ವಿದ್ಯಾರ್ಥಿಗಳಿಗೆ ಮಲೇರಿಯಾ ಅರಿವು ಕಾರ್ಯಕ್ರಮ

Jul 13, 2025 - 10:42
 0
ವಿದ್ಯಾರ್ಥಿಗಳಿಗೆ ಮಲೇರಿಯಾ ಅರಿವು ಕಾರ್ಯಕ್ರಮ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ವಿಜಯಪುರ : ಮಲೇರಿಯಾ ರೋಗವು ರೋಗವಾಹಕ ಅನಾಫಿಲಿಸ್ ಸೊಳ್ಳೆಗಳಿಂದ ಹರಡುವ ಒಂದು ಪ್ರಮುಖ ಸಾಂಕ್ರಾಮಿಕ ರೋಗವಾಗಿದೆ ಎಂದು ಮುಖ್ಯ ಶಿಕ್ಷಕವಿ ಬಿ ಸೂರ್ಯವಂಶಿ  ತಿಳಿಸಿದರು. 

ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಹಡಗಲಿ ತಾಂಡಾ ನಂಬರ್ ಮೂರರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ "ಮಲೇರಿಯಾ ಮತ್ತು ಡೆಂಗ್ಯೂ ರೋಗದ ಅರಿವು " ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದವರು ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ, ಮೆದುಳು ಜ್ವರ, ಹೀಗೆ ಅನೇಕ ರೋಗಗಳ ಹರಡಲು ಸೊಳ್ಳೆಗಳೇ ಕಾರಣ, ಮಲೇರಿಯಾ ರೋಗವು ಪ್ಲಾಸ್ಮೊಡಿಯಂ ಎಂಬ ಪರಾವಲಂಬಿ ಸೂಕ್ಷ್ಮಾಣುವಿನಿಂದ ಉಂಟಾಗುತ್ತದೆ ಮತ್ತು ಸೋಂಕು ಹೊಂದಿದ ಹೆಣ್ಣು ಅನಾಪೇಲಿಸ್ ಸೊಳ್ಳೆಗಳು  ಮಲೇರಿಯಾ ರೋಗವನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡಿಸುತ್ತವೆ. ಆದ್ದರಿಂದ ಸೊಳ್ಳೆಗಳ ಉತ್ಪತ್ತಿ ಮತ್ತು ನಿಯಂತ್ರಣ ಬಹಳ ಮುಖ್ಯವಾಗಿದೆ ಎಂದರು. 

ನಂತರ ಮಾತನಾಡಿದ ಆರೋಗ್ಯ ನಿರೀಕ್ಷಣಾಧಿಕಾರಿ ರಾಮನಗೌಡ ಪಾಟೀಲ್  ಮಲೇರಿಯಾ ಪ್ಲಾಸ್ಮೊಡಿಯಂ ಪರಾವಲಂಬಿಗಳಲ್ಲಿ ನಾಲ್ಕು ಪ್ರಭೇದಗಳಿವೆ. ಕರ್ನಾಟಕ ರಾಜ್ಯದಲ್ಲಿ, ಪ್ಲಾಸ್ಮೊಡಿಯಂ ವೈವಾಕ್ಸ್(ಪಿವಿ) ಮತ್ತು ಪ್ಲಾಸ್ಮೊಡಿಯಂ ಪಾಲ್ಸಿಫಾರಂ(ಪಿ ಎಫ್ ) ಎಂಬ ಎರಡು ಪ್ರಭೇದಗಳು ಕಂಡುಬರುತ್ತವೆ, ಚಳಿ ಜ್ವರ ಜೊತೆ ನಡುಕ,ತಲೆನೋವು,ವಾಕರಿಕೆ ವಿಪರೀತ ಬಾಯಾರಿಕೆ,  ಇವು ಮಲೇರಿಯಾ ರೋಗದ ಲಕ್ಷಣಗಳಾಗಿದ್ದು, ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು ಯಾವುದೇ ಜ್ವರ ಇರಲಿ ರಕ್ತಪರೀಕ್ಷೆ ಮಾಡಿಕೊಂಡರೆ ರೋಗವು ತ್ವರಿತ ಪತ್ತೆಯಾಗಿ ಸಂಪೂರ್ಣ ಚಿಕಿತ್ಸೆಯಿಂದ ರೋಗವು ಉಲ್ಬಣವಾಗದಂತೆ ನಿಯಂತ್ರಿಸಬಹುದು, ಈ ಶಾಲೆಯ ಎಲ್ಲಾ ವಿದ್ಯಾರ್ಥಿ /ವಿದ್ಯಾರ್ಥಿನಿಯರು ತಮ್ಮ ತಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದ ಹಾಗೆ  ಸೊಳ್ಳೆಗಳು ಬೆಳೆಯುವುದಕ್ಕೆ ಆಸ್ಪದ ಕೊಡಬಾರದು, ಮನೆಯಲ್ಲಿನ ನೀರು ಸಂಗ್ರಹ ವಸ್ತುಗಳನ್ನು ವಾರಕ್ಕೆ ಒಮ್ಮೆಯಾದರೂ ಪೂರ್ತಿಯಾಗಿ ಕಾಲಿ ಮಾಡಿ ಒರೆಸಿ, ಒಣಗಿಸಿ ಮತ್ತೆ ನೀರು ಸಂಗ್ರಹಿಸಿದಾಗ ಭದ್ರವಾಗಿ ಮೇಲೆ ಮುಚ್ಚಬೇಕು,  ನಿಂತ ನೀರು, ಕೆರೆ, ಬಾವಿ, ತೋಟದ ಬಾವಿಗಳಲ್ಲಿ, ಲಾರ್ವಾಹಾರಿ ಮೀನು ಮರಿಗಳನ್ನು ಬಿಡುವುದರ ಮುಖಾಂತರ ಸೊಳ್ಳೆಗಳ ಉತ್ಪತ್ತಿ ಮತ್ತು ಸೊಳ್ಳೆಗಳ ಬೆಳವಣಿಗೆಯನ್ನು ನಿಯಂತ್ರಿಸಬಹುದು ಜೊತೆಗೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಮತ್ತು ಸಮೀಪದ ಎಲ್ಲ ಸರಕಾರಿ  ಆಸ್ಪತ್ರೆಗಳಲ್ಲಿ  ರಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ ಎಂದರು. 

ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಿಬ್ಬಂದಿಯವರಾದ  ಲಕ್ಷ್ಮಿ ಅಗಸಿಬಾಗಿಲ  ಎ ಟಿ ಸೂರ್ಯವಂಶಿ  ಶಾಲೆಯ ಸಹ ಶಿಕ್ಷಕರಾದ  ಎಂ ಎಸ್ ಪೂಜಾರಿ, ಎಸ್ ಎಸ್ ಬಡಿಗೇರ್, ಎನ್ ಹೆಚ್ ರಾಠೋಡ, ಆನಂದ ಹೋನಮಟ್ಟಿ  ಆಶಾ ಕಾರ್ಯಕರ್ತೆಯಾದ ಬೇಬಿಬಾಯಿ ಪವಾರ್,  ಶಾಲೆಯ ಎಲ್ಲ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.