ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಇಂಡಿ : ಬ್ಯಾಂಕಿನ ಸಾಲ ಪ್ರಕರಣಗಳು ಸೇರಿದಂತೆ ಒಟ್ಟು ಒಂದು ಕೋಟಿ ೯೨ ಲಕ್ಷ ರೂ ವಸೂಲಾತಿಯಾಗಿದೆ. ಇದೇ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ವಸೂಲಾತಿಯಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಕೊಟಪ್ಪ ಕಾಂಬಳೆ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮೆಗಾ ಲೋಕ ಅದಾಲತ್ ಕಾರ್ಯಕ್ರಮದ ನಂತರ ಮಾತನಾಡಿದ ಅವರು ಲೋಕ ಅದಾಲತ್‌ನಲ್ಲಿ ೪೬೦೯ ಪ್ರಕರಣಗಳು ಇತ್ಯರ್ಥ ಗೊಂಡಿವೆ. ಕಳೆದ ಬಾರಿ ನಡೆದ ಲೋಕ ಅದಾಲತ್‌ನಲ್ಲಿ ೨೬೦೫ ಪ್ರಕರಣಗಳು ಇತ್ಯರ್ಥ ಗೊಂಡಿದ್ದವು. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸಿದೆ ಎಂದು ಕಾಂಬಳೆ ತಿಳಿಸಿದರು.
ಕ್ರಿಮಿನಲ್ ಪ್ರಕರಣಗಳು, ಕುಡಿದು ವಾಹನ ನಡೆಸಿದ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಶಾಂತತೆ ಭಂಗ ಉಂಟು ಮಾಡಿದ್ದು, ಅಪಘಾತ ಪ್ರಕರಣ, ಸಿವಿಲ್ ಪಾಲು, ವಾಟ್ನಿ ದಾವೆ, ನಿರ್ಭಂದಕಾಜ್ಞೆ ದಾವೆ, ವಾಹನ ಅಪಘಾತ ಪರಿಹಾರ ದಂತಹ ಪ್ರಕರಣ ಇತ್ಯರ್ಥ ಪಡಿಸಿದೆ ಎಂದು ಕಾಂಬಳೆ ತಿಳಿಸಿದರು.
ಈ ಸಂದರ್ಭದಲ್ಲಿ ಕಿರಿಯ ಶ್ರೇಣಿ ನ್ಯಾಯಾಧೀಶ ಸುನೀಲಕುಮಾರ ಎಂ.ಎಸ್. ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಧೀಶ ವಿಕಾಸ ದಳವಾಯಿ ನ್ಯಾಯವಾದಿಗಳಾದ ರಮೇಶ ಕಾಂತ, ಎಸ್.ವಿ.ಕುಲಕರ್ಣಿ, ಎಸ್.ಆರ್. ಬಿರಾದಾರ, ಎಸ್.ಕೆ.ತಮಶೆಟ್ಟಿ, ಕುಮಾರಿ ಡಿ.ವೈ ಮೆಡೆಗಾರ, ಶ್ರೀಮತಿ ಎಸ್.ಬಿ.ಪಾಟೀಲ, ಕುಮಾರಿ ಜೆ.ಎಸ್.ಮನವಿ, ಕುಮಾರಿ ಎ.ಜಿ. ಗಾಯಕವಾಡ ಎಸ್.ಎಲ್.ನಿಂಬರಗಿಮಠ, ಸುನೀಲ ಕುಲಕರ್ಣಿ, ಬಿ.ಬಿ.ಬಿರಾದಾರ, ಬಿ.ಸಿ.ತಾಂಬೆ, ಎಸ್.ಜಿ.ಹತ್ತರಕಿ, ಕೆ.ಪಿ.ಭೈರಜಿ, ಎಸ್.ಎಸ್.ರೆಬಿನಾಳ, ಎಸ್.ಎಲ್.ಬಟಗಿ, ಪ್ರವೀಣ ಕಾಂಬಳೆ, ಮತ್ತು ಸಿದ್ದು ಹಾವಳಗಿ ಸೇರಿದಂತೆ ಮತ್ತಿತರಿದ್ದರು.