ಕಾರ್ಯಕ್ರಮವನ್ನು ಗುರುವಾರರಂದು ಏರ್ಪಡಿಸಲಾಗಿತ್ತು.
        ಕಾರ್ಯಕ್ರಮ ನಿಮಿತ್ಯವಾಗಿ ಶ್ರೀ ಸಾಯಿಬಾಬಾರವರ ಉತ್ಸವ ಮೂರ್ತಿಗೆ ರುಧ್ರಾಭಿಷೇಕ ,ಬಿಲ್ವಾರ್ಚನೆ,ಅಲಂಕಾರ ಪೂಜೆಯನ್ನು  ಶ್ರೀ ಸತೀಶ ದಪ್ತೆದಾರವರು ನೇರವೆರಿಸಿದರು. ಉಪಸ್ಥಿತ ಸುಮಂಗಲೇಯರಿAದ ಮಹಾಮಂಗಳಾರತಿ ಕಾರ್ಯಕ್ರಮ ಜರುಗಿತು.
       ಈ ಸಮಯದಲ್ಲಿ ಮಾತನಾಡಿದ ಶ್ರೀ ಅನ್ನಪೂರ್ಣೆಶ್ವರಿ ಭಜನಾ ಮಂಡಳಿಯ ವ್ಯವಸ್ಥಾಪಕರಾದ ಆನಂದ ಕುಲಕರ್ಣಿ ಅವರು ಶ್ರೀ ಸಾಯಿಬಾಬಾರವರ ಇಂದಿನ ಗುರುವಂದನ ಕಾರ್ಯಕ್ರಮವು ಏರ್ಪಡಿಸಿರುವುದು ಅತೀವ ಸಂತಸ ತಂದಿದೆ ಈ ಕಾರ್ಯಕ್ರಮ ತಾಳಿಕೋಟೆಯಲ್ಲಿ ಅಷ್ಟೇ ಅಲ್ಲ ಶಿರಡಿ ಈ ಪುಣ್ಯಕ್ಷೇತ್ರಲ್ಲಿಯೂ ಹಾಗೂ ಸಾಯಿಬಾರವರ ವಿವಿಧ ಗ್ರಾಮ ಪಟ್ಟಣದಲ್ಲಿಯ ಮಂದಿರದಲ್ಲಿ ಈ ಪೂಜಾ ಕಾರ್ಯಕ್ರಮ ನಡೆದಿದೆ ಈ ಕಾರ್ಯಕ್ರಮದಲ್ಲಿ ವಿವಿಧೆಡೆ ಪಲ್ಲಕ್ಕಿ ಉತ್ಸವದೊಂದಿಗೆ ಪಲ್ಲಕಿಯ ಮಹಾಪೂಜೆಯನ್ನು ನೇರವೆರಿಸಲಾಗುತ್ತದೆ ಯಾಕೆಂದರೆ ಶ್ರೀ ಸಿರಡಿ ಸಾಯಿಬಾಬಾರವರ ಭಕ್ತರಿಗೆ ಪ್ರತ್ಯಕ್ಷರಾಗಿ ಅವರ ಬೇಕು ಬೇಡಿಕೆಗಳನ್ನು ಇಡೇರಿಸಿದಕ್ಕೆ ಈ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಸಾಗಿಬರಲಾಗಿದೆ. ಈ ದಿನದಂದು ಸಾಯಿಬಾಬಾರವರನ್ನು ಗುರುವಾಗಿ ಪೂಜಿಸಲಾಗುತ್ತದೆ ಮತ್ತು ಅವರ ಬೊದನೆಗಳನ್ನು ನೆನಪಿಸಿಕೊಳ್ಳಲಾಗುತ್ತದೆ ಎಂದರು.
         ಗುರುಗಳಾದ ವೇ. ಗುಂಡುಭಟ್ಟಜೋಷಿ , ವೇ ಸಂಜೀವ ಗ್ರಾಂಪೂರೋಹಿತ ಅವರು ಭಕ್ತಿಯ ಗೀತೆಗಳನ್ನು ಹಾಡಿ ಭಕ್ತರ ಮನ ರಂಜಿಸಿದರು.
        ಈ ಸಮಯದಲ್ಲಿ  ವೇ.ಯಲಗುರೇಶ, ವೇ.ಚಬನೂರ ಜೋಷಿ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟೆಸ್ಟ ಗೌರವಾಧ್ಯಕ್ಷರಾದ ಡಾ ಎನ.ಎಲ್.ಶೆಟ್ಟಿ ಉಪಾಧ್ಯಕ್ಷ ಎಂ.ಜಿ.ಪಾಟೀಲ, ಕಾರ್ಯದರ್ಶಿ ಸಿ.ಬಿ.ತಿಳಗೋಳ ಹಾಗೂ ಸತೀಶ ದಪ್ತೆದಾರ, ಬಸೌನಗೌಡ ಮಾಲಿಪಾಟೀಲ, ಅಮೋಘ ಕುಲಕರ್ಣಿ ,ಶಿಕ್ಷಕ ರಾಘವೇಂದ್ರ ಕುಲಕರ್ಣೀ, ಜಿ.ಟಿ.ಘೋರ್ಪಡೆ, ಕಾಶಿನಾಥ ಪಾಟೀಲ,ಬೀಮನಗೌಡ ಹರನಾಳ, ದತ್ತು ಪಾಟೀಲ, ಮುರಳಿದರ ಮಾನವಿ, ಗ್ಯಾನೊಬ ರಂಗಸುಭೆ, ಸುಧಾ ನಿಡಗುಂದಿ, ಅನುಶ್ರೀ ಕುಲಕರ್ಣಿ, ಬೇಬಿ ಯಾಳಗಿ, ದಾನಮ್ಮ ಆಲಿಮಟ್ಟಿ, ಉಭಾಳೆ ಬಾಯಿ, ಶ್ರೀಮತಿ ಅಂಬಿಗೇರ, ಸುರೇಖಾ ಹಂಚಾಟೆ, ಮೊದಲಾದವರು ಪಾಲ್ಗೊಂಡು ಮಹಾ ಪ್ರಸಾದ ಸೇವಿಸಿ ಭಕ್ತಿಭಾವ ಮೆರೆದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.