ಭಾವೈಕ್ಯತೆಯ ತಾಣ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ನಾಳೆ ಶ್ರಾವಣ ಸಾಧನ ಸಪ್ತಾಹ ಪ್ರಾರಂಭ

Jul 24, 2025 - 08:17
 0
ಭಾವೈಕ್ಯತೆಯ ತಾಣ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ನಾಳೆ ಶ್ರಾವಣ ಸಾಧನ ಸಪ್ತಾಹ ಪ್ರಾರಂಭ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 


ವಿಜಯಪುರ : ಜಿಲ್ಲೆಯ ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಶ್ರಾವಣ ಮಾಸದ ಸಾಧನ ಸಪ್ತಾಹವು ಶ್ರಾವಣ ಶುದ್ದ ಪ್ರತಿಪದ ನಾಳೆ ಶುಕ್ರವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಶ್ರೀ ಕ್ಷೇತ್ರ ಇಂಚಗೇರಿ ಮಠದ ಸದ್ಗುರುಗಳಾದ ಪೂಜ್ಯ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋದ ಹಾಗೂ  ಗದ್ದುಗೆಗಳ ಪೂಜೆಯೊಂದಿಗೆ ಪ್ರಾರಂಭಗೊಳ್ಳುವದು.         

ಶ್ರಾವಣ ಬಹುಳ ದ್ವಾದಶಿ ಬುಧವಾರ ೨೦ ಆಗಷ್ಟ ೨೦೨೫ ರಂದು ಪುಷ್ಪ ವೃಷ್ಠಿ ಯೊಂದಿಗೆ ಮಂಗಲಗೊಳ್ಳುವದು.                

ತಿಂಗಳ ಪರ್ಯಂತ ಜರಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಕಾಕಡಾರತಿ ನಂತರ ಹನ್ನೊಂದು ಗಂಟೆಯವರೆಗೆ ಧ್ಯಾನ ನಂತರ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರಿಂದ ಹಾಗೂ ವಿವಿಧಡೆಯಿಂದ ಆಗಮಿಸಿದ ಮಹಾತ್ಮರಿಂದ ಪುರಾಣ.  ಪ್ರವಚನ ಮಧ್ಯಾಹ್ನದ ಭಜನೆ ನಂತರ ಪ್ರಸಾದ ಸಾಯಂಕಾಲ ಐದು ಗಂಟೆಯವರೆಗೆ ಶ್ರಮದಾನ. ವಿಶ್ರಾಂತಿ. ಸಾಯಂಕಾಲ ಐದು ಗಂಟೆಗೆ ಭಜನೆ ಪುರಾಣ ಪ್ರವಚನ ನಂತರ ರಾತ್ರಿ ಎಂಟು ಗಂಟೆಗೆ ಶ್ರೀ ಸಂತ ತುಕಾರಾಮ ಮಹಾರಾಜರ ಬಾರಾ ಅಭಂಗ ಭಜನೆ ನಂತರ ಪ್ರಸಾದದೊಂದಿಗೆ ದಿನಚರಿ ಮುಗಿಯುವದು.             

ಶುಕ್ರವಾರ ೧೫ ಆಗಷ್ಟ ೨೦೨೫ ರಂದು ಶ್ರೀಕೃಷ್ಣಾಷ್ಠಮಿ ನಿಮಿತ್ಯ ಶ್ರೀಕೃಷ್ಣ ತೊಟ್ಟಿಲೋತ್ಸವ ಕಾರ್ಯಕ್ರಮ ಜರಗುವದು.            

ಅತ್ಯಂತ ವೈಶಿಷ್ಟ್ಯವಾಗಿ ಜರಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿ ದಿನ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದ. ಶ್ರೀ ಸಂತ ವಿನೋಬಾ ಭಾವೆ ಅವರ ಗೀತಾ ಪ್ರವಚನ. ಶರಣ ಶರಣೆಯರಿಂದ ಭಕ್ತಿ ಸಂಗೀತ. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವವು ಈ ಸರ್ವ ಕಾರ್ಯಕ್ರಮಗಳು ಪೂಜ್ಯ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಜರಗುವವು.             

ಅತ್ಯಂತ ವಿಜೃಂಭಣೆಯಿAದ ಜರಗುವ ಈ ಶ್ರಾವಣ ಸಾಧನ ಸಪ್ತಾಹಕ್ಕೆ ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸದ್ಗುರುಗಳ ಕೃಪೆಗೆ ಪಾತ್ರರಾಗಿ ಎಂದು ಶ್ರೀಮಠದ ಶಿಷ್ಯ ಭಾರತೇಶ ಹಾಸೀಲಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.